ವಾಜಪೇಯಿ ಪುಣ್ಯತಿಥಿ:ಸದೈವ ಅಟಲ್’ಗೆ ಪ್ರಧಾನಿ ಮೋದಿ ಭೇಟಿ, ಗೌರವ ನಮನ
ನವದೆಹಲಿ, 16 ಆಗಸ್ಟ್ (ಹಿ.ಸ.): ಆ್ಯಂಕರ್:ಮಾಜಿ ಪ್ರಧಾನಿ ಹಾಗೂ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ‘ಸದೈವ ಅಟಲ್’ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. ಈ ಕುರಿತು ಎಕ್ಸನಲ್ಲಿ ಪ್ರಧಾನಿ ಮೋದಿ ಅವರು ವಾಜಪೇಯಿ ಅವರ ರಾಷ
प्रधानमंत्री नरेन्द्र मोदी की एक्स पोस्ट पर साझा तस्वीर।


भाजपा की एक्स पोस्ट पर साझा तस्वीर।


ನವದೆಹಲಿ, 16 ಆಗಸ್ಟ್ (ಹಿ.ಸ.):

ಆ್ಯಂಕರ್:ಮಾಜಿ ಪ್ರಧಾನಿ ಹಾಗೂ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ‘ಸದೈವ ಅಟಲ್’ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು.

ಈ ಕುರಿತು ಎಕ್ಸನಲ್ಲಿ ಪ್ರಧಾನಿ ಮೋದಿ ಅವರು ವಾಜಪೇಯಿ ಅವರ ರಾಷ್ಟ್ರಸೇವೆಯನ್ನು ಸ್ಮರಿಸಿ, ಭಾರತದ ಪ್ರಗತಿಯಲ್ಲಿ ಅವರ ಪಾತ್ರ ಅನನ್ಯವಾಗಿತ್ತು ಎಂದು ಹೇಳಿದರು. ವಾಜಪೇಯಿ ಅವರು ದೂರದೃಷ್ಟಿಯುಳ್ಳ ಅಸಾಧಾರಣ ರಾಜಕಾರಣಿಯಾಗಿದ್ದು, ತಮ್ಮ ಜೀವನವನ್ನು ರಾಷ್ಟ್ರ ಸೇವೆಗೆ ಸಮರ್ಪಿಸಿದ್ದರು. ಅವರ ಮಾತುಗಳು, ಆದರ್ಶಗಳು ಹಾಗೂ ನಾಯಕತ್ವ ಹಲವು ತಲೆಮಾರುಗಳಿಗೆ ಸ್ಫೂರ್ತಿಯಾಗಿವೆ ಎಂದು ಪ್ರಧಾನಿ ತಿಳಿಸಿದರು.

ವಾಜಪೇಯಿ ಅವರು 1924ರ ಡಿಸೆಂಬರ್ 25ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದ್ದರು. 2018ರ ಆಗಸ್ಟ್ 16ರಂದು ನವದೆಹಲಿಯಲ್ಲಿ ನಿಧನರಾದರು. ಭಾರತೀಯ ಜನತಾ ಪಕ್ಷದಿಂದ ಪ್ರಧಾನಿಯಾದ ಮೊದಲ ನಾಯಕರಾಗಿದ್ದ ಅವರು, ಉತ್ತಮ ಆಡಳಿತ ಮತ್ತು ಜನಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು.

ಭಾರತೀಯ ಜನತಾ ಪಕ್ಷವೂ ವಾಜಪೇಯಿ ಅವರ ಪುಣ್ಯತಿಥಿಯಂದು ಗೌರವ ನಮನ ಸಲ್ಲಿಸಿ, ಅವರನ್ನು ಭಾರತೀಯ ರಾಜಕೀಯದ ಯುಗಪುರುಷ, ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶಕ ಹಾಗೂ ಸ್ಫೂರ್ತಿಯ ಮೂಲ ಎಂದು ಸ್ಮರಿಸಿತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಾಜಪೇಯಿ ಅವರ ರಾಷ್ಟ್ರಸೇವೆಯನ್ನು ಸ್ಮರಿಸಿ, ‘ರಾಷ್ಟ್ರ ಮೊದಲು, ಸದಾ ಮೊದಲು’ ಎಂಬ ಧ್ಯೇಯದೊಂದಿಗೆ ಅವರು ಜೀವನಪೂರ್ತಿ ಕಾರ್ಯನಿರ್ವಹಿಸಿದ್ದರು ಎಂದರು. ಅವರ ನಾಯಕತ್ವದಲ್ಲಿ ಭಾರತವು ರಕ್ಷಣಾ ಸಾಮರ್ಥ್ಯ, ಆರ್ಥಿಕ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಮಹತ್ವದ ಪ್ರಗತಿ ಸಾಧಿಸಿತು ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಾಜಪೇಯಿ ಅವರನ್ನು ದೇಶಭಕ್ತ ರಾಜಕಾರಣಿ ಎಂದು ಸ್ಮರಿಸಿ, ಅವರ ಜೀವನದ ಪ್ರತಿಯೊಂದು ಕ್ಷಣವೂ ರಾಷ್ಟ್ರಸೇವೆಗೆ ಸಮರ್ಪಿತವಾಗಿತ್ತು ಎಂದರು. ಪರಮಾಣು ಪರೀಕ್ಷೆ ಮತ್ತು ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ ಅವರು, ಮೌಲ್ಯಾಧಾರಿತ ರಾಜಕಾರಣದ ಮೂಲಕ ಅಂತ್ಯೋದಯ ಹಾಗೂ ಉತ್ತಮ ಆಡಳಿತದ ಪರಿಕಲ್ಪನೆಗೆ ಬಲ ನೀಡಿದ್ದರು ಎಂದು ಹೇಳಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande