ಡಾ. ಪ್ರಣಬ್ ಮುಖರ್ಜಿ ಪುಣ್ಯತಿಥಿ: ಕೇಂದ್ರ ಸಚಿವರಿಂದ ಗೌರವ ನಮನ
ನವದೆಹಲಿ, 31 ಆಗಸ್ಟ್ (ಹಿ.ಸ.): ಆ್ಯಂಕರ್:ಮಾಜಿ ರಾಷ್ಟ್ರಪತಿ ಹಾಗೂ ಭಾರತ ರತ್ನ ಡಾ. ಪ್ರಣಬ್ ಮುಖರ್ಜಿ ಅವರ ಪುಣ್ಯತಿಥಿಯ ಅಂಗವಾಗಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ನಾಯಕರು ಸೋಮವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಅಮಿತ್ ಶಾ ಅವರ
प्रतीकात्मक


ನವದೆಹಲಿ, 31 ಆಗಸ್ಟ್ (ಹಿ.ಸ.):

ಆ್ಯಂಕರ್:ಮಾಜಿ ರಾಷ್ಟ್ರಪತಿ ಹಾಗೂ ಭಾರತ ರತ್ನ ಡಾ. ಪ್ರಣಬ್ ಮುಖರ್ಜಿ ಅವರ ಪುಣ್ಯತಿಥಿಯ ಅಂಗವಾಗಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ನಾಯಕರು ಸೋಮವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಅಮಿತ್ ಶಾ ಅವರು, ಡಾ. ಪ್ರಣಬ್ ಮುಖರ್ಜಿ ಅತ್ಯುತ್ತಮ ಆಡಳಿತಗಾರ ಹಾಗೂ ವಿದ್ವಾಂಸರಾಗಿದ್ದರು. ಸಾರ್ವಜನಿಕ ಜೀವನದಲ್ಲಿ ಹಲವು ದಶಕಗಳ ಕಾಲ ದೇಶ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಬಗೆಗಿನ ಅಚಲ ಬದ್ಧತೆಯನ್ನು ಪ್ರದರ್ಶಿಸಿದ್ದರು. ಅವರ ಅಳಿಸಲಾಗದ ಪರಂಪರೆ ಇಂದಿನ ಹಾಗೂ ಮುಂದಿನ ನಾಯಕರಿಗೆ ಸದಾ ಪ್ರೇರಣೆಯಾಗಿರಲಿದೆ ಎಂದು ಸ್ಮರಿಸಿದರು.

ರಾಜನಾಥ್ ಸಿಂಗ್ ಅವರು, ಅಸಾಧಾರಣ ಪ್ರತಿಭೆ ಹಾಗೂ ಅಪಾರ ಜ್ಞಾನ ಹೊಂದಿದ್ದ ಪ್ರಣಬ್ ದಾ ಅವರು ತಮ್ಮ ಬುದ್ಧಿವಂತಿಕೆ, ರಾಜಕೀಯ ದೂರದೃಷ್ಟಿ ಮತ್ತು ಸಂಸದೀಯ ಪರಂಪರೆಗಳ ಆಳವಾದ ತಿಳುವಳಿಕೆಯ ಮೂಲಕ ಭಾರತದ ಸಾರ್ವಜನಿಕ ಜೀವನವನ್ನು ಶ್ರೀಮಂತಗೊಳಿಸಿದ್ದರು ಎಂದರು. ವಿವಿಧ ವಿಚಾರಗಳನ್ನು ಒಗ್ಗೂಡಿಸಿ ರಾಷ್ಟ್ರೀಯ ಮಹತ್ವದ ವಿಷಯಗಳಲ್ಲಿ ಒಮ್ಮತ ಮೂಡಿಸುವ ಅವರ ಸಾಮರ್ಥ್ಯ ವಿಶಿಷ್ಟವಾಗಿತ್ತು ಎಂದು ಹೇಳಿದರು.

ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ವೀರೇಂದ್ರ ಕುಮಾರ್ ಕೂಡ ಪ್ರಣಬ್ ಮುಖರ್ಜಿ ಅವರ ರಾಷ್ಟ್ರಸೇವೆ, ಪ್ರಜಾಪ್ರಭುತ್ವ ಮೌಲ್ಯಗಳು ಹಾಗೂ ಸಂಸದೀಯ ಪರಂಪರೆ ಬಲಪಡಿಸುವಲ್ಲಿನ ಕೊಡುಗೆಗಳನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ದೇಶದ ಹಿತವನ್ನು ಸದಾ ಮುಂಚೂಣಿಯಲ್ಲಿಟ್ಟಿದ್ದ ಅನುಭವಿ ರಾಜಕಾರಣಿ, ಸಮರ್ಥ ಆಡಳಿತಗಾರ ಹಾಗೂ ಆರ್ಥಿಕ ತಜ್ಞರಾಗಿ ಅವರ ಸೇವೆ ಸದಾ ಸ್ಮರಣೀಯ ಎಂದು ವೀರೇಂದ್ರ ಕುಮಾರ್ ಹೇಳಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande