
ನವದೆಹಲಿ, ಜುಲೈ 29(ಹಿ.ಸ.):
ಆ್ಯಂಕರ್:ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ನೀಡಿದ ಕಾಣಿಕೆ ಮತ್ತು ದೇಣಿಗೆಗಳ ಭದ್ರತೆ ಕುರಿತು ಪ್ರಶ್ನೆ ಎತ್ತಿದ ಸಮಾಜವಾದಿ ಪಕ್ಷದ ಸಂಸದರು ಬುಧವಾರ ಸಂಸತ್ ಭವನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಸಂಸದೆ ಡಿಂಪಲ್ ಯಾದವ್ ಸೇರಿದಂತೆ ಪಕ್ಷದ ಹಲವು ಸಂಸದರು ಕೈಯಲ್ಲಿ ದಾನಪೆಟ್ಟಿಗೆ ಹಾಗೂ ಫಲಕಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮಂದಿರದಲ್ಲಿ ಭಕ್ತರು ಸಲ್ಲಿಸಿರುವ ದೇಣಿಗೆಯ ಸುರಕ್ಷತೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಅಖಿಲೇಶ್ ಯಾದವ್, ಮಂದಿರದ ದಾನಪೆಟ್ಟಿಗೆಯನ್ನೇ ರಕ್ಷಿಸಲು ಸಾಧ್ಯವಾಗದ ಸರ್ಕಾರ ದೇಶ ಮತ್ತು ಯುವಕರ ಭವಿಷ್ಯವನ್ನು ಹೇಗೆ ಸುರಕ್ಷಿತವಾಗಿರಿಸುತ್ತದೆ? ಎಂದು ಪ್ರಶ್ನಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.