ಕಡ್ಡಾಯ ಸೇವಾಶುಲ್ಕಕ್ಕೆ ತಡೆ: 41 ರೆಸ್ಟೋರೆಂಟ್ಗಳ ವಿರುದ್ಧ ಸಿಸಿಪಿಎ ಕ್ರಮ
ನವದೆಹಲಿ, 19 ಜುಲೈ (ಹಿ.ಸ.): ಆ್ಯಂಕರ್: ಹೋಟೆಲ್‌, ಬಾರ್‌, ರೆಸ್ಟೋರೆಂಟ್‌ ಹಾಗೂ ಕ್ಯಾಂಟೀನ್‌ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಸೇವಾಶುಲ್ಕ (ಸರ್ವಿಸ್ ಚಾರ್ಜ್) ವಿಧಿಸುತ್ತಿರುವುದರ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕೇಂದ್ರ ಗ್ರಾಹಕ
ಕಡ್ಡಾಯ ಸೇವಾಶುಲ್ಕಕ್ಕೆ ತಡೆ: 41 ರೆಸ್ಟೋರೆಂಟ್ಗಳ ವಿರುದ್ಧ ಸಿಸಿಪಿಎ ಕ್ರಮ


ನವದೆಹಲಿ, 19 ಜುಲೈ (ಹಿ.ಸ.):

ಆ್ಯಂಕರ್:

ಹೋಟೆಲ್‌, ಬಾರ್‌, ರೆಸ್ಟೋರೆಂಟ್‌ ಹಾಗೂ ಕ್ಯಾಂಟೀನ್‌ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಸೇವಾಶುಲ್ಕ (ಸರ್ವಿಸ್ ಚಾರ್ಜ್) ವಿಧಿಸುತ್ತಿರುವುದರ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ಸೂಚನೆ ಮೇರೆಗೆ 41 ರೆಸ್ಟೋರೆಂಟ್‌ಗಳ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಲಾಗಿದೆ.

ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್‌ಸಿಎಚ್)ಗೆ ಬಂದ ದೂರುಗಳ ಆಧಾರದ ಮೇಲೆ ಗ್ರಾಹಕರ ಬಿಲ್‌ನಲ್ಲಿ ಪೂರ್ವನಿಯೋಜಿತವಾಗಿ ಸೇವಾಶುಲ್ಕ ಸೇರಿಸುತ್ತಿದ್ದ 41 ರೆಸ್ಟೋರೆಂಟ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಚಾಯೋಸ್, ಬಾರ್ಬಿಕ್ಯೂ ನೇಷನ್‌, ಎಲ್‌ಒಪೆರಾ ಫ್ರೆಂಚ್ ಬೇಕರಿ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಹಲವು ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ.

ಸೇವಾಶುಲ್ಕವು ಸಂಪೂರ್ಣವಾಗಿ ಗ್ರಾಹಕರ ಸ್ವಯಂ ಇಚ್ಛೆಗೆ ಒಳಪಟ್ಟದ್ದು. ಅದನ್ನು ಯಾವುದೇ ಕಾರಣಕ್ಕೂ ಕಡ್ಡಾಯವಾಗಿ ವಿಧಿಸುವಂತಿಲ್ಲ ಅಥವಾ ಬಿಲ್‌ನಲ್ಲಿ ಮೊದಲೇ ಸೇರಿಸುವಂತಿಲ್ಲ ಎಂದು ಸಿಸಿಪಿಎ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ಕುರಿತು ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದ್ದರೂ ಕೆಲವು ಸಂಸ್ಥೆಗಳು ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಗ್ರಾಹಕರ ಮೇಲೆ ಸೇವಾಶುಲ್ಕ ಪಾವತಿಸಲು ಒತ್ತಡ ಹೇರುವುದು ಗ್ರಾಹಕರ ಹಕ್ಕುಗಳ ಉಲ್ಲಂಘನೆಯಾಗಿದ್ದು, ಇಂತಹ ಪ್ರಕರಣಗಳಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಿಸಿಪಿಎ ಎಚ್ಚರಿಕೆ ನೀಡಿದೆ. ಸೇವಾಶುಲ್ಕವನ್ನು ಬಿಲ್‌ನಲ್ಲಿ ಸ್ವಯಂಚಾಲಿತವಾಗಿ ಸೇರಿಸುವ ಪದ್ಧತಿಯನ್ನು ತಕ್ಷಣ ನಿಲ್ಲಿಸುವಂತೆ ಸೂಚಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸೇವಾಶುಲ್ಕವು ಉತ್ತಮ ಸೇವೆಗೆ ಗ್ರಾಹಕರು ಸಂತೋಷದಿಂದ ನೀಡುವ ಗೌರವಧನವಾಗಿದ್ದು, ಅದನ್ನು ಕಡ್ಡಾಯವಾಗಿ ವಸೂಲಿ ಮಾಡುವುದು ಅಥವಾ ಪೂರ್ವನಿಯೋಜಿತವಾಗಿ ಬಿಲ್‌ಗೆ ಸೇರಿಸುವುದು ಸಂಪೂರ್ಣವಾಗಿ ತಪ್ಪು. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ಪಾರದರ್ಶಕ ಹಾಗೂ ಗ್ರಾಹಕ ಸ್ನೇಹಿ ಪದ್ಧತಿಗಳನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.

ಸೇವಾಶುಲ್ಕವನ್ನು ಕಡ್ಡಾಯವಾಗಿ ವಿಧಿಸಿರುವುದು ಕಂಡುಬಂದಲ್ಲಿ ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1915ಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದು ಸಿಸಿಪಿಎ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande