
ಕೋಲಾರ, ಆಗಸ್ಟ್ ೨೭ (ಹಿ.ಸ.)
ಆ್ಯಂಕರ್ : ನಗರದ ಕ್ಲಾಕ್ ಟವರ್ ಆವರಣದಲ್ಲಿ ಮೊಹಮ್ಮದಿಯಾ ನೌಜವಾನ್ ಸಮಿತಿಯಿಂದ ಪ್ರವಾದಿ ಮೊಹಮ್ಮದ್ ಅವರ ಜಯಂತಿ ‘ಈದ್ ಮಿಲಾದ್‘ ಅಂಗವಾಗಿ ಬಡವರಿಗೆ ೧ ಸಾವಿರ ಆಹಾರದ ಕಿಟ್ ವಿತರಿಸಲಾಯಿತು.
ಸಮಿತಿಯು ಆರಂಭದಲ್ಲಿ ೨೦೦ ರೇಷನ್ ಕಿಟ್ಗಳಿಂದ ಪ್ರಾರಂಭಿಸಿದ್ದು, ಈ ವರ್ಷ ೧ ಸಾವಿರ ಬಡ ಕುಟುಂಬಗಳಿಗೆ ವಿಸ್ತರಿಸಿದೆ ಎಂದು ಸಮಿತಿಯ ಪದಾಧಿಕಾರಿ ವಸೀಂ ಬೇಗ್ ತಿಳಿಸಿದರು.
ಕಾರ್ಯಕ್ರಮಕ್ಕೆ ಯಾವುದೇ ರಾಜಕೀಯ ನಾಯಕರಿಂದ ಸಹಾಯ ಪಡೆಯದೆ, ಕೇವಲ ಸ್ಥಳೀಯ ದಾನಿಗಳು ಮತ್ತು ಯುವಕರಾದ ಅಮ್ಜದ್, ನವಾಜ್, ಶಹನ್ಶಾಹ್, ಮಂಜೂ ಸೇರಿದಂತೆ ಹಲವರ ಸಹಕಾರಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಸಚಿವ ಕೆ.ಹೆಚ್ ಮುನಿಯಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ವೇಳೆ ಮೊಹಮ್ಮದಿಯಾ ನೌಜವಾನ್ ಸಮಿತಿ ಪದಾಧಿಕಾರಿಗಳು, ಸಮಾಜ ಸೇವಕ ಅಮ್ಜದ್ ಖಾನ್ ಮುಖಂಡರಾದ ಮನ್ಸೂರ್ ಅಲಿ, ಸೈಯದ್ ನಿಜಾಮ್, ರಜಾಕ್, ಮುಜಾಕ್ ಖಿರ್, ಇಬ್ರತ್, ಮುನೀರ್, ರಿಯಾಜ್ ಗೋರ್, ನಯೀಬ್, ಶಂಶೂ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್