
ಬಳ್ಳಾರಿ, 24 ಜೂನ್ (ಹಿ.ಸ.) :
ಆ್ಯಂಕರ್ : ‘ದಿ ಪೆರಹಿಬಿಷನ್ ಆಫ್ ಎಂಪ್ಲಾಯ್ಮೆಂಟ್ ಆಸ್ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಅಂಡ್ ದೇರ್ ರಿಹ್ಯಾಬಿಲಿಟೇಶನ್ ಆಕ್ಟ್ 2013’ ಕಾಯ್ದೆಯಡಿ ಬಳ್ಳಾರಿಯ ಉಪ ವಿಭಾಗ ಮಟ್ಟದ ಜಾಗೃತಿ ಸಮಿತಿಯ ತ್ರೈಮಾಸಿಕ ಸಭೆಯನ್ನು ಜೂನ್ 30 ರಂದು ಬೆಳಿಗ್ಗೆ 10:30 ಗಂಟೆಗೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆಯಲಿದೆ.
ಚರ್ಚೆಯ ವಿಷಯಗಳು :
ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಸಮೀಕ್ಷೆಯ ವರದಿ ಸಲ್ಲಿಕೆ ಮತ್ತು ಅವರಿಗೆ ಒದಗಿಸಲಾದ ಸೌಲಭ್ಯಗಳ ಪರಿಶೀಲನೆ. ಪೌರಕಾರ್ಮಿಕರಿಗೆ ಇ.ಎಸ್.ಐ, ಪಿ.ಎಫ್, ಮತ್ತು ಬೋನಸ್ ಸೌಲಭ್ಯಗಳ ಕುರಿತ ಮಾಹಿತಿ. ಪೌರಕಾರ್ಮಿಕರ ಆರೋಗ್ಯ ತಪಾಸಣೆ, ವಸತಿ ಸೌಲಭ್ಯಗಳು ಮತ್ತು ಪಡಿತರ ಚೀಟಿ ಸೌಲಭ್ಯಗಳ ಕುರಿತು ಚರ್ಚೆ.
ಕರ್ನಾಟಕ ರಾಜ್ಯ ಪೌರಕಾರ್ಮಿಕರ ಅಭಿವೃದ್ಧಿ ನಿಗಮದ ಮೂಲಕ ಪೌರಕಾರ್ಮಿಕರಿಗೆ ನೀಡಲಾದ ಸೌಲಭ್ಯಗಳ ಮಾಹಿತಿ. ಕಳೆದ ಮಾರ್ಚ್ 27, 2026 ರಂದು ನಡೆದ ಸಭೆಯ ಅನುಪಾಲನಾ ವರದಿಯನ್ನು ಮಂಡಿಸುವುದು. ಸಭೆಯ ಸದಸ್ಯರು ಸೂಕ್ತ ದಾಖಲೆಗಳೊಂದಿಗೆ ಸಭೆಗೆ ಹಾಜರಿರಬೇಕು ಎಂದು ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್