ಎಚ್ಎಂಟಿಗೆ ನೀಡಲಾದ ಭೂಮಿ ಅರಣ್ಯವಾಗಿದ್ದು, ಅರಣ್ಯವಾಗಿಯೇ ಉಳಿಯಲಿದೆ: ಈಶ್ವರ ಖಂಡ್ರೆ
ಬೆಂಗಳೂರು, 11 ಜುಲೈ (ಹಿ.ಸ.): ಆ್ಯಂಕರ್: ಎಚ್ಎಂಟಿಗೆ ನೀಡಲಾದ ಭೂಮಿ ಅರಣ್ಯವಾಗಿದ್ದು, ಕಾನೂನುಬದ್ಧವಾಗಿ ಅರಣ್ಯವಾಗಿಯೇ ಉಳಿಯಲಿದೆ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ದಾಖಲೆಗಳು, ಕಾನ
ಖಂಡ್ರೆ ಸಂಗ್ರಹ ಚಿತ್ರ


ಬೆಂಗಳೂರು, 11 ಜುಲೈ (ಹಿ.ಸ.):

ಆ್ಯಂಕರ್:

ಎಚ್ಎಂಟಿಗೆ ನೀಡಲಾದ ಭೂಮಿ ಅರಣ್ಯವಾಗಿದ್ದು, ಕಾನೂನುಬದ್ಧವಾಗಿ ಅರಣ್ಯವಾಗಿಯೇ ಉಳಿಯಲಿದೆ ಎಂದು ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ದಾಖಲೆಗಳು, ಕಾನೂನು ಹಾಗೂ ನ್ಯಾಯಾಲಯದ ತೀರ್ಪುಗಳ ಆಧಾರದ ಮೇಲೆ ಉತ್ತರ ನೀಡಿರುವುದಾಗಿ ಹೇಳಿದರು.

ಉತ್ತರ ಬೆಂಗಳೂರಿನ ಜನರ ಹಿತದೃಷ್ಟಿಯಿಂದ ಎಚ್ಎಂಟಿ ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಮರಳಿ ಪಡೆದು, ಲಾಲ್ಬಾಗ್ ಹಾಗೂ ಕಬ್ಬನ್ ಪಾರ್ಕ್ಗಿಂತ ದೊಡ್ಡ ಉದ್ಯಾನ ನಿರ್ಮಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ನ ಹಲವು ತೀರ್ಪುಗಳ ಪ್ರಕಾರ ಒಮ್ಮೆ ಅರಣ್ಯ ಎಂದು ಘೋಷಿಸಲಾದ ಭೂಮಿಯನ್ನು ಕಾನೂನುಬದ್ಧವಾಗಿ ಅರಣ್ಯೇತರ ಉದ್ದೇಶಕ್ಕೆ ಪರಿವರ್ತಿಸದಿದ್ದರೆ ಅದು ಅರಣ್ಯವಾಗಿಯೇ ಉಳಿಯುತ್ತದೆ. ಪರಿಸರದ ಹಕ್ಕುಗಳು ಭೂ ಒಡೆತನದ ಹಕ್ಕಿಗಿಂತ ಮೇಲು ಎಂಬುದನ್ನೂ ನ್ಯಾಯಾಲಯ ಸ್ಪಷ್ಟಪಡಿಸಿದೆ ಎಂದು ಹೇಳಿದರು.

ಬೆಂಗಳೂರು ನಗರ ಡಿಸಿಎಫ್ ನೀಡಿರುವುದು ನೋಟಿಸ್ ಅಲ್ಲ, ಕರ್ನಾಟಕ ಅರಣ್ಯ ಕಾಯ್ದೆ–1963ರ ಸೆಕ್ಷನ್ 64(ಎ) ಅಡಿಯಲ್ಲಿ ಹೊರಡಿಸಿರುವ ಅರೆ ನ್ಯಾಯಿಕ ಆದೇಶವಾಗಿದೆ. ಆದೇಶದ ವಿರುದ್ಧ ಅಸಮ್ಮತಿ ಇದ್ದರೆ ಕಾನೂನು ಪ್ರಕಾರ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಖಂಡ್ರೆ ತಿಳಿಸಿದರು.

1901ರಿಂದ 1969ರವರೆಗೆ ಮೀಸಲು ಅರಣ್ಯವನ್ನು ಡಿ-ಫಾರೆಸ್ಟ್ ಮಾಡಲು ಅಧಿಸೂಚನೆ ಕಡ್ಡಾಯವಾಗಿತ್ತು. ಅಂತಹ ಅಧಿಸೂಚನೆ ಇದ್ದರೆ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ ಅವರು, ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅರಣ್ಯ ಭೂಮಿ ನೀಡಿದ ಕುರಿತು 1969ರ ಫೆಬ್ರವರಿ 24ರ ಅಧಿಕೃತ ಅಧಿಸೂಚನೆ ದಾಖಲೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿರುವುದಾಗಿ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande