ರೇಷ್ಮೆ ಕೃಷಿ ವಿದ್ಯಾರ್ಥಿಗಳಿಂದ ರೈತರಿಗೆ ಬೆಳೆ ವಿಮೆ ಬಗ್ಗೆ ಮಾಹಿತಿ
ರೇಷ್ಮೆ ಕೃಷಿ ವಿದ್ಯಾರ್ಥಿಗಳಿಂದ ರೈತರಿಗೆ ಬೆಳೆ ವಿಮೆ ಬಗ್ಗೆ ಮಾಹಿತಿ
ಚಿಂತಾಮಣಿ ರೇಷ್ಮೇ ಕೃಷಿ ಮಹಾವಿದ್ಯಾಲಯ ವಿದ್ಯಾರ್ಥಿಗಳು ಶ್ರೀನಿವಾಸಪುರ ತಾಲ್ಲೂಕು ಕೊಳತೂರು ಗ್ರಾಮದಲ್ಲಿ ರೈತರಿಗೆ ಬೆಳೆವಿಮೆ, ಸುರಕ್ಷಿತ ಕಿಟನಾಶಕಗಳ ಬಳಕೆ ಕುರಿತು ಅರಿವು ಮೂಡಿಸಿದರು.


ಕೋಲಾರ, ೦೩ ಆಗಸ್ಟ್ (ಹಿ.ಸ):

ಆ್ಯಂಕರ್ : ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಹೋಬಳಿಯ ಕೊಳತೂರು ಗ್ರಾಮದಲ್ಲಿ ರೈತಸಂಪರ್ಕ ಕೇಂದ್ರದ ಆಶ್ರಯದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರೇಷ್ಮೇ ಕೃಷಿ ಮಹಾವಿದ್ಯಾಲಯ ಚಿಂತಾಮಣಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ರೈತರಿಗೆ ಬೆಳೆವಿಮೆ, ಸುರಕ್ಷಿತ ಕಿಟನಾಶಕಗಳ ಬಳಕೆ ಕುರಿತು ಕುರಿತು ಅರಿವು ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ಅಧಿಕಾರಿಗಳು, ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತು ಅರಿವು ನೀಡಿದರು. ಕೀಟನಾಶಕಗಳ ಜತೆಗೆ ಇತ್ತೀಚಿನ ದಿನಗಳಲ್ಲಿ ಜೈವಿಕ ಕೀಟ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ . ರೈತರು ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಬೇಕೆಂದು ತಿಳಿಸಿ, ರೈತರು ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಆಹಾರವನ್ನು ಸೇವನೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ನಳಿನಾಕ್ಷಿ ಬಿವಿ, ಶಾಲೆಯ ಮುಖ್ಯಸ್ಥರು, ಆತ್ಮ ಸಿಬ್ಬಂದಿ ವರ್ಗ, ಕೃಷಿ ಮಹಾವಿದ್ಯಾಲಯ ಬೆಂಗಲೂರು ಹಾಗೂ ರೇಷ್ಮೆ ಕೃಷಿ ವಿವಿ ಚಿಂತಾಮಣಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande