ನಾಳೆ ಪ್ರಧಾನಿ ಮೋದಿ ರಾಜಸ್ಥಾನ–ಗುಜರಾತ್ ಪ್ರವಾಸ
ನವದೆಹಲಿ, 03 ಜುಲೈ (ಹಿ.ಸ.): ಆ್ಯಂಕರ್: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜಸ್ಥಾನ ಮತ್ತು ಗುಜರಾತ್‌ಗೆ ಭೇಟಿ ನೀಡಿ, ಹಲವು ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ರಾಜಸ್ಥಾನದಲ್ಲಿ ಸುಮಾರು ₹1.06 ಲಕ್ಷ ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿ ಶಿಲಾನ್ಯಾಸ ನೆರವೇರಿಸಲಿದ
ನಾಳೆ ಪ್ರಧಾನಿ ಮೋದಿ ರಾಜಸ್ಥಾನ–ಗುಜರಾತ್ ಪ್ರವಾಸ


ನವದೆಹಲಿ, 03 ಜುಲೈ (ಹಿ.ಸ.):

ಆ್ಯಂಕರ್:

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜಸ್ಥಾನ ಮತ್ತು ಗುಜರಾತ್‌ಗೆ ಭೇಟಿ ನೀಡಿ, ಹಲವು ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ರಾಜಸ್ಥಾನದಲ್ಲಿ ಸುಮಾರು ₹1.06 ಲಕ್ಷ ಕೋಟಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಜೋಧ್‌ಪುರದಲ್ಲಿ ₹480 ಕೋಟಿ ವೆಚ್ಚದ ನೂತನ ವಿಮಾನ ನಿಲ್ದಾಣ ಟರ್ಮಿನಲ್ ಉದ್ಘಾಟನೆ, ಪರಿಷ್ಕೃತ ಉಡಾನ್ ಯೋಜನೆಗೆ ಚಾಲನೆ ಹಾಗೂ ಪಚಪದ್ರಾದ ದೇಶದ ಮೊದಲ ಗ್ರೀನ್‌ಫೀಲ್ಡ್ ರಿಫೈನರಿ–ಪೆಟ್ರೋಕೆಮಿಕಲ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಜೊತೆಗೆ ಜೈಪುರ ಮೆಟ್ರೋ ಎರಡನೇ ಹಂತ, ರೈಲು, ರಸ್ತೆ ಮತ್ತು ಸೌರ ವಿದ್ಯುತ್ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ, ಸುಮಾರು 54 ಸಾವಿರ ಯುವಕರಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ.

ಬಳಿಕ ಗುಜರಾತ್‌ನ ಸಾಣಂದ್‌ನಲ್ಲಿ ₹7,500 ಕೋಟಿಗೂ ಅಧಿಕ ಹೂಡಿಕೆಯ ಸಿಜಿ ಸೆಮಿ ಓಎಸ್‌ಎಟಿ ಸೆಮಿಕಂಡಕ್ಟರ್ ಘಟಕವನ್ನು ಉದ್ಘಾಟಿಸಲಿದ್ದು, ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande