ಹುಬ್ಬಳ್ಳಿ-ಧಾರವಾಡ ಜನರ ಸಮಸ್ಯೆ ಆಲಿಸಲು ಮೇಯರ್ ಜೊತೆ ಮಾತುಕತೆ ಕಾರ್ಯಕ್ರಮ
ಹುಬ್ಬಳ್ಳಿ, 03 ಆಗಸ್ಟ್ (ಹಿ.ಸ.): ಆ್ಯಂಕರ್: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ ''ಮೇಯರ್ ಜೊತೆ ಮಾತುಕತೆ'' ಎಂಬ ವಿನೂತನ ಜನಪರ ಕಾರ್ಯಕ್ರಮವನ್ನು ಆಗಸ್ಟ್ 5ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಮ್
ಹುಬ್ಬಳ್ಳಿ-ಧಾರವಾಡ ಜನರ ಸಮಸ್ಯೆ ಆಲಿಸಲು ಮೇಯರ್ ಜೊತೆ ಮಾತುಕತೆ ಕಾರ್ಯಕ್ರಮ


ಹುಬ್ಬಳ್ಳಿ, 03 ಆಗಸ್ಟ್ (ಹಿ.ಸ.):

ಆ್ಯಂಕರ್:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ಉದ್ದೇಶದಿಂದ 'ಮೇಯರ್ ಜೊತೆ ಮಾತುಕತೆ' ಎಂಬ ವಿನೂತನ ಜನಪರ ಕಾರ್ಯಕ್ರಮವನ್ನು ಆಗಸ್ಟ್ 5ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.

ಮಹಾಪೌರರ ಕಚೇರಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು 8277802331 ಹಾಗೂ 8277802334 ಸಂಖ್ಯೆಗಳಿಗೆ ಕರೆ ಮಾಡಿ ಕುಡಿಯುವ ನೀರು, ಕಸ ವಿಲೇವಾರಿ, ರಸ್ತೆ, ಬೀದಿದೀಪ, ಒಳಚರಂಡಿ ಸೇರಿದಂತೆ ವಾರ್ಡ್ ಹಾಗೂ ವೈಯಕ್ತಿಕ ಸಮಸ್ಯೆಗಳನ್ನು ನೇರವಾಗಿ ಮೇಯರ್ ಅವರ ಗಮನಕ್ಕೆ ತರಬಹುದು.

ಇದಲ್ಲದೆ, ಹುಬ್ಬಳ್ಳಿ-ಧಾರವಾಡದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಸಹ ನಾಗರಿಕರು ನೀಡಬಹುದಾಗಿದೆ. ಈ ಕಾರ್ಯಕ್ರಮವನ್ನು ಪ್ರತಿ ತಿಂಗಳ ಮೊದಲ ಬುಧವಾರ ನಿಯಮಿತವಾಗಿ ಆಯೋಜಿಸಲಾಗುವುದು ಎಂದು ಮಹಾಪೌರರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande