ಶಾಲಾ ಶಿಕ್ಷಣ ಇಲಾಖೆಯ ಬಾಕಿ ಭರವಸೆಗಳ ಪರಿಶೀಲನೆ
ಬೆಂಗಳೂರು, 30 ಜೂನ್ (ಹಿ.ಸ.) : ಆ್ಯಂಕರ್ : ವಿಧಾನ ಮಂಡಲದ ಭರವಸೆ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಬಾಕಿ ಭರವಸೆಗಳ ಪರಿಶೀಲನಾ ಸಭೆ ಮಂಗಳವಾರ ಬೆಂಗಳೂರಿನ ಶಾಸಕರ ಭವನ ಕಟ್ಟಡದ 5ನೇ ಮಹಡಿಯ ಸಮ್ಮೇಳನ ಸ
Meeting


ಬೆಂಗಳೂರು, 30 ಜೂನ್ (ಹಿ.ಸ.) :

ಆ್ಯಂಕರ್ : ವಿಧಾನ ಮಂಡಲದ ಭರವಸೆ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಬಾಕಿ ಭರವಸೆಗಳ ಪರಿಶೀಲನಾ ಸಭೆ ಮಂಗಳವಾರ ಬೆಂಗಳೂರಿನ ಶಾಸಕರ ಭವನ ಕಟ್ಟಡದ 5ನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಇಲಾಖೆಯು ವಿಧಾನಮಂಡಲದಲ್ಲಿ ನೀಡಿರುವ ವಿವಿಧ ಭರವಸೆಗಳ ಅನುಷ್ಠಾನದ ಪ್ರಗತಿ, ಆಯವ್ಯಯದಲ್ಲಿ ಘೋಷಿಸಲಾದ ಯೋಜನೆಗಳ ಜಾರಿ ಸ್ಥಿತಿ ಹಾಗೂ ಇನ್ನೂ ಬಾಕಿ ಉಳಿದಿರುವ ಭರವಸೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು. ವಿವಿಧ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ಸಮಿತಿ, ಸಾರ್ವಜನಿಕರಿಗೆ ನೀಡಿರುವ ಭರವಸೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿತು.

ಸಭೆಯಲ್ಲಿ ಭರವಸೆ ಸಮಿತಿಯ ಸದಸ್ಯರಾದ ಯು.ಬಿ. ಬಣಕಾರ್, ಗಣೇಶ್ ಉಕ್ಕೇರಿ, ಅಲ್ಲಮಪ್ರಭು ಪಾಟೀಲ್, ಟಿ.ಎಸ್. ಶ್ರೀವತ್ಸ, ವಿಠಲ್ ಸೋಮಣ್ಣ ಹಲಗೇಕರ್, ಮಂಜುನಾಥ್ ಹಾಗೂ ಕಿರಣ್ ಕುಮಾರ್ ಕೊಡ್ಲಿ ಭಾಗವಹಿಸಿದ್ದರು.

ಇದೇ ವೇಳೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹಿರಿಯ ಅಧಿಕಾರಿಗಳಾದ ವಿ. ರಶ್ಮಿ ಮಹೇಶ್, ವಿಕಾಸ್ ಕೆ.ಎಸ್., ವಿದ್ಯಾ ಕುಮಾರಿ ಸೇರಿದಂತೆ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ಭರವಸೆಗಳ ಪ್ರಗತಿ ಕುರಿತು ಸಮಿತಿಗೆ ಮಾಹಿತಿ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande