
ಧಾರವಾಡ, 03 ಆಗಸ್ಟ್ (ಹಿ.ಸ.):
ಆ್ಯಂಕರ್:ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಡಿ ಧಾರವಾಡ ಜಿಲ್ಲೆಯಲ್ಲಿ ಆಗಸ್ಟ್ 3ರವರೆಗೆ 16,21,961 ಗಣತಿ ನಮೂನೆಗಳಲ್ಲಿ 13,35,368 ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದ್ದು, ಒಟ್ಟಾರೆ ಶೇ.82.33 ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ಪರಿಷ್ಕರಣೆ ವೇಳೆ 2,86,177 ಮತದಾರರನ್ನು ಗೈರು, ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಿಗೆ ಸಂಬಂಧಿಸಿ ಗುರುತಿಸಲಾಗಿದೆ. ಇದರಲ್ಲಿ 1,35,875 ಶಾಶ್ವತ ವಲಸೆ, 52,124 ಮರಣ, 25,799 ದ್ವಿಪ್ರತಿ, 70,263 ಗೈರು ಹಾಗೂ 2,116 ಇತರೆ ಪ್ರಕರಣಗಳಾಗಿವೆ.
ವಿಧಾನಸಭಾ ಕ್ಷೇತ್ರವಾರು ಗಣಕೀಕರಣದಲ್ಲಿ ನವಲಗುಂದ – 1,93,387, ಕುಂದಗೋಳ – 1,77,741, ಧಾರವಾಡ – 1,90,910, ಹುಬ್ಬಳ್ಳಿ-ಧಾರವಾಡ ಪೂರ್ವ – 1,78,638, ಹುಬ್ಬಳ್ಳಿ-ಧಾರವಾಡ ಕೇಂದ್ರ – 1,97,844, ಹುಬ್ಬಳ್ಳಿ-ಧಾರವಾಡ ಪಶ್ಚಿಮ – 2,10,527 ಹಾಗೂ ಕಲಘಟಗಿ – 1,86,321 ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ.
ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡುವ ವೇಳೆ ಸಾರ್ವಜನಿಕರು ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸಲ್ಲಿಸಿ ಸಹಕರಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.