ರಾಜ್ಯಸಭೆಯ ಪ್ರತಿಯೊಂದು ಕ್ಷಣವೂ ಪ್ರಜಾಪ್ರಭುತ್ವ ಬಲವರ್ಧನೆಗೆ ಮೀಸಲಾಗಿರಲಿ: ಉಪರಾಷ್ಟ್ರಪತಿ
ನವದೆಹಲಿ, 25 ಜುಲೈ (ಹಿ.ಸ.): ಆ್ಯಂಕರ್: ನೂತನವಾಗಿ ಆಯ್ಕೆಯಾದ ಹಾಗೂ ನಾಮನಿರ್ದೇಶಿತರಾದ ರಾಜ್ಯಸಭಾ ಸದಸ್ಯರಿಗಾಗಿ ಆಯೋಜಿಸಿದ್ದ ಎರಡು ದಿನಗಳ ಪರಿಚಯ ಮತ್ತು ತರಬೇತಿ ಕಾರ್ಯಕ್ರಮ ''ಪ್ರಾರಂಭ್'' ಅನ್ನು ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಉದ್ಘಾಟಿಸಿದರು. ಈ ಸಂದರ್ಭದಲ
ಪ್ರಾರಂಭ್ ಕಾರ್ಯಕ್ರಮದಲ್ಲಿ ಮಾತನಾಡಿದ ಉಪರಾಷ್ಟ್ರಪತಿ


ನವದೆಹಲಿ, 25 ಜುಲೈ (ಹಿ.ಸ.):

ಆ್ಯಂಕರ್:

ನೂತನವಾಗಿ ಆಯ್ಕೆಯಾದ ಹಾಗೂ ನಾಮನಿರ್ದೇಶಿತರಾದ ರಾಜ್ಯಸಭಾ ಸದಸ್ಯರಿಗಾಗಿ ಆಯೋಜಿಸಿದ್ದ ಎರಡು ದಿನಗಳ ಪರಿಚಯ ಮತ್ತು ತರಬೇತಿ ಕಾರ್ಯಕ್ರಮ 'ಪ್ರಾರಂಭ್' ಅನ್ನು ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ನಡೆಯುವ ಚರ್ಚೆ, ವಾದ-ವಿವಾದ ಅಥವಾ ಭಿನ್ನಾಭಿಪ್ರಾಯಗಳು ಅಂತಿಮವಾಗಿ ಜನಹಿತದ ನಿರ್ಧಾರಕ್ಕೆ ದಾರಿ ಮಾಡಿಕೊಡಬೇಕು ಎಂದು ಹೇಳಿದರು. ಆರೋಗ್ಯಕರ ಚರ್ಚೆಗಳು ಪ್ರಜಾಪ್ರಭುತ್ವವನ್ನು ಬಲಪಡಿಸಿದರೆ, ರಚನಾತ್ಮಕ ಸಹಕಾರ ರಾಷ್ಟ್ರದ ಪ್ರಗತಿಗೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯಸಭೆಯಲ್ಲಿ ಕಳೆಯುವ ಪ್ರತಿಯೊಂದು ದಿನ, ಗಂಟೆ, ನಿಮಿಷ ಹಾಗೂ ಕ್ಷಣವೂ ಪ್ರಜಾಪ್ರಭುತ್ವವನ್ನು ಮತ್ತಷ್ಟು ಸದೃಢಗೊಳಿಸಲು ಬಳಸಬೇಕು ಎಂದು ಸದಸ್ಯರಿಗೆ ಕರೆ ನೀಡಿದ ಅವರು, ಸದನದ ನಿಯಮಗಳು ಮತ್ತು ಸಂಪ್ರದಾಯಗಳಿಗೆ ಗೌರವ ನೀಡಿ, ಮಾಹಿತಿ ಆಧಾರಿತ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

ಪ್ರಶ್ನೋತ್ತರ ಅವಧಿ ಹಾಗೂ ಶೂನ್ಯ ವೇಳೆಯನ್ನು ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಲು ಸದ್ಬಳಕೆ ಮಾಡಿಕೊಳ್ಳುವ ಮೂಲಕ ರಾಜ್ಯಸಭೆಯ ಉನ್ನತ ಸಂಪ್ರದಾಯವನ್ನು ಉಳಿಸಬೇಕು ಎಂದು ಉಪರಾಷ್ಟ್ರಪತಿ ಸದಸ್ಯರಿಗೆ ಕಿವಿಮಾತು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande