ಕಚ್ಚಾ ತೈಲ ದರ ಏರಿಕೆ: ಜಾಗತಿಕ ಷೇರುಪೇಟೆಗಳಲ್ಲಿ ಭಾರಿ ಕುಸಿತ
ನವದೆಹಲಿ, ಜುಲೈ 24(ಹಿ.ಸ.): ಆ್ಯಂಕರ್:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಜಾಗತಿಕ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಹೆಚ್ಚಾಗಿದೆ. ಅಮೆರಿಕ, ಯುರೋಪ್ ಹಾಗೂ ಏಷ್ಯಾದ ಪ್ರಮುಖ ಷೇರುಪೇಟೆಗಳು ಶುಕ್ರವಾರ ಕುಸಿತದೊಂದಿಗೆ ವಹಿವಾಟು ನಡೆಸಿವೆ. ಅಮೆ
प्रतीकात्मक


ನವದೆಹಲಿ, ಜುಲೈ 24(ಹಿ.ಸ.):

ಆ್ಯಂಕರ್:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ತೀವ್ರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಜಾಗತಿಕ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಹೆಚ್ಚಾಗಿದೆ. ಅಮೆರಿಕ, ಯುರೋಪ್ ಹಾಗೂ ಏಷ್ಯಾದ ಪ್ರಮುಖ ಷೇರುಪೇಟೆಗಳು ಶುಕ್ರವಾರ ಕುಸಿತದೊಂದಿಗೆ ವಹಿವಾಟು ನಡೆಸಿವೆ.

ಅಮೆರಿಕದ ಡೌ ಜೋನ್ಸ್ ಸೂಚ್ಯಂಕ 506.93 ಅಂಕ (0.97%) ಕುಸಿದು 51,711.65 ಅಂಕಗಳಿಗೆ ತಲುಪಿದರೆ, ಎಸ್‌ಆ್ಯಂಡ್‌ಪಿ 500 ಸೂಚ್ಯಂಕ 1.21% ಹಾಗೂ ನ್ಯಾಸ್ಡಾಕ್ 2.15% ಇಳಿಕೆಯಾಗಿವೆ. ಯುರೋಪಿನ ಎಫ್‌ಟಿಎಸ್‌ಇ, ಸಿಎಸಿ ಮತ್ತು ಡಿಎಎಕ್ಸ್ ಸೂಚ್ಯಂಕಗಳೂ ಸಹ ನಷ್ಟದೊಂದಿಗೆ ವಹಿವಾಟು ಮುಗಿಸಿವೆ.

ಏಷ್ಯಾದ ಮಾರುಕಟ್ಟೆಗಳಲ್ಲಿಯೂ ವ್ಯಾಪಕ ಮಾರಾಟ ಕಂಡುಬಂದಿದೆ. ಗಿಫ್ಟ್ ನಿಫ್ಟಿ, ನಿಕ್ಕೇಯಿ, ಹ್ಯಾಂಗ್‌ಸೆಂಗ್, ಶಾಂಘೈ, ತೈವಾನ್, ಕೋಸ್ಪಿ ಹಾಗೂ ಜಕಾರ್ತಾ ಸೂಚ್ಯಂಕಗಳು ಕುಸಿತ ದಾಖಲಿಸಿವೆ. ಅವುಗಳಲ್ಲಿ ಕೋಸ್ಪಿ ಶೇ.5.70 ಮತ್ತು ನಿಕ್ಕೇಯಿ ಶೇ.3.06ರಷ್ಟು ಇಳಿಕೆಯಾಗಿರುವುದು ಪ್ರಮುಖವಾಗಿದೆ.

ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಅಮೆರಿಕದಲ್ಲಿ ಹಣದುಬ್ಬರದ ಆತಂಕ ಜಾಗತಿಕ ಹೂಡಿಕೆದಾರರ ಮನೋಭಾವದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಇದರ ಪರಿಣಾಮವಾಗಿ ವಿಶ್ವದ ಬಹುತೇಕ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಹೆಚ್ಚಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande