
ನವದೆಹಲಿ, 18 ಜುಲೈ (ಹಿ.ಸ.):
ಆ್ಯಂಕರ್:ಭಾರತದ ಮೊದಲ ಖಾಸಗಿ ಕಕ್ಷಾ ರಾಕೆಟ್ ವಿಕ್ರಮ್-1 ಯಶಸ್ವಿ ಉಡಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಕೈರೂಟ್ ಏರೋಸ್ಪೇಸ್ ತಂಡದೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ವಿಕ್ರಮ್-1 ಯಶಸ್ವಿ ಉಡಾವಣೆ ಭಾರತದ ಬಾಹ್ಯಾಕಾಶ ಪಯಣದಲ್ಲಿ ಒಂದು ನಿರ್ಣಾಯಕ ಕ್ಷಣವಾಗಿದೆ. ಖಾಸಗಿ ವಲಯದ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆ ಹೊಸ ಅವಕಾಶಗಳ ಬಾಗಿಲು ತೆರೆಯುತ್ತಿದ್ದು, ನಾವೀನ್ಯತೆಗೆ ವೇಗ ನೀಡುತ್ತಿದೆ. ಈ ಸಾಧನೆ ದೇಶದ ಅಸಂಖ್ಯಾತ ಯುವಜನರು ಇನ್ನಷ್ಟು ದೊಡ್ಡ ಕನಸು ಕಾಣಲು ಹಾಗೂ ನಿರ್ಭಯವಾಗಿ ಹೊಸತನದತ್ತ ಹೆಜ್ಜೆಯಿಡಲು ಪ್ರೇರಣೆಯಾಗಲಿದೆ ಎಂದು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.