
ಕೋಲಾರ, ಜುಲೈ ೦೯ (ಹಿ.ಸ.)
ಆಂಕರ್ : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ೨೦೨೬-೨೭ನೇ ಸಾಲಿನ “ಕಲಾ ನಡಿಗೆ ನಿಮ್ಮ ಬಳಿಗೆ” ಯೋಜನೆಯಡಿ ನಗರದ ಐತಿಹಾಸಿಕ ಕೋಲಾರಮ್ಮ ದೇವಾಲಯದಲ್ಲಿ ಆಯೋಜಿಸುತ್ತಿರುವ “ಸಂಜೆ ಸೌರಭ” ಕಾರ್ಯಕ್ರಮವು ಈ ಶುಕ್ರವಾರವೂ ಕಲಾ ರಸಿಕರನ್ನು ರಂಜಿಸಲು ಸಜ್ಜಾಗಿದೆ.
ಪ್ರತಿ ಶುಕ್ರವಾರದಂತೆ ಈ ವಾರವೂ ಸಂಜೆ ೦೬.೩೦ ಗಂಟೆಗೆ ಕಾರ್ಯಕ್ರಮ ಜರುಗಲಿದ್ದು, ನಾಡಿನ ಪ್ರತಿಭಾವಂತ ಕಲಾವಿದರು ಕಲಾ ಪ್ರದರ್ಶನ ನೀಡಲಿದ್ದಾರೆ. ಕುಮಾರಿ ಕಾವ್ಯಶ್ರೀ ವೈ. ಅವರಿಂದ ಆಕರ್ಷಕ ಭರತನಾಟ್ಯ, ಕುಮಾರ ತನುಷ್ ಕೆ.ಎಂ. ಅವರಿಂದ ಸುಶ್ರಾವ್ಯ ಭಕ್ತಿಗೀತೆಗಳ ಗಾಯನ ಹಾಗೂ ಪುರಂದರದಾಸರ ಆರಾಧನಾ ಸಮಿತಿಯ ಶ್ರೀ ನಾರಾಯಣಗೌಡ ಅವರಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಮೂಡಿಬರಲಿವೆ.
ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಹಾಗೂ ಸಾರ್ವಜನಿಕರಿಗೆ ಸಾಂಸ್ಕೃತಿಕ ರಸದೌತಣ ಉಣಬಡಿಸುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಕಲಾ ರಸಿಕರು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಹಾಗೂ ಸದುಪಯೋಗ ಪಡೆದುಕೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್