ಅಸ್ಸಾಂ ಎಸ್ ಟಿ ಎಫ್ ಕಾರ್ಯಾಚರಣೆ: ಪಾಕ್ ಮೂಲದ ಉಗ್ರ ಜಾಲದ ಮೂವರು ಶಂಕಿತರ ಬಂಧನ
ಗುವಾಹಟಿ, 25 ಜುಲೈ (ಹಿ.ಸ.): ಆ್ಯಂಕರ್: ಅಸ್ಸಾಂ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್ಟಿಎಫ್) ನಡೆಸಿದ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನ ಮೂಲದ ಭಯೋತ್ಪಾದಕ-ಅಪರಾಧ ಜಾಲವಾದ ''ಶೆಹಜಾದ್ ಭಟ್ಟಿ ನೆಟ್ವರ್ಕ್'' ನೊಂದಿಗೆ ನಂಟು ಹೊಂದಿರುವ ಮೂವರು ಶಂಕಿತರನ್ನು ಧುಬ್ರಿ, ಚಿರಾಗ್ ಮತ್ತು ಬರ್ಪೇಟಾ ಜಿಲ್ಲೆಗಳಲ್
SBNNetwork


ಗುವಾಹಟಿ, 25 ಜುಲೈ (ಹಿ.ಸ.):

ಆ್ಯಂಕರ್:

ಅಸ್ಸಾಂ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್ಟಿಎಫ್) ನಡೆಸಿದ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನ ಮೂಲದ ಭಯೋತ್ಪಾದಕ-ಅಪರಾಧ ಜಾಲವಾದ 'ಶೆಹಜಾದ್ ಭಟ್ಟಿ ನೆಟ್ವರ್ಕ್' ನೊಂದಿಗೆ ನಂಟು ಹೊಂದಿರುವ ಮೂವರು ಶಂಕಿತರನ್ನು ಧುಬ್ರಿ, ಚಿರಾಗ್ ಮತ್ತು ಬರ್ಪೇಟಾ ಜಿಲ್ಲೆಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.

ಅಸ್ಸಾಂ ಪೊಲೀಸರ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ನೀಡಿರುವ ಮಾಹಿತಿಯ ಪ್ರಕಾರ, ಎಸ್ಟಿಎಫ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ಜುಲೈ 24ರಂದು ಈ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತರನ್ನು ಧುಬ್ರಿ ಜಿಲ್ಲೆಯ ಅಕರಮುಲ್ ಇಸ್ಲಾಮ್ (26), ಚಿರಾಗ್ ಜಿಲ್ಲೆಯ ಅಮೀನುರ್ ರೆಹಮಾನ್ (22) ಹಾಗೂ ಬರ್ಪೇಟಾ ಜಿಲ್ಲೆಯ ಅಬ್ದುಲ್ ಹುಸೇನ್ (54) ಎಂದು ಗುರುತಿಸಲಾಗಿದೆ.

ಉಗ್ರ ಜಾಲದ ಕೃತ್ಯಗಳ ವಿವರ:

ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್ಗಳ ನಿರ್ದೇಶನದ ಮೇರೆಗೆ ಈ ಜಾಲವು ಎನ್ಕ್ರಿಪ್ಟ್ ಮಾಡಿದ ಸಂವಹನ ಮಾಧ್ಯಮಗಳನ್ನು ಬಳಸಿಕೊಂಡು ಭಾರತದಲ್ಲಿ ಯುವಕರ ನೇಮಕಾತಿ, ಆನ್ಲೈನ್ ಮೂಲಕ ಮೂಲಭೂತವಾದ ಬಿತ್ತುವುದು, ಗುಪ್ತಚರ ಮಾಹಿತಿ ಸಂಗ್ರಹಣೆ (ರೆಕಿ), ಲಾಜಿಸ್ಟಿಕ್ ಬೆಂಬಲ, ಶಸ್ತ್ರಾಸ್ತ್ರಗಳ ಅಕ್ರಮ ಖರೀದಿ ಹಾಗೂ ಸ್ಲೀಪರ್ ಸೆಲ್ಗಳ ಸೃಷ್ಟಿಯಲ್ಲಿ ತೊಡಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸೂಚನೆಗಳಂತೆ ಈ ಸಂಘಟನೆ ಕಾರ್ಯನಿರ್ವಹಿಸುತ್ತಿದೆ ಎಂದು ಶಂಕಿಸಲಾಗಿದೆ.

ಅಲ್ಲದೆ, ತಮ್ಮ ಅಪರಾಧ ಚಟುವಟಿಕೆಗಳನ್ನು ಮುಚ್ಚಿಹಾಕಲು ಈ ನೆಟ್ವರ್ಕ್ ಹಲವು ಮುಂಚೂಣಿ ಸಂಘಟನೆಗಳನ್ನು ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ಖಲಿಸ್ತಾನ್ ಆರ್ಮ್ಡ್ ಫೋರ್ಸ್ , ಪಂಜಾಬ್ ಸಾವ್ರೆಂಟಿ ಶೇರ್-ಎ-ಪಂಜಾಬ್ ಬ್ರಿಗೇಡ್ ಮತ್ತು ತೆಹ್ರೀಕ್-ಎ-ತಾಲಿಬಾನ್ ಹಿಂದುಸ್ತಾನ್ ಸೇರಿದಂತೆ ವಿವಿಧ ಸಂಘಟನೆಗಳ ಹೆಸರುಗಳು ತನಿಖೆಯಲ್ಲಿ ಮುನ್ನೆಲೆಗೆ ಬಂದಿವೆ.

ವಶಪಡಿಸಿಕೊಂಡ ಸಾಮಗ್ರಿಗಳು:

ಕಾರ್ಯಾಚರಣೆ ವೇಳೆ ಪೊಲೀಸರು ಐದು ಮೊಬೈಲ್ ಫೋನ್ಗಳು, ಏಳು ಸಿಮ್ ಕಾರ್ಡ್ಗಳು, ಗುರುತಿನ ಚೀಟಿಗಳು, ಬ್ಯಾಂಕ್ ಪಾಸ್ಬುಕ್ಗಳು, ಡೆಬಿಟ್ ಕಾರ್ಡ್ಗಳು ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಜಾಲದಲ್ಲಿ ಇತರೆ ಸಂಪರ್ಕ ಹೋದಿದವರ, ಹಾಗೂ ಕೃತ್ಯದಲ್ಲಿ ಭಾಗಿಯಾದ ಇತರ ವ್ಯಕ್ತಿಗಳ ಪತ್ತೆಗಾಗಿ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / NAVEEN PARADESHII


 rajesh pande