
ಹುಬ್ಬಳ್ಳಿ, 28 ಜೂನ್ (ಹಿ.ಸ.) :
ಆ್ಯಂಕರ್ :
ಮೇಷ ರಾಶಿ : ಪ್ರಮುಖ ವ್ಯಕ್ತಿಗಳಿಂದ ಮಹತ್ವದ ಮಾಹಿತಿಯನ್ನು ಸಂಗ್ರಹಿಸುತ್ತೀರಿ. ಆಕಸ್ಮಿಕ ಧನಲಾಭದ ಸೂಚನೆಗಳಿವೆ. ಸ್ಥಿರಾಸ್ತಿ ಖರೀದಿ-ಮಾರಾಟದಲ್ಲಿ ಲಾಭ ದೊರೆಯುತ್ತದೆ. ಪ್ರಮುಖ ಕಾರ್ಯಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ವ್ಯಾಪಾರ ವಿಸ್ತರಣೆಗೆ ಕೈಗೊಂಡ ಪ್ರಯತ್ನಗಳು ಫಲಿಸುತ್ತವೆ. ಉದ್ಯೋಗದಲ್ಲಿ ನಿಗದಿಪಡಿಸಿದ ಗುರಿಗಳು ಈಡೇರುತ್ತವೆ.
ವೃಷಭ ರಾಶಿ : ಕೈಗೊಂಡ ಕೆಲಸಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ಆರ್ಥಿಕ ವಿಷಯಗಳು ನಿರಾಶೆ ಉಂಟುಮಾಡಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುವುದಿಲ್ಲ. ಮನೆ ಹಾಗೂ ಹೊರಗೆ ವಿವೇಕದಿಂದ ವರ್ತಿಸುವುದು ಒಳಿತು. ಆರೋಗ್ಯದ ವಿಷಯದಲ್ಲಿ ವೈದ್ಯರ ಸಲಹೆ ಪಡೆಯಬೇಕಾಗಬಹುದು. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ.
ಮಿಥುನ ರಾಶಿ : ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಇತರರೊಂದಿಗೆ ಆತುರದಿಂದ ಮಾತನಾಡದಿರುವುದು ಉತ್ತಮ. ಆದಾಯ ಮತ್ತು ಖರ್ಚು ಸಮಾನವಾಗಿರುತ್ತದೆ. ಅನಿರೀಕ್ಷಿತ ಪ್ರಯಾಣ ಮಾಡಬೇಕಾಗಬಹುದು. ವ್ಯಾಪಾರ ಸಾಧಾರಣವಾಗಿ ಸಾಗುತ್ತದೆ. ಉದ್ಯೋಗದಲ್ಲಿ ಮೇಲಧಿಕಾರಿಗಳೊಂದಿಗೆ ಎಚ್ಚರಿಕೆಯಿಂದ ವರ್ತಿಸುವುದು ಒಳಿತು.
ಕಟಕ ರಾಶಿ : ಕುಟುಂಬದ ವಿಷಯಗಳಲ್ಲಿ ನಿಮ್ಮ ಸ್ವಂತ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುತ್ತೀರಿ. ಸಮಾಜದಲ್ಲಿ ಗೌರವ ಮತ್ತು ಮಾನ್ಯತೆ ಪಡೆಯುತ್ತೀರಿ. ಅಮೂಲ್ಯ ವಸ್ತುಗಳು ಅಥವಾ ವಾಹನವನ್ನು ಖರೀದಿಸುತ್ತೀರಿ. ಪ್ರಮುಖ ವ್ಯಕ್ತಿಗಳೊಂದಿಗೆ ಪರಿಚಯ ವಿಸ್ತಾರವಾಗುತ್ತದೆ. ವ್ಯಾಪಾರ ಸುಗಮವಾಗಿ ಸಾಗುತ್ತದೆ. ಉದ್ಯೋಗದಲ್ಲಿ ಉತ್ಸಾಹಭರಿತ ವಾತಾವರಣ ಇರುತ್ತದೆ.
ಸಿಂಹ ರಾಶಿ : ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ. ಕುಟುಂಬ ಸದಸ್ಯರೊಂದಿಗೆ ಮಾತಿನ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಪ್ರಮುಖ ಕಾರ್ಯಗಳಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗುತ್ತವೆ. ದೂರ ಪ್ರಯಾಣಗಳು ಮುಂದೂಡಲ್ಪಡಬಹುದು. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಗೊಂದಲದ ವಾತಾವರಣ ಇರಬಹುದು.
ಕನ್ಯಾ ರಾಶಿ : ಆದಾಯದ ಮೂಲಗಳು ಹೆಚ್ಚಾಗಿ ಸಾಲಗಳನ್ನು ತೀರಿಸಲು ಸಾಧ್ಯವಾಗುತ್ತದೆ. ದೈವಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಆಪ್ತರಿಂದ ಶುಭ ಸಮಾರಂಭಗಳ ಆಹ್ವಾನಗಳು ಬರುತ್ತವೆ. ಮನೆಯಲ್ಲಿ ಶುಭಕಾರ್ಯಗಳ ಕುರಿತು ಚರ್ಚೆ ನಡೆಯಬಹುದು. ವ್ಯಾಪಾರ ಲಾಭದಾಯಕವಾಗಿ ಸಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ಗುರಿಗಳನ್ನು ಸಾಧಿಸುತ್ತೀರಿ.
ತುಲಾ ರಾಶಿ : ಪ್ರಯಾಣಗಳನ್ನು ಮುಂದೂಡುವುದು ಉತ್ತಮ. ಸ್ನೇಹಿತರಿಂದ ಸಾಲದ ಒತ್ತಡ ಹೆಚ್ಚಾಗಬಹುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಕೆಲವು ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ಹೊಸ ಸಾಲ ಪಡೆಯಲು ಪ್ರಯತ್ನಿಸುತ್ತೀರಿ. ವ್ಯಾಪಾರ ಮಂದಗತಿಯಲ್ಲಿ ಸಾಗುತ್ತದೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ಸೂಚನೆಗಳಿವೆ.
ವೃಶ್ಚಿಕ ರಾಶಿ : ಕುಟುಂಬ ಸದಸ್ಯರೊಂದಿಗೆ ದೇವಾಲಯಗಳಿಗೆ ಭೇಟಿ ನೀಡುತ್ತೀರಿ. ಹೊಸ ವಾಹನ ಯೋಗವಿದೆ. ವ್ಯಾಪಾರ ಉತ್ತೇಜನಕಾರಿಯಾಗಿ ಸಾಗುತ್ತದೆ. ಬಾಕಿ ಹಣ ವಸೂಲಿಯಾಗುತ್ತದೆ. ಪ್ರಮುಖ ಕಾರ್ಯಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ಉದ್ಯೋಗದಲ್ಲಿ ಎದುರಾಗಿದ್ದ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತದೆ.
ಧನುಸ್ಸು ರಾಶಿ : ಸಮಾಜದಲ್ಲಿ ನಿಮ್ಮ ಪ್ರಭಾವ ಮತ್ತು ಗೌರವ ಹೆಚ್ಚಾಗುತ್ತದೆ. ಬಂಧು-ಮಿತ್ರರಿಂದ ಅಮೂಲ್ಯ ಉಡುಗೊರೆಗಳು ದೊರೆಯುತ್ತವೆ. ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಬಾಲ್ಯದ ನೆನಪುಗಳು ಮರುಕಳಿಸುತ್ತವೆ. ಕಾರ್ಯಗಳನ್ನು ಚುರುಕಾಗಿ ಪೂರ್ಣಗೊಳಿಸುತ್ತೀರಿ. ವ್ಯಾಪಾರ ಮತ್ತು ಉದ್ಯೋಗ ಇನ್ನಷ್ಟು ಅನುಕೂಲಕರವಾಗುತ್ತದೆ.
ಮಕರ ರಾಶಿ : ಸಮಾಜದಲ್ಲಿ ನಿಮ್ಮ ಪ್ರಭಾವ ಮತ್ತು ಗೌರವ ಹೆಚ್ಚಾಗುತ್ತದೆ. ಬಂಧು-ಮಿತ್ರರಿಂದ ಅಮೂಲ್ಯ ಉಡುಗೊರೆಗಳು ದೊರೆಯುತ್ತವೆ. ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಬಾಲ್ಯದ ನೆನಪುಗಳು ಮರುಕಳಿಸುತ್ತವೆ. ಕಾರ್ಯಗಳನ್ನು ಚುರುಕಾಗಿ ಪೂರ್ಣಗೊಳಿಸುತ್ತೀರಿ. ವ್ಯಾಪಾರ ಮತ್ತು ಉದ್ಯೋಗ ಇನ್ನಷ್ಟು ಅನುಕೂಲಕರವಾಗುತ್ತದೆ.
ಕುಂಭ ರಾಶಿ : ಆಸ್ತಿ ಸಂಬಂಧಿತ ವಿವಾದಗಳು ಕಿರಿಕಿರಿ ಉಂಟುಮಾಡಬಹುದು. ಪ್ರಮುಖ ಕಾರ್ಯಗಳಲ್ಲಿ ಅಡೆತಡೆಗಳು ತಪ್ಪುವುದಿಲ್ಲ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ಕೈಗೊಂಡ ಕೆಲಸಗಳಲ್ಲಿ ಮಾಡಿದ ಶ್ರಮಕ್ಕೆ ತಕ್ಕ ಫಲ ದೊರೆಯುವುದಿಲ್ಲ. ಉದ್ಯೋಗದಲ್ಲಿ ಹೆಚ್ಚುವರಿ ಕೆಲಸದ ಒತ್ತಡದಿಂದ ಸಮರ್ಪಕ ವಿಶ್ರಾಂತಿ ಸಿಗುವುದಿಲ್ಲ.
ಮೀನ ರಾಶಿ : ದೈವಸೇವಾ ಕಾರ್ಯಕ್ರಮಗಳತ್ತ ಹೆಚ್ಚಿನ ಆಸಕ್ತಿ ತೋರಿಸುತ್ತೀರಿ. ಇತರರಿಗೆ ಸಹಾಯ-ಸಹಕಾರ ನೀಡುತ್ತೀರಿ. ವ್ಯಾಪಾರ ಚೇತರಿಕೆ ಕಾಣುತ್ತದೆ. ಕೈಗೊಂಡ ಕಾರ್ಯಗಳಲ್ಲಿ ಪ್ರಯತ್ನಕ್ಕೆ ತಕ್ಕ ಯಶಸ್ಸು ದೊರೆಯುತ್ತದೆ. ಪ್ರಭಾವಿ ವ್ಯಕ್ತಿಗಳೊಂದಿಗೆ ಪರಿಚಯ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಅನುಗ್ರಹ ಲಭಿಸುತ್ತದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.