ವಿಶ್ವ ಸಂಸ್ಕೃತ ದಿನದಂದು ಪ್ರಧಾನಿ ಮೋದಿ ಶುಭಾಶಯ
ನವದೆಹಲಿ, 28 ಆಗಸ್ಟ್ (ಹಿ.ಸ.): ಆ್ಯಂಕರ್:ವಿಶ್ವ ಸಂಸ್ಕೃತ ದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಶ್ರಾವಣ ಪೂರ್ಣಿಮೆಯಂದು ಸಂಸ್ಕೃತದ ಚಿರಂತನ ಶ್ರೀಮಂತಿಕೆಯನ್ನು ಆಚರಿಸಲಾಗುತ್ತಿದೆ. ಭಾರತದ ಜ್ಞಾನ, ಚಿಂತನೆ ಹಾಗೂ ಸೃಜನಶೀಲತೆಯ ನಿರಂತರ ವಾಹ
ಸಾಂದರ್ಭಿಕ


ನವದೆಹಲಿ, 28 ಆಗಸ್ಟ್ (ಹಿ.ಸ.):

ಆ್ಯಂಕರ್:ವಿಶ್ವ ಸಂಸ್ಕೃತ ದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

ಶ್ರಾವಣ ಪೂರ್ಣಿಮೆಯಂದು ಸಂಸ್ಕೃತದ ಚಿರಂತನ ಶ್ರೀಮಂತಿಕೆಯನ್ನು ಆಚರಿಸಲಾಗುತ್ತಿದೆ. ಭಾರತದ ಜ್ಞಾನ, ಚಿಂತನೆ ಹಾಗೂ ಸೃಜನಶೀಲತೆಯ ನಿರಂತರ ವಾಹಕವಾಗಿ ಸಂಸ್ಕೃತ ಭಾಷೆ ಮಹತ್ವದ ಪಾತ್ರ ವಹಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಅದರ ಸಕಾರಾತ್ಮಕ ಪ್ರಭಾವ ಇಂದಿಗೂ ಕಾಣಬಹುದಾಗಿದೆ ಎಂದು ಪ್ರಧಾನಿ ‘ಎಕ್ಸ್‌’ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

ಈ ವಿಶೇಷ ಸಂದರ್ಭದಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ ಸಂಸ್ಕೃತವನ್ನು ಕಲಿಯುತ್ತಿರುವ, ಬೋಧಿಸುತ್ತಿರುವ ಹಾಗೂ ಅದರಲ್ಲಿರುವ ಕಾಲಾತೀತ ಜ್ಞಾನ ಸಂಪತ್ತನ್ನು ಮುಂದಿನ ಪೀಳಿಗೆಗೆ ತಲುಪಿಸಲು ಶ್ರಮಿಸುತ್ತಿರುವ ಎಲ್ಲರನ್ನೂ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande