ಸಹಕಾರ ಸಂಘಗಳ ನೋದಣಿ ರದ್ದತಿ:ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ
ಧಾರವಾಡ, 05 ಆಗಸ್ಟ್ (ಹಿ.ಸ.): ಆ್ಯಂಕರ್: ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಾಯ್ದೆಯಡಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ನೋಂದಣಿಯಾದ ಸಹಕಾರ ಸಂಘಗಳನ್ನು ಈಗಾಗಲೇ ಕಲಂ 72(2) ರನ್ವಯ ಸಮಾಪನೆಗೊಳಿಸಲಾಗಿದೆ. ತಾಲೂಕು ಮಟ್ಟಕ್ಕಿಂತ ಕಡಿಮೆ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಸಮಾಪನೆಗೊಂಡ ಸಹಕಾರ ಸಂಘಗಳ
ಸಹಕಾರ ಸಂಘಗಳ ನೋದಣಿ ರದ್ದತಿ:ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ


ಧಾರವಾಡ, 05 ಆಗಸ್ಟ್ (ಹಿ.ಸ.):

ಆ್ಯಂಕರ್:

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಾಯ್ದೆಯಡಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ನೋಂದಣಿಯಾದ ಸಹಕಾರ ಸಂಘಗಳನ್ನು ಈಗಾಗಲೇ ಕಲಂ 72(2) ರನ್ವಯ ಸಮಾಪನೆಗೊಳಿಸಲಾಗಿದೆ. ತಾಲೂಕು ಮಟ್ಟಕ್ಕಿಂತ ಕಡಿಮೆ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಸಮಾಪನೆಗೊಂಡ ಸಹಕಾರ ಸಂಘಗಳನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 75 ರಡಿಯಲ್ಲಿ ನೋಂದಣಿ ರದ್ದತಿಗೊಳಿಸುವ ಮುಂಚೆ ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ನೀಡಿ ನೋಟಿಸ್ಸು ನೀಡಲಾಗಿದೆ. ಆಕ್ಷೇಪಣೆಗಳಿದ್ದಲ್ಲಿ ಕಚೇರಿಗಳಿಗೆ ಹಾಜರಾಗಿ ತಮ್ಮ ಲಿಖಿತ ಹೇಳಿಕೆ ಹಾಗೂ ಸಂಬಂಧಿಸಿದಂತೆ ದಾಖಲಾತಿಗಳನ್ನು ಸಂಬಂಧಪಟ್ಟ ಸಮಾಪನಾಧಿಕಾರಿಗಳಿಗೆ ಹಾಜರುಪಡಿಸಬೇಕು.

ಒಂದು ವೇಳೆ ಆಕ್ಷೇಪಣೆಗಳು ಅಥವಾ ನಿಖರವಾದ ದಾಖಲಾತಿಗಳನ್ನು ಹಾಜರುಪಡಿಸದೇ ಇದ್ದ ಪಕ್ಷದಲ್ಲ್ಲಿ ಲಭ್ಯವಿದ್ದ ದಾಖಲಾತಿಗಳ ಆಧಾರದ ಮೇಲೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 74 ಮತ್ತು 75ರ ಮೇರೆಗೆ ಸಹಕಾರ ಸಂಘಗಳ ನೊಂದಣಿ ರದ್ದತಿಗೆ ಕ್ರಮವಹಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0836-2448634 ಅಥವಾ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ, ಎಂ. ಡಿ. ಪತ್ರಾವಳಿ ಕಟ್ಟಡ, ರೈಲ್ವೆ ಸ್ಟೇಶನ್ ಹತ್ತಿರ, ಮಾಳಮಡ್ಡಿ ಧಾರವಾಡ ಇಲ್ಲಿಗೆ ಭೇಟಿ ನೀಡಬಹುದು ಎಂದು ಸಹಕಾರ ಸಂಘಗಳ ಉಪನಿಬಂಧಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande