ದತ್ತೂರಿ ಹಣ್ಣು ಮಾರಾಟ: ಅಮೆಜಾನ್, ಸ್ವಿಗ್ಗಿ ಸೇರಿ ಪ್ರಮುಖ ಆನ್ಲೈನ್ ವೇದಿಕೆಗಳ ಪರವಾನಗಿ ಅಮಾನತು
ಇ-ಕಾಮರ್ಸ್ ಸಂಸ್ಥೆಗಳ ಲೈಸೆನ್ಸ್ ಅಮಾನತು
ONLINE DATURA BAN


ಬೆಂಗಳೂರು, 25 ಆಗಸ್ಟ್ (ಹಿ.ಸ.)

ಆ್ಯಂಕರ್:

ವಿಷಕಾರಿ ಹಾಗೂ ತೀವ್ರ ಅಡ್ಡಪರಿಣಾಮ ಉಂಟುಮಾಡುವ ದತ್ತೂರಿ ಹಣ್ಣುಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುತ್ತಿದ್ದ ಪ್ರಮುಖ ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ವೇದಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಅಮೆಜಾನ್, ಸ್ವಿಗ್ಗಿ, ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್ ಸೇರಿದಂತೆ ಪ್ರಮುಖ ಆನ್‌ಲೈನ್ ವೇದಿಕೆಗಳಿಗೆ ನೀಡಿದ್ದ ಸ್ಪಷ್ಟನೆ ಕೋರಿ ನೋಟಿಸ್‌ಗೆ ತೃಪ್ತಿದಾಯಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ, ಅವುಗಳ ಇ-ಕಾಮರ್ಸ್ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.

ದತ್ತೂರಿ ಹಣ್ಣುಗಳ ಮಾರಾಟಕ್ಕೆ ಸಂಬಂಧಿಸಿದ ಎಲ್ಲ ಜಾಹೀರಾತುಗಳನ್ನು ತಕ್ಷಣ ತೆರವುಗೊಳಿಸುವಂತೆ ವೇದಿಕೆಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಈ ಹಣ್ಣುಗಳನ್ನು ಆನ್‌ಲೈನ್ ವೇದಿಕೆಗಳಿಗೆ ಪೂರೈಸುತ್ತಿದ್ದ ಪೂರೈಕೆದಾರರ ಪರವಾನಗಿಯನ್ನೂ ರದ್ದುಗೊಳಿಸಲಾಗಿದೆ.

ದತ್ತೂರಿ ಹಣ್ಣುಗಳ ಸೇವನೆಯಿಂದ ಮಾನವನ ಆರೋಗ್ಯದ ಮೇಲೆ ಗಂಭೀರ ಹಾಗೂ ಮಾರಕ ಪರಿಣಾಮ ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಇಂತಹ ಹಣ್ಣುಗಳನ್ನು ಖರೀದಿಸದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸಮಗ್ರ ತನಿಖೆ ಪೂರ್ಣಗೊಂಡು ವರದಿ ಸಲ್ಲಿಕೆಯಾಗುವವರೆಗೆ ಪರವಾನಗಿ ಅಮಾನತು ಆದೇಶ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande