ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಗೆ ನೋಂದಣಿ ದಿನಾಂಕ ವಿಸ್ತರಣೆ
ಧಾರವಾಡ, 03 ಆಗಸ್ಟ್ (ಹಿ.ಸ.): ಆ್ಯಂಕರ್: 2026 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಯಡಿ ಶೇಂಗಾ (ನೀರಾವರಿ), ಶೇಂಗಾ (ಮಳೆ ಆಶ್ರಿತ), ಮೆಕ್ಕೆಜೋಳ (ನೀರಾವರಿ), ಮೆಕ್ಕೆಜೋಳ (ಮಳೆ ಆಶ್ರಿತ) ಮತ್ತು ಟೊಮೋಟೊ ಬೆಳೆಗಳಿಗೆ ನೋಂದಣಿ ಮಾಡಲು ಅಗಸ್ಟ್ 5,
ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಗೆ ನೋಂದಣಿ ದಿನಾಂಕ ವಿಸ್ತರಣೆ


ಧಾರವಾಡ, 03 ಆಗಸ್ಟ್ (ಹಿ.ಸ.):

ಆ್ಯಂಕರ್:

2026 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆಯಡಿ ಶೇಂಗಾ (ನೀರಾವರಿ), ಶೇಂಗಾ (ಮಳೆ ಆಶ್ರಿತ), ಮೆಕ್ಕೆಜೋಳ (ನೀರಾವರಿ), ಮೆಕ್ಕೆಜೋಳ (ಮಳೆ ಆಶ್ರಿತ) ಮತ್ತು ಟೊಮೋಟೊ ಬೆಳೆಗಳಿಗೆ ನೋಂದಣಿ ಮಾಡಲು ಅಗಸ್ಟ್ 5, 2026 ರವರೆಗೆ ಅವಧಿ ವಿಸ್ತರಣೆಯಾಗಿದೆ.

ಈ ಕಾಲಾವಕಾಶ ವಿಸ್ತರಣೆ ಬೆಳೆ ಸಾಲ ಪಡೆದ ರೈತರಿಗೆ ಮಾತ್ರ ಇರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande