
ಹಾಸನ, 29 ಆಗಸ್ಟ್ (ಹಿ.ಸ.):
ಆ್ಯಂಕರ್:
ಜಿಲ್ಲೆಯ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ 2026-27ನೇ ಸಾಲಿನಲ್ಲಿ ಕೌಶಲ್ಯ ಶಿಕ್ಷಣ ಕಾರ್ಯಕ್ರಮದಡಿ ಕೃತಕ ಬುದ್ಧಿಮತ್ತೆ ವಿಷಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಒಬ್ಬ ವೃತ್ತಿ ಸಂಯೋಜಕರನ್ನು ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 43 ಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ ವಿಷಯವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಶೈಕ್ಷಣಿಕ ಮೇಲ್ವಿಚಾರಣೆ, ತಾಂತ್ರಿಕ ಮಾರ್ಗದರ್ಶನ, ಕಾರ್ಯಕ್ರಮದ ಗುಣಮಟ್ಟದ ಮೇಲ್ವಿಚಾರಣೆ ಹಾಗೂ ಸಮನ್ವಯ ಕಾರ್ಯಗಳನ್ನು ನಿರ್ವಹಿಸಲು ಈ ಹುದ್ದೆ ನೇಮಕ ಮಾಡಲಾಗುತ್ತಿದೆ.
ಕಂಪ್ಯೂಟರ್ ವಿಜ್ಞಾನ ಅಥವಾ ಮಾಹಿತಿ ತಂತ್ರಜ್ಞಾನದಲ್ಲಿ ಡಿಪ್ಲೊಮಾ, ಬಿಸಿಎ, ಬಿಎಸ್ಸಿ ಕಂಪ್ಯೂಟರ್ ವಿಜ್ಞಾನ, ಬಿಎಸ್ಸಿ ಮಾಹಿತಿ ತಂತ್ರಜ್ಞಾನ, ಪಿಜಿಡಿಸಿಎ, ಎನ್‌ಐಇಎಲ್‌ಐಟಿ ‘ಎ’ ಮಟ್ಟದ ಪ್ರಮಾಣಪತ್ರ ಸೇರಿದಂತೆ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರುವುದು ಅಗತ್ಯ.
ಅರ್ಹ ಅಭ್ಯರ್ಥಿಗಳು ಉಪನಿರ್ದೇಶಕರು (ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿಯಿಂದ ಅರ್ಜಿ ಪಡೆದು, ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ, ಪಿಯುಸಿ, ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರಗಳು ಹಾಗೂ ಅನುಭವ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 7ರಂದು ಸಂಜೆ 5.30 ಗಂಟೆ ಕೊನೆಯ ದಿನವಾಗಿದ್ದು, ನಂತರ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಡಿವೈಪಿಸಿ ಚಂದ್ರಯ್ಯ ಜಿ. (94489 99398) ಅಥವಾ ಡಿವೈಪಿಸಿ ಭಾನುಮತಿ ಟಿ.ವಿ. (98459 33932) ಅವರನ್ನು ಸಂಪರ್ಕಿಸಬಹುದು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.