
ಕೋಲಾರ, ೦೩ ಜುಲೈ (ಹಿ.ಸ)
ಆಂಕರ್ : ನಗರದ ಅರಳೇಪೇಟೆಯ ಗಣೇಶಗುಡಿ ರಸ್ತೆಯಲ್ಲಿನ ಎಸ್ಎಸ್ಎಲ್ವಿ ಸೂಪರ್ ಮಾರ್ಕೆಟ್ ಮೇಲಿನ ಮೊದಲ ಮಹಡಿಯಲ್ಲಿರುವ ಆಸರೆ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ಜು.೫ ರ ಭಾನುವಾರ ಬೆಳಗ್ಗೆ ೯ ಗಂಟೆಯಿ0ದ ಮಧ್ಯಾಹ್ನ ೨ ಗಂಟೆಯವರೆಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಬಿ.ಜಿ.ಮನೋಹರ್ಗೌಡ ತಿಳಿಸಿದ್ದಾರೆ.
ಶಿಬಿರದಲ್ಲಿ ಉಚಿತ ತಪಾಸಣೆಯ ಜತೆಗೆ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿರುವ ಅವರು, ಜನರಲ್ ಪಿಸಿಷಿಯನ್, ಪೀಡಿಯಾಟ್ರಿಕ್ಸ್, ಪ್ರಸೂತಿ ಮತ್ತು ಗೈನೆಕೋಲಜಿ ಚಿಕಿತ್ಸೆ, ಇಎನ್ಟಿ, ಶ್ವಾಸಕೋಶ ಸಮಸ್ಯೆಗಳಿಗೆ, ವೈದ್ಯಕೀಯ ಗ್ಯಾಸ್ಟೊçÃಲಜಿ ಮತ್ತಿತರ ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಲು ನಗರ ಮತ್ತು ಸುತ್ತಮುತ್ತಲ ಗ್ರಾಮೀಣ ಜನತೆಗೆ ಸುವರ್ಣಾವಕಾಶ ಕಲ್ಪಿಸಲಾಗಿದೆ.
ಉಚಿತ ಶಿಬಿರ, ಉಚಿತ ಸಮಾಲೋಚನೆ ಜತೆಗೆ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಸಾರ್ವಜನಿಕರು ದೂರವಾಣಿ ಸಂಖ್ಯೆ ೯೯೮೦೯೨೭೭೮೭, ೯೪೪೮೩೩೩೫೩೩, ೮೮೬೭೯೪೩೭೦೮ ರಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್