ಗದಗ ಪತ್ರಕರ್ತರ ಕ್ರಿಕೆಟ್ ಪಂದ್ಯ: ವಿನ್ನರ್ಸ್ ತಂಡದ ವಿರುದ್ಧ ನೈಟ್ ರೈಡರ್ಸ್ ತಂಡಕ್ಕೆ ಭರ್ಜರಿ ಗೆಲುವು
ಗದಗ, 19 ಆಗಸ್ಟ್ (ಹಿ.ಸ.) ಆ್ಯಂಕರ್:- ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಹಮ್ಮಿಕೊಂಡಿರುವ ಗದಗ ಮೀಡಿಯಾ ಕ್ರಿಕೆಟ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ನೈಟ್ ರೈಡರ್ಸ್ ತಂಡವು ವಿನ್ನರ್ಸ್ ತಂಡದ ವಿರುದ್ಧ 7 ವಿಕೆಟ್ಗಳ ಅಂತ
ಫೋಟೋ


ಫೋಟೋ


ಗದಗ, 19 ಆಗಸ್ಟ್ (ಹಿ.ಸ.)

ಆ್ಯಂಕರ್:- ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಹಮ್ಮಿಕೊಂಡಿರುವ ಗದಗ ಮೀಡಿಯಾ ಕ್ರಿಕೆಟ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ನೈಟ್ ರೈಡರ್ಸ್ ತಂಡವು ವಿನ್ನರ್ಸ್ ತಂಡದ ವಿರುದ್ಧ 7 ವಿಕೆಟ್ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು.

ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ವಿನ್ನರ್ಸ್ ತಂಡವು ನಿಗದಿತ 10 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿತು. ವಿನ್ನರ್ಸ್ ತಂಡದ ಪರವಾಗಿ ನಾಯಕ ಅನಿಲ ತೆಂಬದಮನಿ 35 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ವಿನ್ನರ್ಸ್ ತಂಡದ ಪರವಾಗಿ ಮಂಜು ಪತ್ತಾರ ಅವರು 3 ವಿಕೆಟ್ ಪಡೆದು ಮಿಂಚಿದರೆ, ಸುರೇಶ ಕಡ್ಲಿಮಟ್ಟಿ, ಅರುಣಕುಮಾರ ಹಿರೇಮಠ ಹಾಗೂ ವಿಜಯ ಸೊರಟೂರ ತಲಾ 1 ವಿಕೆಟ್ ಪಡೆದರು.

77 ರನ್ ಬೆನ್ನತ್ತಿದ ನೈಟ್ ರೈಡರ್ಸ್ ತಂಡವು 7 ವಿಕೆಟ್ಗಳ ಅಂತರದಿಂದ ಭರ್ಜರಿ ಜಯ ಗಳಿಸಿತು. ವಿನ್ನರ್ಸ್ ತಂಡದ ಪರವಾಗಿ ನಾಯಕ ಸುರೇಶ ಕಡ್ಲಿಮಟ್ಟಿ 38 ರನ್, ಅರುಣಕುಮಾರ ಹಿರೇಮಠ 13, ಮಂಜು ಪತ್ತಾರ 12 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು. ವಿನ್ನರ್ಸ್ ತಂಡದ ರವಾಗಿ ಅನಿಲ ತೆಂಬದಮನಿ, ಪರಮೇಶ ಲಮಾಣಿ, ಅಶೋಕ ಹೂಗಾರ ತಲಾ ಒಂದು ವಿಕೆಟ್ ಪಡೆದರು. 3 ವಿಕೆಟ್ ಜೊತೆಗೆ 12 ರನ್ ಗಳಿಸಿ ಆಲ್ರೌಂಡ್ ಪ್ರದರ್ಶನ ನೀಡಿದ ಮಂಜು ಪತ್ತಾರ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಆರ್ಸಿಬಿ ವಿರುದ್ಧ ರೂರಲ್ ಕಿಂಗ್ಸ್ಗೆ ಜಯ: ಲೀಗ್ನ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ತಂಡವು ನಿಗದಿತ 10 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತು. ವಿನಾಯಕ ಚೌಡಾಪೂರ 31, ಫಿರೋಜ್ ಮೋಮಿನ್ 19 ಹಾಗೂ ರಾಘವೇಂದ್ರ ಕುಲಕರ್ಣಿ 13 ರನ್ ಗಳಿಸಿದರು. ರೂರಲ್ ಕಿಂಗ್ಸ್ ಪರವಾಗಿ ಶಿವಾನಂದ ಹಿರೇಮಠ 4, ನಿಂಗನಗೌಡ ಹನಮಗೌಡ್ರ ಹಾಗು ಸಂಜೀವ್ ಪಾಂಡ್ರೆ ಅವರು ತಲಾ ಒಂದು ವಿಕೆಟ್ ಪಡೆದರು.

90ರನ್ ಗುರಿ ಬೆನ್ನತ್ತಿದ 7 ವಿಕೆಟ್ಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿತು. ಶಿವಾನಂದ ಹಿರೇಮಠ 37, ನಿಂಗನಗೌಡ ಹನಮಗೌಡ್ರ 18 ರನ್ ಗಳಿಸಿದರು. ಆರ್ಸಿಬಿ ತಂಡದ ಪರವಾಗಿ ಗೀರೀಶ ಪತ್ತಾರ, ಶವಕುಮಾರ ಕುಷ್ಟಗಿ ಹಾಗೂ ಫಿರೋಜ್ ಮೋಮಿನ್ ತಲಾ ಒಂದು ವಿಕೆಟ್ ಪಡೆದರು. 4 ವಿಕೆಟ್ ಜೊತೆಗೆ 37 ರನ್ ಗಳಿಸಿ ಆಲ್ರೌಂಡ್ ಪ್ರದರ್ಶನ ನೀಡಿದ ಶಿವಾನಂದ ಹಿರೇಮಠ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಆರ್ಡಿಪಿಆರ್ ವಿವಿ ಕುಲಪತಿಗಳಿಂದ ಗದಗ ಮೀಡಿಯಾ ಕ್ರಿಕೆಟ್ ಲೀಗ್ಗೆ ಚಾಲನೆ: ಟಾಸ್ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಸುರೇಶ ವಿ. ನಾಡಗೌಡರ ಮಾತನಾಡಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದಂತೆಯೇ ಪತ್ರಿಕಾರಂಗಕ್ಕೆ ಮಹತ್ವದ ಸ್ಥಾನವಿದೆ. ಸಮಾಜದ ಹಲವು ಮಹತ್ವ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಪತ್ರಿಕೋದ್ಯಮವು ಅಪಾರ ಕೊಡುಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.

ಪತ್ರಕರ್ತರಲ್ಲಿ ವೃತ್ತಿಬದ್ಧತೆ ಹೆಚ್ಚಬೇಕು. ಆ ನಿಟ್ಟಿನಲ್ಲಿ, ವಿವಿಯಲ್ಲಿ ಪತ್ರಿಕಾ ದಿನಾಚರಣೆ, ವಿಚಾರ ಸಂಕಿರಣದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪತ್ರಿಕೋದ್ಯಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದರು.

ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಾರುತಿ ಜೋಗದಂಡಕರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ರಾಜ್ಯ ಕಾರ್ಯಕಾರಣಿ ಸದಸ್ಯ ಅರುಣಕುಮಾರ ಹಿರೇಮಠ, ವಿನ್ನರ್ಸ್ ತಂಡದ ಮಾಲೀಕರಾದ ಅನಂತ ಕಾರ್ಕಳ, ಸುನೀಲ್ ತೆಂಬದಮನಿ, ಟಿ.ಎನ್. ಭಾಂಡಗೆ, ರೂರಲ್ ಕಿಂಗ್ಸ್ನ ಜಗದೀಶ ಪೂಜಾರ, ಆರ್ಸಿಬಿಯ ಅಜಿತ ಹೊಂಬಾಳಿ, ನೈಟ್ ರೈಡರ್ಸ್ ತಂಡದ ಎಚ್.ಎಂ. ಶರೀಫನವರ, ಆನಂದ ಸಾಲಿಗ್ರಾಮ, ಆನಂದಯ್ಯ ವಿರಕ್ತಮಠ ಸೇರಿ ಕಾನಿಪ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande