ಆರಂಭಿಕ ಕುಸಿತದಿಂದ ಚೇತರಿಕೆ ಕಂಡ ಷೇರುಪೇಟೆ
ನವದೆಹಲಿ, 04 ಜೂನ್ (ಹಿ.ಸ.) : ಆ್ಯಂಕರ್ : ದೇಶೀಯ ಷೇರುಪೇಟೆಯಲ್ಲಿ ಗುರುವಾರ ಆರಂಭಿಕ ವಹಿವಾಟಿನ ವೇಳೆ ಕುಸಿತ ಕಂಡಿದ್ದರೂ, ನಂತರ ಖರೀದಿ ಚಟುವಟಿಕೆ ಹೆಚ್ಚಾದ ಪರಿಣಾಮ ಮಾರುಕಟ್ಟೆ ಚೇತರಿಕೆ ಕಂಡಿತು. ಆರಂಭದಲ್ಲಿ ದುರ್ಬಲತೆಯೊಂದಿಗೆ ವಹಿವಾಟು ಆರಂಭಿಸಿದ್ದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ
ಸಾಂಕೇತಿಕ


ನವದೆಹಲಿ, 04 ಜೂನ್ (ಹಿ.ಸ.) :

ಆ್ಯಂಕರ್ : ದೇಶೀಯ ಷೇರುಪೇಟೆಯಲ್ಲಿ ಗುರುವಾರ ಆರಂಭಿಕ ವಹಿವಾಟಿನ ವೇಳೆ ಕುಸಿತ ಕಂಡಿದ್ದರೂ, ನಂತರ ಖರೀದಿ ಚಟುವಟಿಕೆ ಹೆಚ್ಚಾದ ಪರಿಣಾಮ ಮಾರುಕಟ್ಟೆ ಚೇತರಿಕೆ ಕಂಡಿತು. ಆರಂಭದಲ್ಲಿ ದುರ್ಬಲತೆಯೊಂದಿಗೆ ವಹಿವಾಟು ಆರಂಭಿಸಿದ್ದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಸೂಚ್ಯಂಕಗಳು ಬಳಿಕ ಹಸಿರು ವಲಯಕ್ಕೆ ಮರಳಿದವು.

ಮಾರುಕಟ್ಟೆ ತೆರೆದ ತಕ್ಷಣ ಮಾರಾಟದ ಒತ್ತಡ ಹೆಚ್ಚಾಗಿದ್ದರಿಂದ ಎರಡೂ ಪ್ರಮುಖ ಸೂಚ್ಯಂಕಗಳು ಮತ್ತಷ್ಟು ಕುಸಿದಿದ್ದವು. ಆದರೆ ಕೆಲವೇ ಕ್ಷಣಗಳಲ್ಲಿ ಹೂಡಿಕೆದಾರರು ಖರೀದಿಗೆ ಮುಂದಾದ ಪರಿಣಾಮ ಮಾರುಕಟ್ಟೆಯ ದಿಕ್ಕು ಬದಲಾಯಿತು. ಬೆಳಿಗ್ಗೆ 10 ಗಂಟೆಯ ವೇಳೆಗೆ ಸೆನ್ಸೆಕ್ಸ್ ಮತ್ತು ನಿಫ್ಟಿ ತಲಾ ಶೇ.0.01ರಷ್ಟು ಅಲ್ಪ ಏರಿಕೆಯಲ್ಲಿ ವಹಿವಾಟು ನಡೆಸುತ್ತಿದ್ದವು.

ಆರಂಭಿಕ ವಹಿವಾಟಿನಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಲ್ಲಿ ಅದಾನಿ ಎಂಟರ್ಪ್ರೈಸಸ್, ಎಟರ್ನಲ್, ಟೈಟನ್ ಕಂಪನಿ, ಟೆಕ್ ಮಹೀಂದ್ರಾ ಮತ್ತು ಅದಾನಿ ಪೋರ್ಟ್ಸ್ ಪ್ರಮುಖವಾಗಿದ್ದು, ಇವುಗಳ ಷೇರುಗಳು ಶೇ.1.53ರಿಂದ ಶೇ.0.84ರಷ್ಟು ಏರಿಕೆ ದಾಖಲಿಸಿವೆ.

ಇನ್ನೊಂದೆಡೆ ಟ್ರೆಂಟ್ ಲಿಮಿಟೆಡ್, ಟಿಎಂಪಿವಿ, ಐಶರ್ ಮೋಟಾರ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್ ಹಾಗೂ ಇನ್ಫೋಸಿಸ್ ಷೇರುಗಳು ಶೇ.2.38ರಿಂದ ಶೇ.1.12ರಷ್ಟು ಕುಸಿತ ಕಂಡು ಹಿನ್ನಡೆಯಲ್ಲಿದ್ದವು.

ಬೆಳಿಗ್ಗೆ 10 ಗಂಟೆಯ ವೇಳೆಗೆ ಒಟ್ಟು 2,688 ಷೇರುಗಳಲ್ಲಿ ಸಕ್ರಿಯ ವಹಿವಾಟು ನಡೆಯುತ್ತಿದ್ದು, ಅವುಗಳಲ್ಲಿ 1,696 ಷೇರುಗಳು ಲಾಭದೊಂದಿಗೆ ಹಸಿರು ವಲಯದಲ್ಲಿದ್ದರೆ, 992 ಷೇರುಗಳು ನಷ್ಟದೊಂದಿಗೆ ಕೆಂಪು ವಲಯದಲ್ಲಿ ವಹಿವಾಟು ನಡೆಸುತ್ತಿದ್ದವು.

ಸೆನ್ಸೆಕ್ಸ್ನ 30 ಷೇರುಗಳಲ್ಲಿ 16 ಷೇರುಗಳು ಏರಿಕೆ ಕಂಡಿದ್ದರೆ, 14 ಷೇರುಗಳು ಕುಸಿತದಲ್ಲಿದ್ದವು. ನಿಫ್ಟಿಯ 50 ಷೇರುಗಳಲ್ಲಿ 23 ಷೇರುಗಳು ಲಾಭದಲ್ಲಿದ್ದರೆ, 27 ಷೇರುಗಳು ನಷ್ಟದಲ್ಲಿದ್ದವು.

ಬಿಎಸ್ಇ ಸೆನ್ಸೆಕ್ಸ್ 410.34 ಅಂಕಗಳ ಕುಸಿತದೊಂದಿಗೆ 73,935.83 ಅಂಕಗಳಲ್ಲಿ ವಹಿವಾಟು ಆರಂಭಿಸಿತು. ಬಳಿಕ ಮಾರಾಟದ ಒತ್ತಡದಿಂದ 73,807.30 ಅಂಕಗಳವರೆಗೆ ಇಳಿದಿತ್ತು. ನಂತರ ಖರೀದಿ ಚಟುವಟಿಕೆ ಹೆಚ್ಚಾದ ಪರಿಣಾಮ ಚೇತರಿಕೆ ಕಂಡು, ಬೆಳಿಗ್ಗೆ 10 ಗಂಟೆಗೆ 8.17 ಅಂಕಗಳ ಏರಿಕೆಯೊಂದಿಗೆ 74,354.34 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು.

ಅದೇ ರೀತಿ ನಿಫ್ಟಿ 123.15 ಅಂಕಗಳ ಕುಸಿತದೊಂದಿಗೆ 23,282.45 ಅಂಕಗಳಲ್ಲಿ ಆರಂಭಗೊಂಡು, ಆರಂಭಿಕ ಹಂತದಲ್ಲಿ 23,247.30 ಅಂಕಗಳವರೆಗೆ ಇಳಿಯಿತು. ನಂತರ ಖರೀದಿದಾರರ ಬೆಂಬಲದಿಂದ ಚೇತರಿಕೆ ಕಂಡು, ಬೆಳಿಗ್ಗೆ 10 ಗಂಟೆಗೆ 2.75 ಅಂಕಗಳ ಅಲ್ಪ ಏರಿಕೆಯೊಂದಿಗೆ 23,408.35 ಅಂಕಗಳಲ್ಲಿ ವಹಿವಾಟು ನಡೆಸುತ್ತಿತ್ತು.

ಇದಕ್ಕೂ ಮುನ್ನ ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 303.67 ಅಂಕಗಳು (ಶೇ.0.41) ಕುಸಿದು 74,346.17 ಅಂಕಗಳಲ್ಲಿ ಮುಕ್ತಾಯಗೊಂಡಿತ್ತು. ನಿಫ್ಟಿ 77.95 ಅಂಕಗಳು (ಶೇ.0.33) ಇಳಿಕೆ ಕಂಡು 23,405.60 ಅಂಕಗಳಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande