ಉದ್ಯಾನವನಗಳ ಜಾಗ ಬಳಕೆಗೆ ವಿರೋಧ: ಲಾಲ್ಬಾಗ್ನಲ್ಲಿ ಭಾರಿ ನಾಗರಿಕ ಪ್ರತಿಭಟನೆ
ಉದ್ಯಾನವನಗಳ ಜಾಗ ಬಳಕೆಗೆ ವಿರೋಧ: ಲಾಲ್ಬಾಗ್ನಲ್ಲಿ ಭಾರಿ ನಾಗರಿಕ ಪ್ರತಿಭಟನೆ
lalbagh-public-protest-opposes-5-percent-park-land-use-amendment-bill


ಬೆಂಗಳೂರು, 30 ಆಗಸ್ಟ್ (ಹಿ.ಸ.):

ಆ್ಯಂಕರ್:

ನಗರದ ಲಾಲ್‌ಬಾಗ್ ಸೇರಿದಂತೆ ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಮೂಲಸೌಕರ್ಯ ಯೋಜನೆಗಳಿಗೆ ಬಳಸಲು ಅವಕಾಶ ಕಲ್ಪಿಸುವ ಸರ್ಕಾರದ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿ ನಾಗರಿಕರು ಭಾರಿ ಪ್ರತಿಭಟನೆ ನಡೆಸಿದರು.

ಸರ್ಕಾರ ತರಲು ಮುಂದಾಗಿರುವ ಉದ್ಯಾನವನ ತಿದ್ದುಪಡಿ ಮಸೂದೆ ಪರಿಸರ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಈಗಾಗಲೇ ಹಸಿರು ಪ್ರದೇಶಗಳ ಕೊರತೆಯಿದ್ದು, ಇರುವ ಉದ್ಯಾನವನಗಳ ಜಾಗವನ್ನೂ ವಿವಿಧ ಯೋಜನೆಗಳಿಗೆ ಬಳಸಲು ಅವಕಾಶ ನೀಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಸರ್ಕಾರದ ಪ್ರಸ್ತಾವನೆ ವಿರುದ್ಧ ಜಾಗೃತಿ ಮೂಡಿಸಲು ಪೋಸ್ಟ್‌ಕಾರ್ಡ್ ಅಭಿಯಾನಕ್ಕೂ ಚಾಲನೆ ನೀಡಲಾಯಿತು. ಲಾಲ್‌ಬಾಗ್‌ನಲ್ಲಿ ನಡೆದ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿ, ಉದ್ಯಾನವನಗಳು ಮತ್ತು ನಗರದ ಹಸಿರು ಪ್ರದೇಶಗಳನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಬಾರದು ಎಂದು ಒತ್ತಾಯಿಸಿದರು.

ಸುಮಾರು ಒಂದು ದಶಕದ ಬಳಿಕ ಬೆಂಗಳೂರಿನಲ್ಲಿ ನಡೆದ ದೊಡ್ಡ ಪ್ರಮಾಣದ ನಾಗರಿಕ ಪ್ರತಿಭಟನೆ ಇದಾಗಿದೆ ಎಂಬುದು ಗಮನ ಸೆಳೆಯಿತು. ಉದ್ಯಾನವನಗಳ ಜಾಗವನ್ನು ಮೂಲಸೌಕರ್ಯ ಯೋಜನೆಗಳಿಗೆ ಬಳಸುವ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಟ್ಟು, ನಗರದ ಹಸಿರು ಪ್ರದೇಶಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande