ಆ.31 : ಮೋಕಾ ಉಪ-ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ, 29 ಆಗಸ್ಟ್ (ಹಿ.ಸ.) ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಮೋಕಾ ಉಪ-ಕೇಂದ್ರದಲ್ಲಿ ಉಪಕರಣಗಳ ಮತ್ತು ರಿಲೇಗಳ ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದರಿಂದ ಆಗಸ್ಟ್ 31 ರಂದು ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ 110/11ಕೆ.ವಿ ಮೋಕಾ ವಿದ್
ಆ.31 : ಮೋಕಾ ಉಪ-ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ


ಬಳ್ಳಾರಿ, 29 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಮೋಕಾ ಉಪ-ಕೇಂದ್ರದಲ್ಲಿ ಉಪಕರಣಗಳ ಮತ್ತು ರಿಲೇಗಳ ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದರಿಂದ ಆಗಸ್ಟ್ 31 ರಂದು ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ 110/11ಕೆ.ವಿ ಮೋಕಾ ವಿದ್ಯುತ್ ಉಪ-ಕೇಂದ್ರ ಮತ್ತು 33/11ಕೆ.ವಿ ರ್ರಗುಡಿ ವಿದ್ಯುತ್ ಉಪಕೇಂದ್ರದಿ0ದ ವಿದ್ಯುತ್ ಸರಬರಾಜು ಆಗುವ 11ಕೆ.ವಿ ಮಾರ್ಗಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*

ಎಫ್-01 ಬಿ.ಡಿ.ಹಳ್ಳಿ ಐಪಿ ಮಾರ್ಗದ ಮೋಕಾ ಬಿ.ಡಿ.ಹಳ್ಳಿ ಕೃಷಿ ಪ್ರದೇಶಗಳು. ಎಫ್-02 ಮಸೀದಿಪುರ ಐಪಿ ಮಾರ್ಗದ ಗೋಟೂರು, ಕೆ.ಕೆ.ಹಾಳ್, ಮಸೀದಿಪುರ, ವಣೆನೂರು, ಬಾಣಾಪುರ, ಗುಡುದೂರು ಕೃಷಿ ಪ್ರದೇಶಗಳು. ಎಫ್-04 ಮೋಕಾ/ಶಿವಪುರ ಐಪಿ ಮಾರ್ಗದ ಶಿವಪುರ, ಅಶೋಕನಗರ ಕ್ಯಾಂಪ್, ಕಪ್ಪಗಲ್ಲು, ಸಿರಿವಾರ, ಸಂಗನಕಲ್ಲು, ಚಾಗನೂರು ಕೃಷಿ ಪ್ರದೇಶಗಳು.

ಎಫ್-05 ವಾಟರ್ ವರ್ಕ್ಸ್ ಮಾರ್ಗದ ಶಿವಪುರ ವಾಟರ್ ವರ್ಕ್ಸ್. ಎಫ್-12 ಬಸರಕೋಡು ಎನ್.ಜೆ.ವೈ ಮಾರ್ಗದ ಗೋಟೂರು, ಕೆ.ಕೆ.ಹಾಳ್, ಮಸೀದಿಪುರ, ವಣೆನೂರು, ಕರ್ಚೇಡು, ಬಸರಕೋಡು, ಬಾಣಾಪುರ, ಹೀರೆಹಡ್ಲಿಗಿ ಗ್ರಾಮಗಳು. ಎಫ್-13 ಬಸರಕೋಡು ಐಪಿ ಮಾರ್ಗದ ಮೋಕಾ, ಕರ್ಚೇಡು, ಬಸರಕೋಡು, ಹೀರೆಹಡ್ಲಿಗಿ ಕೃಷಿ ಪ್ರದೇಶಗಳು.

ಎಫ್-14 ಕಪ್ಪಗಲ್ಲು ಮತ್ತು ಸೋಲಾರ್ ಮಾರ್ಗದ ಶಿವಪುರ, ಅಶೋಕ ನಗರ ಕ್ಯಾಂಪ್, ಕಪ್ಪಗಲ್ಲು, ಸಿರಿವಾರ ಗ್ರಾಮಗಳು. ಎಫ್-15 ಮೋಕಾ ಮತ್ತು ಸೋಲಾರ್ ಮಾರ್ಗದ ಮೋಕಾ ಮತ್ತು ಬಿ.ಡಿ.ಹಳ್ಳಿ ಗ್ರಾಮಗಳು. ಎಫ್-01 ಡಿ.ಎನ್.ಹಳ್ಳಿ ಐಪಿ ಮಾರ್ಗದ ಡಿಎನ್.ಹಳ್ಳಿ, ಜಿ.ಎನ್.ಹಳ್ಳಿ, ತಂಬ್ರಳ್ಳಿ, ಬ್ಯಾಳಚಿಂತೆ ಕೃಷಿ ಪ್ರದೇಶಗಳು.

ಎಫ್-02 ಜಿ.ಎನ್ ಹಳ್ಳಿ ಐಪಿ ಮಾರ್ಗದ ಜಿ.ಎನ್.ಹಳ್ಳಿ, ತಂಬ್ರಳ್ಳಿ, ಬ್ಯಾಳಚಿಂತೆ ಕೃಷಿ ಪ್ರದೇಶಗಳು. ಎಫ್-03 ಹಳೆ ರ್ರಗುಡಿ ಐಪಿ ಮಾರ್ಗದ ಹಳೆ ಮತ್ತು ಹೊಸ ರ್ರಗುಡಿ, ಸಿಂಧುವಾಳ, ಬೆಣಕಲ್ಲು ಕೃಷಿ ಪ್ರದೇಶಗಳು. ಎಫ್-04 ವೇದಾವತಿ ಐಪಿ ಮಾರ್ಗದ ಡಿಎನ್ ಹಳ್ಳಿ, ಮೋಕಾ ಕೃಷಿ ಪ್ರದೇಶಗಳು. ಎಫ್-05 ಸಿಂಧುವಾಳ ಮತ್ತು ಸೋಲಾರ್ ಮಾರ್ಗದ ಹಳೆ ರ್ರಗುಡಿ, ಹೊಸ ರ್ರಗುಡಿ, ಸಿಂಧುವಾಳ, ಬೆಣಕಲ್ಲು, ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್ ಗ್ರಾಮಗಳು.

ಎಫ್-06 ಜಾಲಿಹಾಳ್ ಐಪಿ ಮಾರ್ಗದ ಎಮ್.ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್, ಡಿ.ಎನ್ ಹಳ್ಳಿ ಕೃಷಿ ಪ್ರದೇಶಗಳು. 33ಕೆ.ವಿ ಮಾರ್ಗದ 33ಕೆ.ವಿ ಎನ್.ಡಿ.ಪಿ.ಎಲ್ ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

*ಸೂಚನೆ:* ಆಗಸ್ಟ್ 31 ರಂದು ಈ ಉಪಕೇಂದ್ರಗಳಿ0ದ ಎಲ್ಲಾ ಕೃಷಿ ಮಾರ್ಗಗಳಿಗೆ ಬೆಳಿಗ್ಗೆ 04 ರಿಂದ ಬೆಳಿಗ್ಗೆ 08 ಗಂಟೆಯವರೆಗೆ ವಿದ್ಯುತ್ ಸರಬರಾಜು ಮಾಡಲಾಗುವುದು. ಬಾಕಿ ಉಳಿದ ನಿರ್ವಹಣೆ ನಂತರ ವಿದ್ಯುತ್ ಸರಬರಾಜು ಮಾಡಲಾಗುವುದು. ಹಾಗಾಗಿ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande