ದೇಶದ ಪ್ರಗತಿಗೆ ವಿಧ್ಯಾರ್ಥಿಗಳು ಶ್ರಮಿಸಲಿ : ರಾಜಶೇಖರ್ ಪಟ್ಟಣಶೆಟ್ಟಿ
ಬಳ್ಳಾರಿ, 15 ಆಗಸ್ಟ್ (ಹಿ.ಸ.) ಆ್ಯಂಕರ್ : ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಶಿಸ್ತು ದೇಶಪ್ರೇಮ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ರಾಜಶೇಖರ್ ಪಟ್ಟಣಶೆಟ್ಟಿಯವರು ತಿಳಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದ ಸ್ಮರಣೆ ವೀರರ ಬಲಿದಾನದ ಗೌರವ ಹಾಗೂ
ದೇಶದ ಪ್ರಗತಿಗೆ ವಿಧ್ಯಾರ್ಥಿಗಳು ಶ್ರಮಿಸಲಿ :  ರಾಜಶೇಖರ್ ಪಟ್ಟಣಶೆಟ್ಟಿ


ಬಳ್ಳಾರಿ, 15 ಆಗಸ್ಟ್ (ಹಿ.ಸ.)

ಆ್ಯಂಕರ್ : ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಶಿಸ್ತು ದೇಶಪ್ರೇಮ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ರಾಜಶೇಖರ್ ಪಟ್ಟಣಶೆಟ್ಟಿಯವರು ತಿಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಸ್ಮರಣೆ ವೀರರ ಬಲಿದಾನದ ಗೌರವ ಹಾಗೂ ಮಾತೃಭೂಮಿಯ ಮೇಲಿನ ಅಪಾರ ಅಭಿಮಾನವನ್ನು ಹೊತ್ತು ಶ್ರೀ ವಾಸವಿ ವಿದ್ಯಾಲಯದಲ್ಲಿ 80 ನೇ ಸ್ವಾತಂತ್ರ್ಯೋತ್ಸವನ್ನು ಅತಂತ್ಯ ಭಾವಪೂರ್ಣವಾಗಿ ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿ ಭಾರತವನ್ನು ಕಟ್ಟುವ ಹೊಣೆ ಇಂದಿನ ಯುವ ಪೀಳಿಗೆಯ ಮೇಲಿನ ಪುಸ್ತಕದ ಜ್ಞಾನವು ಬದುಕಿನ ಮೌಲ್ಯಗಳೊಂದಿಗೆ ಬೆರೆತಾಗ ಮಾತ್ರ ಶಕ್ತಿಶಾಲಿ ರಾಷ್ಟ್ರ ನಿಮಾರ್ಣ ಸಾಧ್ಯ ಪ್ರತಿಯೊಬ್ಬ ವಿದ್ಯಾರ್ಥಿಯ ಹೃದಯದಲ್ಲಿ ಭಾರತ ಮೊದಲು ಎಂಬ ಭಾವನೆ ಮೂಡಬೇಕು. ಎಂದು ಕರೆ ನೀಡಿದರು.

ಶ್ರೀ ವಾಸವಿ ಎಜ್ಯುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷರಾದ ಜಿತೇಂದ್ರಪ್ರಸಾದ್ ರವರು ಮಾತನಾಡಿ ದೇಶಕ್ಕಾಗಿ ಗಡಿಯಲ್ಲಿ ನಿಂತಿರುವ ಸ್ವೆನಿಕನ ಧ್ಯೆರ್ಯವಾಗಲಿ , ವಿಜ್ಞಾನಿಯ ಸಂಶೋಧನೆಯಾಗಲಿ, ,ರೈತನಬೆವರಾಗಲಿ , ಶಿಕ್ಷಕರ ಮಾರ್ಗದರ್ಶನವಾಗಲಿ ಪ್ರತಿಯೊಂದು ಪ್ರಾಮಾಣಿಕ ಪ್ರಯತ್ನವೂ ಭಾರತ ಮಾತೆಗೆ ಸಲ್ಲಿಸುವ ಸೇವಯೇ ಎಂದು ಹೃದಯಸ್ಪರ್ಶಿ ಸಂದೇಶ ನೀಡಿದರು.

ದೇಶಪ್ರೇಮ ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿರಬೇಕು ; ರಾಷ್ಟ್ರದ ಗೌರವವನ್ನು ಎತ್ತಿ ಹಿಡಿದು, ಪ್ರತಿಯೊಂದು ಕರ್ತವ್ಯವನ್ನೂ ನಿಷ್ಠೆಯಿಂದ ನಿರ್ವಹಿಸುವುದೇ ನಿಜವಾದ ದೇಶಸೇವೆ ಎಂದು ವಿದ್ಯಾರ್ಥಿಗಳು ತಮ್ಮ ಭಾಷಣದಲ್ಲಿ ವ್ಯಕ್ತ ಪಡಿಸಿದರು.ಎಸ್,ಎಸ್,ಎಲ್,ಸಿ ಪರೀಕ್ಷೆಯಲ್ಲಿ ಅತ್ಯತ್ತಮ ಪಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅವರ ಸಾಧನೆಯನ್ನು ಆನಂಧಿಸಿದ ಗಣ್ಯರು, ಪರಿಶ್ರಮದ ಮೂಲಕ ಪಡೆದ ಯಶಸ್ಸು ಇತರ ಮಕ್ಕಳಿಗೂ ಪ್ರೇರಣೆಯಾಗಲಿ ಎಂದು ಆಶೀಸಿದರು.

ವಾಸವಿ ಕಿಂಡರ್ ಗಾರ್ಟನ್ ಮತ್ತು ಪ್ರಾಥಮಿಕ ವಿಭಾಗದ ಮಕ್ಕಳು ಸೈನಿಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷದಲ್ಲಿ ಕಾಣಿಸಿಕೊಂಡು ದೇಶಕ್ಕಾಗಿ ಸೇವೆ ಸಲ್ಲಿಸಿದ ಮಹನೀಯರು ಸ್ಮರಿಸಿದರು. ಪುಟ್ಟ ಮಕ್ಕಳ ಮುಗ್ದ ಮುಖಗಳಲ್ಲಿ ಮೂಡಿದ ರಾಷ್ಟ್ರಾಭಿಮಾನ ಎಲ್ಲರ ಹೃದಯವನ್ನು ಸ್ಪರ್ಶಿಸಿತು.

ಕು.ಬಿಲ್ವಶ್ರೀ ಮತ್ತು ಸ್ವಾತಿ ಪ್ರಾರ್ಥನೆ ಗೀತೆಯನ್ನು ಸಲ್ಲಿಸಿದರು. ಶ್ರಿಮತಿ ಹಂಪಮ್ಮ ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಜಬೀನ ಬೇಗಮ್ ಕರ್ಯಕ್ರಮವನ್ನು ನಿರ್ವಹಿಸಿದರು.ಕುಮಾರಿ ಪವಿತ್ರ ವಂದನಾರ್ಪಣೆ ನೆರವೇರಿಸಿದರು.

ವಾಸವಿ ಎಜ್ಯುಕೇಶನ್ ಟ್ರಸ್ಟ್ ನ ವತಿಯಿಂದ ಮುಖ್ಯ ಅತಿಥಿಗಳಿಗೆ ಸನ್ಮಾನಿಸಲಾಯಿತು.ರಾಷ್ಟ್ರಗೀತೆಯ ಘನಗಂಭೀರ ಗಾಯನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಎಲ್ಲರ ಹೃದಯದಲ್ಲು ಒಂದೇ ಭಾವನೆ ಮೊಳಗಿತ- “ ನನ್ನ ದೇಶ, ನನ್ನ ಹೆಮ್ಮೆ : ಭಾರತವೇ ನನ್ನ ಉಸಿರು.”ಎಲ್ಲರಿಗೂ ಸಿಹಿ ವಿತರಿಸುವ ಮೂಲಕ ಕಾರ್ಯಕ್ರಮವನ್ನು ಸಂತಸದಿಂದ ಸಮಾಪ್ತಿಗೊಳಿಸಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande