ಬಳ್ಳಾರಿ : ಬಿಸಲಹಳ್ಳಿ ಉಪ- ಉಪ-ಕೇಂದ್ರ - ಆ.31 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ, 29 ಆಗಸ್ಟ್ (ಹಿ.ಸ.) ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಬಿಸಲಹಳ್ಳಿ ಉಪ- ಉಪ-ಕೇಂದ್ರದಲ್ಲಿ ಉಪಕರಣಗಳ ಮತ್ತು ರಿಲೇಗಳ ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದರಿಂದ ಆಗಸ್ಟ್ 31 ರಂದು ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ 33/11ಕೆ.ವಿ ರ
ಬಳ್ಳಾರಿ : ಬಿಸಲಹಳ್ಳಿ ಉಪ- ಉಪ-ಕೇಂದ್ರ - ಆ.31 ರಂದು ವಿದ್ಯುತ್ ವ್ಯತ್ಯಯ


ಬಳ್ಳಾರಿ, 29 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಬಿಸಲಹಳ್ಳಿ ಉಪ- ಉಪ-ಕೇಂದ್ರದಲ್ಲಿ ಉಪಕರಣಗಳ ಮತ್ತು ರಿಲೇಗಳ ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದರಿಂದ ಆಗಸ್ಟ್ 31 ರಂದು ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ 33/11ಕೆ.ವಿ ರೂಪನಗುಡಿ ಉಪಕೇಂದ್ರದಿ0ದ ವಿದ್ಯುತ್ ಸರಬರಾಜಾಗುವ 11ಕೆ.ವಿ ಮಾರ್ಗಗಳಲ್ಲಿ ಹಾಗೂ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನ ಬಾಬು ತಿಳಿಸಿದ್ದಾರೆ.

*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*

ಶಂಕರಬ0ಡೆ ಮಾರ್ಗಗಳು (ಎಫ್-52 ಐಪಿ, ಎಫ್-53 ಎನ್ಜೆವೈ): ತಿರುಮಲನಗರ, ಶಂಕರಬ0ಡೆ, ಬೊಬ್ಬುಕುಂಟೆ, ಇಬ್ರಾಹಿಂಪುರ, ಎತ್ತಿನಬೂದಿಹಾಳ್, ಬೆಂಚಿಕೊಟ್ಟಾಲ್, ಮಿಂಚೇರಿ, ಬರ್ರನಾಯಕನಹಳ್ಳಿ ಗ್ರಾಮಗಳು ಹಾಗೂ ಕಮ್ಮರಚೇಡು ಕೃಷಿ ಪ್ರದೇಶಗಳು.

ಬಿಸಲಹಳ್ಳಿ ಮತ್ತು ಅಸುಂಡಿ ಮಾರ್ಗಗಳು (ಎಫ್-54 ಎನ್ಜೆವೈ, ಎಫ್-55 ಐಪಿ): ಬಿಸಲಹಳ್ಳಿ, ಜನತಾನಗರ, ಸೋಲಾರ್, ಟಿ.ಬೂದಿಹಾಳ್, ತಗ್ಗಿನಬೂದಿಹಾಳ್, ಅಮರಾಪುರ, ಬೇವಿನಹಳ್ಳಿ, ಅಸುಂಡಿ ಮತ್ತು ಕಕ್ಕಬೇವಿನಹಳ್ಳಿ ಕೃಷಿ ಪ್ರದೇಶಗಳು.

ಕಮ್ಮರಚೇಡು ಮಾರ್ಗಗಳು (ಎಫ್-56 ಎನ್ಜೆವೈ, ಎಫ್-84 ಎನ್ಜೆವೈ): ಕಮ್ಮರಚೇಡು, ತಗ್ಗಿನಬೂದಿಹಾಳ್, ಅಮರಾಪುರ, ಗೋಡೆಹಾಳ್, ಬೇವಿನಹಳ್ಳಿ, ಅಸುಂಡಿ, ಕಕ್ಕಬೇವಿನಹಳ್ಳಿ, ತಲಮಾಮಿಡಿ, ವಿಘ್ನೇಶ್ವರ ಕ್ಯಾಂಪ್, ಧನಲಕ್ಷಿö್ಮ ಕ್ಯಾಂಪ್, ಕೆರೆ ಕ್ಯಾಂಪ್, ಮಾಳೆಗಡ್ಡೆ ಕ್ಯಾಂಪ್ ಹಾಗೂ ವೈ.ಬೂದಿಹಾಳ್ ಗ್ರಾಮಗಳು.

ರೂಪನಗುಡಿ ಮಾರ್ಗಗಳು (ಎಫ್-95 ಐಪಿ, ಎಫ್-96 ಎನ್ಜೆವೈ): ರೂಪನಗುಡಿ, ರಾಯಾಪುರ ಮತ್ತು ಕುಂಟನಹಾಳ್ ಗ್ರಾಮಗಳು ಹಾಗೂ ಸುತ್ತಮುತ್ತಲ ಕೃಷಿ ಪ್ರದೇಶಗಳು.

ವೈ.ಬೂದಿಹಾಳ್ ಐಪಿ ಮಾರ್ಗ (ಎಫ್-83 ಐಪಿ): ತಲಮಾಮಿಡಿ, ವಿಘ್ನೇಶ್ವರ ಕ್ಯಾಂಪ್, ಧನಲಕ್ಷಿ ಕ್ಯಾಂಪ್, ಕೆರೆ ಕ್ಯಾಂಪ್, ಕಮ್ಮರಚೇಡು, ವೈ.ಬೂದಿಹಾಳ್, ಎತ್ತಿನಬೂದಿಹಾಳ್, ಬೆಂಚಿಕೊಟ್ಟಾಲ್, ಮಾರೆಮ್ಮ ಕ್ಯಾಂಪ್, ವಿಜಯಪುರ ಕ್ಯಾಂಪ್ ಮತ್ತು ನೇಮಕಲ್ಲು ಕ್ರಾಸ್ ಕೃಷಿ ಪ್ರದೇಶಗಳು.

*ವಿಶೇಷ ಸೂಚನೆ:*

ಆಗಸ್ಟ್ 31ರಂದು ಈ ಉಪ-ಕೇಂದ್ರದ ಎಲ್ಲಾ ಕೃಷಿ ಮಾರ್ಗಗಳಿಗೆ ಬೆಳಿಗ್ಗೆ 4 ರಿಂದ ಬೆಳಿಗ್ಗೆ 08 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರಲಿದೆ. ಸಾರ್ವಜನಿಕರು ಹಾಗೂ ಗ್ರಾಹಕರು ಈ ವ್ಯತ್ಯಯವನ್ನು ಗಮನಿಸಿ ಜೆಸ್ಕಾಂ ಸಿಬ್ಬಂದಿಯೊ0ದಿಗೆ ಸಹಕರಿಸಬೇಕು ಎಂದು ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande