ಹಿಂದೂ ಜಾಗೃತನಾದರೆ ಜಗತ್ತೇ ಜಾಗೃತವಾಗುತ್ತದೆ:ಕೆನಡಾದಲ್ಲಿ ಡಾ.ಮೋಹನ್ ಭಾಗವತ್
ಟೊರೊಂಟೊ (ಕೆನಡಾ), 31ಆಗಸ್ಟ್ (ಹಿ.ಸ.): ಆ್ಯಂಕರ್: ಭಾರತದ ಮೂಲ ಸಂಸ್ಕೃತಿಯು ಜಗತ್ತಿನ ಒಳಿತಿಗಾಗಿ ಕೆಲಸ ಮಾಡುವುದು ಹಾಗೂ ಏಕತೆಯಲ್ಲಿ ನಂಬಿಕೆ ಇಡುವುದಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು. ಕೆನಡಾದ ಟೊರೊಂಟೊದಲ್ಲಿ ಆಯೋಜಿಸಿದ್ದ ‘ಹಿಂದೂ ವಿಶ್ವ ಬ
कनाडा के टोरंटो में राष्ट्रीय स्वयंसेवक संघ के सरसंघचालक डॉ. मोहन भागवतः फोटो - @ आरएसएस


ಟೊರೊಂಟೊ (ಕೆನಡಾ), 31ಆಗಸ್ಟ್ (ಹಿ.ಸ.):

ಆ್ಯಂಕರ್:

ಭಾರತದ ಮೂಲ ಸಂಸ್ಕೃತಿಯು ಜಗತ್ತಿನ ಒಳಿತಿಗಾಗಿ ಕೆಲಸ ಮಾಡುವುದು ಹಾಗೂ ಏಕತೆಯಲ್ಲಿ ನಂಬಿಕೆ ಇಡುವುದಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದರು.

ಕೆನಡಾದ ಟೊರೊಂಟೊದಲ್ಲಿ ಆಯೋಜಿಸಿದ್ದ ‘ಹಿಂದೂ ವಿಶ್ವ ಬಂಧು–ಸ್ನೇಹದಲ್ಲಿ ಜಗತ್ತನ್ನು ಅಪ್ಪಿಕೊಳ್ಳೋಣ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಪರಂಪರೆಯಲ್ಲಿ ವೈವಿಧ್ಯತೆಯನ್ನು ಏಕತೆಗೆ ವಿರುದ್ಧವಾಗಿ ನೋಡಲಾಗುವುದಿಲ್ಲ. ವೈವಿಧ್ಯತೆಯೇ ಏಕತೆಯ ಸ್ವರೂಪವಾಗಿದೆ ಎಂದರು.

ಜಗತ್ತಿನ ಯಾವುದೇ ಭಾಗದಿಂದ ಭಾರತಕ್ಕೆ ನೆರವು ಕೇಳಿದಾಗ ಭಾರತ ಎಂದಿಗೂ ನಿರಾಕರಿಸಿಲ್ಲ. ಕೇಳದಿದ್ದರೂ ಸಹಾಯದ ಹಸ್ತ ಚಾಚಿರುವುದು ಭಾರತದ ಪರಂಪರೆ ಹಾಗೂ ಸ್ವಭಾವವಾಗಿದೆ. ಇದೇ ಭಾರತದ ಮೂಲ ಗುಣ. ‘ಹಿಂದೂ ಜಾಗೃತನಾದರೆ ಜಗತ್ತೇ ಜಾಗೃತವಾಗುತ್ತದೆ’ ಎಂಬ ಮಾತನ್ನು ಇದೇ ಹಿನ್ನೆಲೆಯಲ್ಲಿ ಹೇಳಲಾಗುತ್ತದೆ ಎಂದು ಅವರು ತಿಳಿಸಿದರು.

ಭಾರತೀಯ ಆಧ್ಯಾತ್ಮಿಕ ಪರಂಪರೆಯು ಮಾನವ ಮತ್ತು ಪ್ರಕೃತಿಯ ನಡುವಿನ ಏಕತೆಯನ್ನು ಪ್ರತಿಪಾದಿಸುತ್ತದೆ. ಸಜೀವ ಮತ್ತು ನಿರ್ಜೀವ ಎಲ್ಲವನ್ನೂ ತನ್ನದೆಂದು ಕಾಣುವ ಭಾರತೀಯ ಸಂಸ್ಕೃತಿ, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಲು ಕಲಿಸುತ್ತದೆ. ಈ ಹಿನ್ನೆಲೆಯಲ್ಲಿ ಜಗತ್ತು ‘ವಸುದೈವ ಕುಟುಂಬಕಂ’ ಎಂಬ ಪ್ರಾಚೀನ ಭಾರತೀಯ ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬಾಹ್ಯ ಭಿನ್ನತೆಗಳನ್ನು ಮೀರಿ ಮಾನವೀಯತೆಯ ಆಂತರಿಕ ಏಕತೆಯನ್ನು ಗುರುತಿಸುವುದೇ ನಿಜವಾದ ಜ್ಞಾನ. ದೇಹ, ಆಕಾರ ಮತ್ತು ಬಣ್ಣದಲ್ಲಿ ಜನರು ಭಿನ್ನರಾಗಿದ್ದರೂ ಮೂಲತಃ ಎಲ್ಲರೂ ಒಂದೇ. ಆದ್ದರಿಂದ ಇತರರ ಸೇವೆ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಭಾರತ ತನ್ನ ಸ್ವಭಾವ ಮತ್ತು ಗುಣದಿಂದ ವಿಶ್ವಗುರು ಎನಿಸಿಕೊಂಡಿತೇ ಹೊರತು ಮಹಾಶಕ್ತಿಯಾಗಿ ಅಲ್ಲ. ಭಾರತ ತನ್ನ ಶಕ್ತಿಯನ್ನು ಜಗತ್ತಿನ ಸೇವೆಗೆ ಬಳಸಿಕೊಂಡಿತು. ಹೀಗಾಗಿ ಭಾರತದ ಉದಯ ಎಂದರೆ ಹೆಚ್ಚು ಒಗ್ಗಟ್ಟಿನ ಹಾಗೂ ಹೆಚ್ಚು ಮಾನವೀಯ ಜಗತ್ತಿನ ಉದಯ ಎಂದು ಡಾ. ಭಾಗವತ್ ಅಭಿಪ್ರಾಯಪಟ್ಟರು.

ಹಿಂದೆ ಸಂಚಾರದ ಆಧುನಿಕ ಸೌಲಭ್ಯಗಳೇ ಇಲ್ಲದ ಕಾಲದಲ್ಲಿಯೂ ಭಾರತದ ಪೂರ್ವಜರು ಮೆಕ್ಸಿಕೊದಿಂದ ಸೈಬೀರಿಯಾದವರೆಗೆ, ಚೀನಾ, ಮಂಗೋಲಿಯಾ ಹಾಗೂ ಆಗ್ನೇಯ ಏಷ್ಯಾದ ವಿವಿಧ ಭಾಗಗಳಿಗೆ ತೆರಳಿ ಜ್ಞಾನವನ್ನು ಹಂಚಿಕೊಂಡರು. ಅವರು ಯಾವುದೇ ದೇಶವನ್ನು ವಶಪಡಿಸಿಕೊಳ್ಳಲಿಲ್ಲ, ಯಾರ ಧರ್ಮವನ್ನೂ ಬದಲಾಯಿಸಲಿಲ್ಲ. ಬದಲಾಗಿ ಜ್ಯೋತಿಷ್ಯ, ಆಯುರ್ವೇದ ಹಾಗೂ ನಾಗರಿಕತೆಯ ಮೌಲ್ಯಗಳನ್ನು ಪರಿಚಯಿಸಿದರು ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಕೆನಡಾದ ಮಾಜಿ ರಕ್ಷಣಾ ಸಚಿವ ಹಾಗೂ ಅಲ್ಬರ್ಟಾದ ಮಾಜಿ ಮುಖ್ಯಮಂತ್ರಿ ಜೇಸನ್ ಕೆನ್ನಿ ಅವರು ಡಾ. ಭಾಗವತ್ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಭಾರತ–ಕೆನಡಾ ಸಂಬಂಧಗಳಲ್ಲಿ ಹೊಸ ವೇಗ ಕಂಡುಬರುತ್ತಿರುವುದು ಸಂತಸದ ಸಂಗತಿ ಎಂದ ಅವರು, ಈ ವರ್ಷದ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾಗೆ ಕೈಗೊಳ್ಳಲಿರುವ ಎರಡನೇ ಪ್ರವಾಸದ ಮೂಲಕ ಈ ಬೆಳವಣಿಗೆ ಮತ್ತಷ್ಟು ಸ್ಪಷ್ಟವಾಗಲಿದೆ ಎಂದು ಹೇಳಿದರು.

ಟೊರೊಂಟೊಗೆ ಆಗಮಿಸಿದ ಡಾ. ಭಾಗವತ್ ಅವರನ್ನು ಕೆನಡಾದ ವಿವಿಧ ಭಾಗಗಳಿಂದ ಆಗಮಿಸಿದ್ದ ಹಿಂದೂ ಸಮುದಾಯದವರು ಉತ್ಸಾಹದಿಂದ ಸ್ವಾಗತಿಸಿದರು. ಅವರ ಪ್ರವಾಸವು ಶಾಂತಿ, ಸಾಂಸ್ಕೃತಿಕ ಮೌಲ್ಯಗಳು ಹಾಗೂ ಜಾಗತಿಕ ಸಾಮರಸ್ಯವನ್ನು ಉತ್ತೇಜಿಸುವ ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕೆನಡಾದ ವಾಯುಪಡೆಯ ಮಾಜಿ ಅಧಿಕಾರಿ ಕಾರ್ತಿಕ್ ತ್ರಿವೇದಿ ಹಾಗೂ ಗ್ರೇಟರ್ ಟೊರೊಂಟೊ ಪ್ರದೇಶದ ಹಿಂದೂ ಸಭಾ ಮಂದಿರದ ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವರು ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande