ಹಡಪದ ಅಪ್ಪಣ್ಣ ಬಸವಣ್ಣನವರ ಸಿದ್ಧಾಂತಕ್ಕೆ ಬಲಗೈ ಬಂಟರಾಗಿದ್ದರು: ಹಾಲಪ್ಪಯ್ಯ ಶಾಸ್ತ್ರಿಗಳು
ಶಿವಮೊಗ್ಗ, 29 ಜುಲೈ (ಹಿ.ಸ.): ಆ್ಯಂಕರ್:ಬಸವಣ್ಣನವರ ತತ್ತ್ವ-ಸಿದ್ಧಾಂತಗಳ ಪ್ರಸಾರ ಮತ್ತು ಸಮಾನತೆಯ ಸಮಾಜ ನಿರ್ಮಾಣದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಪಾತ್ರ ಅಪಾರವಾಗಿದ್ದು, ಅವರು ಬಸವಣ್ಣನವರ ಬಲಗೈ ಬಂಟರಾಗಿದ್ದರು ಎಂದು ಕುವೆಂಪು ರಾಜ್ಯ ಪ್ರಶಸ್ತಿ ಪುರಸ್ಕೃತ ವೇ. ಹಾಲಪ್ಪಯ್ಯ ಶಾಸ್ತ್ರಿಗಳು ಹೇಳಿದರ
ಹಡಪದ ಅಪ್ಪಣ್ಣ ಜಯಂತಿ


ಶಿವಮೊಗ್ಗ, 29 ಜುಲೈ (ಹಿ.ಸ.):

ಆ್ಯಂಕರ್:ಬಸವಣ್ಣನವರ ತತ್ತ್ವ-ಸಿದ್ಧಾಂತಗಳ ಪ್ರಸಾರ ಮತ್ತು ಸಮಾನತೆಯ ಸಮಾಜ ನಿರ್ಮಾಣದಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಪಾತ್ರ ಅಪಾರವಾಗಿದ್ದು, ಅವರು ಬಸವಣ್ಣನವರ ಬಲಗೈ ಬಂಟರಾಗಿದ್ದರು ಎಂದು ಕುವೆಂಪು ರಾಜ್ಯ ಪ್ರಶಸ್ತಿ ಪುರಸ್ಕೃತ ವೇ. ಹಾಲಪ್ಪಯ್ಯ ಶಾಸ್ತ್ರಿಗಳು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ನಡೆದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಅಪ್ಪಣ್ಣನವರು ಕ್ಷೌರ ವೃತ್ತಿಯನ್ನು ಕಾಯಕವಾಗಿ ಸ್ವೀಕರಿಸಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಸುಮಾರು 242 ವಚನಗಳ ಮೂಲಕ ಕಾಯಕ, ಸತ್ಯ, ನಿಷ್ಠೆ, ಶಿವಭಕ್ತಿ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ್ದಾರೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಹೆಚ್. ವೀರಭದ್ರಯ್ಯ ಆಲದಹಳ್ಳಿ ಮಾತನಾಡಿ, ಸಮಾಜದ ಏಳಿಗೆಗಾಗಿ ಹಡಪದ ಅಪ್ಪಣ್ಣನವರು ಮಾಡಿದ ಸೇವೆ ಎಲ್ಲರಿಗೂ ಆದರ್ಶವಾಗಿದ್ದು, ಅವರ ತತ್ವ-ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ಅಧಿಕಾರಿಗಳು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande