ಬಳ್ಳಾರಿ : ಮನೆಯಲ್ಲಿ ವೇಶ್ಯಾವಾಟಿಕೆ ; ದಂಪತಿ ಸೇರಿ ನಾಲ್ವರ ಬಂಧನ
ಬಳ್ಳಾರಿ, 21 ಜುಲೈ (ಹಿ.ಸ.) ಆ್ಯಂಕರ್ : ಬಳ್ಳಾರಿಯ ಜನನಿಬಿಡ ಪ್ರದೇಶ ಕಂಬಳಿ ಬಜಾರ್ನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದನ್ನು ತಿಳಿದ ಪೊಲೀಸರು ಆ ಮನೆಯ ಮೇಲೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿ, ಸಂತ್ರಸ್ತ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಆಭರಣ ಅಂಗಡಿಯಲ್ಲಿ ಕಾವಲುಗಾರನಾಗಿ
ಬಳ್ಳಾರಿ :  ಮನೆಯಲ್ಲಿ ವೇಶ್ಯಾವಾಟಿಕೆ ; ದಂಪತಿ ಸೇರಿ ನಾಲ್ವರ ಬಂಧನ

ಬಳ್ಳಾರಿ :  ಮನೆಯಲ್ಲಿ ವೇಶ್ಯಾವಾಟಿಕೆ ; ದಂಪತಿ ಸೇರಿ ನಾಲ್ವರ ಬಂಧನ

ಬಳ್ಳಾರಿ :  ಮನೆಯಲ್ಲಿ ವೇಶ್ಯಾವಾಟಿಕೆ ; ದಂಪತಿ ಸೇರಿ ನಾಲ್ವರ ಬಂಧನ

ಬಳ್ಳಾರಿ :  ಮನೆಯಲ್ಲಿ ವೇಶ್ಯಾವಾಟಿಕೆ ; ದಂಪತಿ ಸೇರಿ ನಾಲ್ವರ ಬಂಧನ

ಬಳ್ಳಾರಿ, 21 ಜುಲೈ (ಹಿ.ಸ.)

ಆ್ಯಂಕರ್ : ಬಳ್ಳಾರಿಯ ಜನನಿಬಿಡ ಪ್ರದೇಶ ಕಂಬಳಿ ಬಜಾರ್ನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದನ್ನು ತಿಳಿದ ಪೊಲೀಸರು ಆ ಮನೆಯ ಮೇಲೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿ, ಸಂತ್ರಸ್ತ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.

ಆಭರಣ ಅಂಗಡಿಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಕೆ. ಬ್ರಹ್ಮಯ್ಯಾಚಾರಿ (52), ಬಿಸಿಲಹಳ್ಳಿ ಗ್ರಾಮದ ನಿವಾಸಿ ಡ್ರೈವರ್ ವೆಂಕಟೇಶ್ (47), ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೆಟ್ಟೂರು ಗ್ರಾಮದ ಕೂಲಿ ಕೆಲಸಗಾದ ಪಿ. ನಾಗರಾಜ (34) ಮತ್ತು ಆರೋಪಿಯ ಪತ್ನಿ ಶ್ರೀಮತಿ ವಿಶಾಲಾಕ್ಷಿ ಬ್ರಹ್ಮಯ್ಯಾಚಾರಿ ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂದಿತರಿಂದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಅಲ್ಲದೇ, ಇಬ್ಬರು ಗ್ರಾಹಕರನ್ನು ವಿಚಾರಣೆ ಮಾಡಿ, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಕುರಿತು ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande