ಜಾಗತಿಕ ಮಾರುಕಟ್ಟೆಯಿಂದ ದುರ್ಬಲ ಸೂಚನೆ
ನವದೆಹಲಿ, ಜುಲೈ 30(ಹಿ.ಸ.): ಆ್ಯಂಕರ್: ಅಮೆರಿಕದ ಷೇರುಪೇಟೆಗಳು ಭಾರೀ ಕುಸಿತದೊಂದಿಗೆ ವಹಿವಾಟು ಮುಗಿಸಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಿಂದ ದುರ್ಬಲ ಸೂಚನೆಗಳು ವ್ಯಕ್ತವಾಗಿವೆ. ಆದರೆ ಡೌ ಜೋನ್ಸ್ ಫ್ಯೂಚರ್ಸ್‌ನಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ. ಯುರೋಪ್ ಹಾಗೂ ಏಷ್ಯಾದ ಷೇರುಪೇಟೆಗಳ
प्रतीकात्मक


ನವದೆಹಲಿ, ಜುಲೈ 30(ಹಿ.ಸ.):

ಆ್ಯಂಕರ್:

ಅಮೆರಿಕದ ಷೇರುಪೇಟೆಗಳು ಭಾರೀ ಕುಸಿತದೊಂದಿಗೆ ವಹಿವಾಟು ಮುಗಿಸಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಿಂದ ದುರ್ಬಲ ಸೂಚನೆಗಳು ವ್ಯಕ್ತವಾಗಿವೆ. ಆದರೆ ಡೌ ಜೋನ್ಸ್ ಫ್ಯೂಚರ್ಸ್‌ನಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ. ಯುರೋಪ್ ಹಾಗೂ ಏಷ್ಯಾದ ಷೇರುಪೇಟೆಗಳಲ್ಲಿ ಮಿಶ್ರ ವಹಿವಾಟು ನಡೆಯುತ್ತಿದೆ.

ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಉಳಿಸುವ ನಿರ್ಧಾರದಿಂದ ಹೂಡಿಕೆದಾರರ ಮನೋಭಾವಕ್ಕೆ ಹೊಡೆತ ಬಿದ್ದಿದ್ದು, ವಾಲ್‌ಸ್ಟ್ರೀಟ್‌ನ ಪ್ರಮುಖ ಸೂಚ್ಯಂಕಗಳು ತೀವ್ರ ಕುಸಿತ ದಾಖಲಿಸಿವೆ. ಡೌ ಜೋನ್ಸ್ ಶೇ.2.19, ಎಸ್‌ ಆ್ಯಂಡ್‌ ಪಿ 500 ಶೇ.1.52 ಹಾಗೂ ನ್ಯಾಸ್‌ಡಾಕ್ ಶೇ.1.74ರಷ್ಟು ಇಳಿಕೆಯಾಗಿವೆ. ಆದರೆ ಡೌ ಜೋನ್ಸ್ ಫ್ಯೂಚರ್ಸ್ ಶೇ.0.13ರಷ್ಟು ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ.

ಯುರೋಪಿನ ಮಾರುಕಟ್ಟೆಗಳಲ್ಲಿ ಎಫ್‌ಟಿಎಸ್‌ಇ ಏರಿಕೆ ಕಂಡರೆ, ಸಿಎಸಿ ಹಾಗೂ ಡಿಎಎಕ್ಸ್ ಸೂಚ್ಯಂಕಗಳು ಅಲ್ಪ ಕುಸಿತ ದಾಖಲಿಸಿವೆ.

ಏಷ್ಯಾದ ಒಂಬತ್ತು ಪ್ರಮುಖ ಮಾರುಕಟ್ಟೆಗಳ ಪೈಕಿ ನಾಲ್ಕು ಏರಿಕೆ ಮತ್ತು ಐದು ಕುಸಿತದೊಂದಿಗೆ ವಹಿವಾಟು ನಡೆಸುತ್ತಿವೆ. ಗಿಫ್ಟ್ ನಿಫ್ಟಿ, ನಿಕ್ಕೇಯಿ, ತೈವಾನ್ ವೇಯ್ಟೆಡ್ ಹಾಗೂ ಜಕಾರ್ತಾ ಕಾಂಪೊಸಿಟ್ ಏರಿಕೆಯಲ್ಲಿ ವಹಿವಾಟು ನಡೆಸುತ್ತಿದ್ದರೆ, ಸ್ಟ್ರೇಟ್ಸ್ ಟೈಮ್ಸ್, ಹ್ಯಾಂಗ್ ಸೆಂಗ್, ಕೋಸ್ಪಿ, ಎಸ್‌ಇಟಿ ಕಾಂಪೊಸಿಟ್ ಹಾಗೂ ಶಾಂಘೈ ಕಾಂಪೊಸಿಟ್ ಸೂಚ್ಯಂಕಗಳು ಕುಸಿತದೊಂದಿಗೆ ವಹಿವಾಟು ನಡೆಸುತ್ತಿವೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande