ದೇಶದ ಬಹುತೇಕ ಮಾರುಕಟ್ಟೆಗಳಲ್ಲಿ ಚಿನ್ನದ ದರ ಸ್ಥಿರ, ಚೆನ್ನೈನಲ್ಲಿ ಏರಿಕೆ
ನವದೆಹಲಿ, 04 ಆಗಸ್ಟ್ (ಹಿ.ಸ.): ಆ್ಯಂಕರ್:ದೇಶದ ಬಹುತೇಕ ಮಾರುಕಟ್ಟೆಗಳಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿಯ ದರಗಳು ಸ್ಥಿರವಾಗಿದ್ದವು. ಆದರೆ ಚೆನ್ನೈನಲ್ಲಿ ಮಾತ್ರ 10 ಗ್ರಾಂ ಚಿನ್ನದ ದರ ₹320 ರಿಂದ ₹350ರವರೆಗೆ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ದೇಶದ ವಿವಿಧ ಮಾರುಕಟ್ಟೆಗಳಲ್ಲಿ 10 ಗ
प्रतीकात्मक


ನವದೆಹಲಿ, 04 ಆಗಸ್ಟ್ (ಹಿ.ಸ.):

ಆ್ಯಂಕರ್:ದೇಶದ ಬಹುತೇಕ ಮಾರುಕಟ್ಟೆಗಳಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿಯ ದರಗಳು ಸ್ಥಿರವಾಗಿದ್ದವು. ಆದರೆ ಚೆನ್ನೈನಲ್ಲಿ ಮಾತ್ರ 10 ಗ್ರಾಂ ಚಿನ್ನದ ದರ ₹320 ರಿಂದ ₹350ರವರೆಗೆ ಏರಿಕೆಯಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ ದೇಶದ ವಿವಿಧ ಮಾರುಕಟ್ಟೆಗಳಲ್ಲಿ 10 ಗ್ರಾಂಗೆ ₹1,44,210 ರಿಂದ ₹1,44,560ರ ನಡುವೆ ಹಾಗೂ 22 ಕ್ಯಾರೆಟ್ ಚಿನ್ನ ₹1,32,190 ರಿಂದ ₹1,32,510ರ ನಡುವೆ ವಹಿವಾಟು ನಡೆಸುತ್ತಿದೆ. ಬೆಳ್ಳಿಯ ಬೆಲೆ ದೆಹಲಿಯಲ್ಲಿ ಪ್ರತಿ ಕೆ.ಜಿ.ಗೆ ₹2,34,900ರಲ್ಲೇ ಸ್ಥಿರವಾಗಿದೆ.

ದೆಹಲಿ, ಮುಂಬೈ, ಅಹಮದಾಬಾದ್, ಕೊಲ್ಕತ್ತಾ, ಭೋಪಾಲ್, ಜೈಪುರ, ಪಟ್ನಾ ಮತ್ತು ಲಖನೌ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಕರ್ನಾಟಕ, ತೆಲಂಗಾಣ ಹಾಗೂ ಒಡಿಶಾದ ರಾಜಧಾನಿಗಳಾದ ಬೆಂಗಳೂರು, ಹೈದರಾಬಾದ್ ಮತ್ತು ಭುವನೇಶ್ವರದಲ್ಲೂ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ ₹1,44,210 ಹಾಗೂ 22 ಕ್ಯಾರೆಟ್ ಚಿನ್ನ ₹1,32,190ಕ್ಕೆ ವಹಿವಾಟಾಗುತ್ತಿದೆ. ಚೆನ್ನೈನಲ್ಲಿ ಮಾತ್ರ ಚಿನ್ನದ ದರ ಏರಿಕೆ ದಾಖಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande