
ಬೆಂಗಳೂರು, 23 ಆಗಸ್ಟ್ (ಹಿ.ಸ.)
ಆ್ಯಂಕರ್:
ರಾಜಧಾನಿಯ ಸೌಂದರ್ಯೀಕರಣ ಹಾಗೂ ವಿದ್ಯುತ್ ಮೂಲಸೌಕರ್ಯಗಳ ಸುಸ್ಥಿತಿಗೆ ಒತ್ತು ನೀಡಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ), ‘ಸ್ವಚ್ಛ ಬೆಂಗಳೂರು’ ಅಭಿಯಾನದಡಿ ವಾರಾಂತ್ಯದಲ್ಲಿ ವಿಶೇಷ ಸ್ವಚ್ಛತಾ ಹಾಗೂ ಸುರಕ್ಷತಾ ಅಭಿಯಾನ ನಡೆಸಿತು.
ಶನಿವಾರ ರಾತ್ರಿ ಆರಂಭವಾದ ಅಭಿಯಾನ ಭಾನುವಾರ ಸಂಜೆಯವರೆಗೆ ನಗರದ ವಿವಿಧೆಡೆ ಮುಂದುವರಿಯಿತು. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ, ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.
ಸಾರ್ವಜನಿಕ ಸ್ಥಳಗಳಲ್ಲಿನ ವಿದ್ಯುತ್ ಕಂಬಗಳು, ಪರಿವರ್ತಕಗಳ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸುವುದು, ಅಪಾಯಕಾರಿ ವಿದ್ಯುತ್ ಉಪಕರಣಗಳನ್ನು ದುರಸ್ತಿಪಡಿಸುವುದು ಹಾಗೂ ಜಿಎಸ್ ಕಾರ್ಯಾಚರಣಾ ಕಂಬಗಳ ಪರಿಶೀಲನೆ ಮತ್ತು ಅಗತ್ಯ ಮಾರ್ಪಾಡುಗಳನ್ನು ಕೈಗೊಳ್ಳಲಾಯಿತು.
“ಬೆಂಗಳೂರು ನಗರವನ್ನು ಸ್ವಚ್ಛ ಹಾಗೂ ವಿದ್ಯುತ್ ಸುರಕ್ಷಿತ ನಗರವನ್ನಾಗಿ ಮಾಡಲು ಬೆಸ್ಕಾಂ ಬದ್ಧವಾಗಿದೆ. ವಾರಾಂತ್ಯದ ವಿಶೇಷ ಅಭಿಯಾನವು ವಿದ್ಯುತ್ ಜಾಲದ ಸುಸ್ಥಿತಿ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಸಹಕಾರಿಯಾಗಲಿದೆ” ಎಂದು ಡಾ. ಎನ್. ಶಿವಶಂಕರ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R