ಕನ್ನಡ ಸಾಹಿತ್ಯ ಪರಿಷತ್ತನ್ನು ಬಲಪಡಿಸಲು ಚಿಂತನ ಸಭೆ
ಕನ್ನಡ ಸಾಹಿತ್ಯ ಪರಿಷತ್ತನ್ನು ಬಲಪಡಿಸಲು ಚಿಂತನ ಸಭೆ
ಕನ್ನಡ ಸಾಹಿತ್ಯ ಪರಿಷತ್ತನ್ನು ಬಲಪಡಿಸಲು ಬೆಂಗಳೂರಿನ ಗಾಂಧಿ ಭವನದಲ್ಲಿ ಸಾಹಿತಿಗಳ ಸಭೆ ನಡೆಯಿತು.


ಕೋಲಾರ,ಆ.೦೩ (ಹಿ.ಸ.):

ಆ್ಯಂಕರ್: ನಿಂತ ನೀರಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಪುನಃಶ್ಚೇತನಕ್ಕಾಗಿ ಹಾಗೂ ಮುಂಬರುವ ಚುನಾಣೆಯನ್ನು ಗಮನದಲ್ಲಿಟ್ಟುಕೊಂಡು ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರಿಗೆ ಬೆಂಬಲ ಸೂಚಿಸಲು ಬೆಂಗಳೂರು ನಗರದ ಗಾಂಧಿ ಭವನದಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು.

ಸಭೆಯಲ್ಲಿ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ ಕ.ಸಾ.ಪದಲ್ಲಿ ನಡೆದಿರುವ ಅಕ್ರಮಗಳನ್ನು ಸಂಪೂರ್ಣವಾಗಿ ವಿವರಿಸಿ ಕನ್ನಡ ನಾಡಿನ ಅಭಿಮಾನವನ್ನು ಕೇಂದ್ರವಾಗಿಟ್ಟುಕೊAಡು ಕ.ಸಾ.ಪ.ವನ್ನು ಪುನಃಶ್ಚೇತನವಾಗಿಸುವ ಸಂಕಲ್ಪ ಹೊಂದಿದ್ದೇನೆ. ಈ ವಿಚಾರದಲ್ಲಿ ಕನ್ನಡಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಲಾಗುತ್ತಿದೆ. ತಾವೆಲ್ಲರೂ ಒಗ್ಗಟ್ಟಾಗಿ ಕೈ ಜೋಡಿಸಿ ಪರಿಷತ್ತಿನ ಘನತೆ, ಗೌರವವನ್ನು ಮರುಸ್ಥಾಪಿಸೋಣ ಎಂದು ಹೇಳಿದರು.

ಹಿರಿಯ ಸಾಹಿತಿ ಪ್ರೊ.ಎಸ್.ವಿ. ಸಿದ್ಧರಾಮಯ್ಯ ಕ.ಸಾ.ಪ.ದಲ್ಲಿ ಪಕ್ಷ ರಾಜಕಾರಣಕ್ಕೆ ಅವಕಾಶವಿರಬಾರದು ಕನ್ನಡಿಗರ ಅಸ್ಮಿತೆ, ಆತ್ಮಗೌರವ ಕಾಪಾಡುವ ಸಂಸ್ಥೆಯಾಗಿ ಕ.ಸಾ.ಪ. ಉಳಿಯಬೇಕು. ವೈಯಕ್ತಿಕ ಗೆಲುವಿಗಿಂತ ಕನ್ನಡದ ಗೆಲುವೆ ಮುಖ್ಯ ಆದ್ದರಿಂದ ಕ.ಸಾ.ಪ. ಸಂಘಟನೆ ಇಂದಿನ ಅಗತ್ಯವಾಗಿದೆ ಎಂದರು.

ಸAಸ್ಕೃತಿಕ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತನ್ನು ಅದರ ಹಿಂದಿನ ಗೌರವದ ಸ್ಥಾನಕ್ಕೆ ಮರಳಿಸಬೇಕೆಂದು ಎಂದು ಹೇಳಿದರು. ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ಗೌಡ ಮಾತನಾಡಿ ಕನ್ನಡದ ಪರವಾಗಿ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸ್ವಯತ್ತದೆ ಹಾಗೂ ಚೈತನ್ಯ ಪಡೆಯಬೇಕೆಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯೋಜಕ ರಾಜ್ಯಾಧ್ಯಕ್ಷ ಡಾ.ಅಶ್ವಥ್ ಅಂತ್ಯಜ ಮಾತನಾಡಿ ಕಳೆದ ನಾಲ್ಕು ದಶಕಗಳಿಂದ ಲಂಕೇಶ್ ಪತ್ರಿಕೆಯಲ್ಲಿ ಬರಹವನ್ನು ಪ್ರಾರಂಭಿಸಿ ಅಭಿಮಾನಿ ಪತ್ರಿಕೆ, ಮಾರ್ದನಿ ಪತ್ರಿಕೆ ಸಂಪಾದಕರಾಗಿ ಕನ್ನಡ ನಾಡಿನ ಸ್ವಾಭಿಮಾನದ ಧ್ವನಿಯಾಗಿ ರಾಜಿ ಇಲ್ಲದ ಹೋರಾಟವನ್ನು ಮಾಡಿದಂತಹ ಜಾಣಗೆರೆ ವೆಂಕಟರಾಮಯ್ಯರವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವುದು ಕನ್ನಡ ನಾಡಿನ ನಾಡಿಗೆ ಸಂದ ಗೌರವವಾಗುತ್ತದೆ. ಎಲ್ಲರೂ ಒಟ್ಟಾಗಿ ಈ ವಿಚಾರದಲ್ಲಿ ಶ್ರಮಿಸಬೇಕು ಎಂದರು.

ಕನ್ನಡ ನಾಡಿನ ಹಿರಿಯ ಹೋರಾಟಗಾರರಾದ ಸಾ.ರ. ಗೋವಿಂದು ರವರು ಮಾತನಾಡಿ ಜಾಣಗೆರೆ ವೆಂಕಟರಾಮಯ್ಯ ರವರು ಬಹುಮುಖ ವ್ಯಕ್ತಿತ್ವ ಹೊಂದಿರುವವರು. ಪ್ರಗತಿಪರ ಚಿಂತಕರು. ಎಲ್ಲೇ ಅನ್ಯಾಯವಾದರೂ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತವರು. ಇವರ ಪ್ರವೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು ಸದೃಢವಾಗಿ ಬೆಳೆಯಬಲ್ಲದು ಎಂದರು.

ಸಭೆಯಲ್ಲಿ ಸಿ.ಕೆ.ರಾಮೇಗೌಡ, ಸಾಹಿತಿಗಳಾದ ಮಂಡ್ಯದ ಪ್ರೊ.ಹುಲ್ಕೆರೆ ಮಹದೇವ್, ಮೈಸೂರಿನ ಪ್ರೊ. ಗಂಗಾರಾಮ್ ಚಂಡಾಳ, ಕೋಲಾರದ ಸಾಹಿತಿ, ಬರಹಗಾರ್ತಿ ಎಸ್.ಸಿ.ಶೈಲಜಾ, ಸಾಹಿತಿ, ಬಹಗಾರ ಮಾಸ್ತಿ ಜಗನ್ನಾಥ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಚಾಲಕ ಮಾವಳ್ಳಿ ಶಂಕರ್, ಸಿನಿಮಾ ನಿರ್ದೇಶಕರಾದ ಹಾಸನ ನಂಜುಂಡೇಗೌಡ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande