ಇ-ರಿಕ್ಷಾ ಸ್ಥಗಿತಗೊಳಿಸುವ ಆ್ಯಪ್ ನಿರ್ಬಂಧಿಸಿದ ಕೇಂದ್ರ ಸರ್ಕಾರ
ನವದೆಹಲಿ, 03 ಜುಲೈ (ಹಿ.ಸ.): ಆ್ಯಂಕರ್:ಇ-ರಿಕ್ಷಾಗಳನ್ನು ದೂರದಿಂದಲೇ ನಿಲ್ಲಿಸಲು ಬಳಸಲಾಗುತ್ತಿದೆ ಎಂಬ ಆರೋಪ ಎದುರಿಸಿದ್ದ ಕೆಲವು ಮೊಬೈಲ್ ಅನ್ವಯಿಕೆಗಳನ್ನು ಕೇಂದ್ರ ಸರ್ಕಾರ ಅನ್ವಯಿಕೆ ಮಳಿಗೆಯಿಂದ ತೆಗೆಸಿದೆ. ಇಂತಹ ಹಾನಿಕಾರಕ ಅನ್ವಯಿಕೆಗಳು ಮುಂದೆಯೂ ಲಭ್ಯವಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂ
ಇ ರಿಕ್ಷಾ


ನವದೆಹಲಿ, 03 ಜುಲೈ (ಹಿ.ಸ.):

ಆ್ಯಂಕರ್:ಇ-ರಿಕ್ಷಾಗಳನ್ನು ದೂರದಿಂದಲೇ ನಿಲ್ಲಿಸಲು ಬಳಸಲಾಗುತ್ತಿದೆ ಎಂಬ ಆರೋಪ ಎದುರಿಸಿದ್ದ ಕೆಲವು ಮೊಬೈಲ್ ಅನ್ವಯಿಕೆಗಳನ್ನು ಕೇಂದ್ರ ಸರ್ಕಾರ ಅನ್ವಯಿಕೆ ಮಳಿಗೆಯಿಂದ ತೆಗೆಸಿದೆ. ಇಂತಹ ಹಾನಿಕಾರಕ ಅನ್ವಯಿಕೆಗಳು ಮುಂದೆಯೂ ಲಭ್ಯವಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅನ್ವಯಿಕೆ ಮಳಿಗೆಗಳಿಗೂ ಸೂಚನೆ ನೀಡಲಾಗಿದೆ.

ಸರ್ಕಾರದ ಮೂಲಗಳ ಪ್ರಕಾರ, ಬಿಎಟಿ-ಬಿಎಂಎಸ್, ಲೋಸಿಗಿ ಹಾಗೂ ಇಪೋಕ್-ಐ-ಇಒನ್ ಎಂಬ ಅನ್ವಯಿಕೆಗಳನ್ನು ತೆಗೆದುಹಾಕುವಂತೆ ಆದೇಶಿಸಲಾಗಿದೆ. ಬ್ಯಾಟರಿಯಿಂದ ಕಾರ್ಯನಿರ್ವಹಿಸುವ ವಾಹನಗಳನ್ನು ದೂರದಿಂದಲೇ ನಿಷ್ಕ್ರಿಯಗೊಳಿಸಲು ಈ ಅನ್ವಯಿಕೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ರೀತಿಯ ದುರುಪಯೋಗಕ್ಕೆ ಕಾರಣವಾಗುವ ಇತರ ಅನ್ವಯಿಕೆಗಳನ್ನೂ ಪತ್ತೆಹಚ್ಚಿ ನಿರ್ಬಂಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಕೇಂದ್ರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇ-ರಿಕ್ಷಾಗಳನ್ನು ಸ್ಥಗಿತಗೊಳಿಸುವ ಕೆಲವು ಅನ್ವಯಿಕೆಗಳ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅವುಗಳನ್ನು ಅನ್ವಯಿಕೆ ಮಳಿಗೆಯಿಂದ ತೆಗೆಸಲಾಗಿದೆ ಎಂದು ದೃಢಪಡಿಸಿದರು.

ಈ ವಿಷಯವನ್ನು ಅನ್ವಯಿಕೆ ಮಳಿಗೆಗಳ ಆಡಳಿತದೊಂದಿಗೆ ಗಂಭೀರವಾಗಿ ಚರ್ಚಿಸಲಾಗುವುದು. ಸಾರ್ವಜನಿಕರಿಗೆ ಅಪಾಯ ಉಂಟುಮಾಡುವ ಇಂತಹ ಅನ್ವಯಿಕೆಗಳು ಮುಂದಿನ ದಿನಗಳಲ್ಲಿ ಲಭ್ಯವಾಗದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಅವರು ಹೇಳಿದರು.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚರಿಸುತ್ತಿದ್ದ ಇ-ರಿಕ್ಷಾವನ್ನು ಮೊಬೈಲ್ ಅನ್ವಯಿಕೆಯ ಮೂಲಕ ಚಲಿಸುತ್ತಿರುವಾಗಲೇ ಏಕಾಏಕಿ ನಿಲ್ಲಿಸುವ ದೃಶ್ಯಗಳು ವ್ಯಾಪಕವಾಗಿ ಹರಿದಾಡಿದ್ದವು. ಕೆಲವು ಚೀನಾ ಮೂಲದ ಅನ್ವಯಿಕೆಗಳು ನೀಲಿದಂತ (ಬ್ಲೂಟೂತ್) ಸಂಪರ್ಕ ಹೊಂದಿರುವ ಬ್ಯಾಟರಿಗಳನ್ನು ನಿಯಂತ್ರಿಸಿ ಇ-ರಿಕ್ಷಾಗಳನ್ನು ಸ್ಥಗಿತಗೊಳಿಸುತ್ತಿವೆ ಎಂಬ ಆರೋಪಗಳು ಕೇಳಿಬಂದಿದ್ದವು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande