
ಅಹಮದಾಬಾದ್, 21 ಜೂನ್ (ಹಿ.ಸ.) :
ಆ್ಯಂಕರ್ : 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಅಹಮದಾಬಾದ್ ನಲ್ಲಿ ಪ್ರಹ್ಲಾದ್ ನಗರ ಉದ್ಯಾನವನದಲ್ಲಿ ಆಯೋಜಿಸಲಾದ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಭ್ಯಾಸ ನಡೆಸಿದರು.
ಈ ಸಂದರ್ಭದಲ್ಲಿ ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಸಹ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಮಿತ್ ಶಾ, ಹರ್ಷ ಸಂಘವಿ ಹಾಗೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ನಾಗರಿಕರು ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.
ಯೋಗಾಸನಗಳು ಹಾಗೂ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವ ಮೂಲಕ ಆರೋಗ್ಯಕರ ದೇಹ ಮತ್ತು ಶಾಂತ ಮನಸ್ಸಿನ ಸಂದೇಶವನ್ನು ಎಲ್ಲರೂ ಸಾರಿದರು. ಯೋಗಾಭ್ಯಾಸದ ವೇಳೆ ಭಾಗವಹಿಸಿದ್ದವರಲ್ಲಿ ಉತ್ಸಾಹ ಮತ್ತು ಚೈತನ್ಯದ ವಾತಾವರಣ ಕಂಡುಬಂತು.
ಈ ಸಂದರ್ಭದಲ್ಲಿ ಯೋಗವನ್ನು ಆರೋಗ್ಯಕರ ಜೀವನಶೈಲಿಯ ಪರಿಣಾಮಕಾರಿ ಮಾರ್ಗವೆಂದು ಬಣ್ಣಿಸಿದ ಅಮಿತ್ ಶಾ, ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಹಮದಾಬಾದ್ ಮಹಾಪೌರ ಹಿತೇಶ್ ಬರೋಟ್, ಉಪ ಮಹಾಪೌರ ಅಂಜು ಶಾ, ದೇವಾಂಗ್ ದಾಣಿ ಸೇರಿದಂತೆ ಹಲವಾರು ಜನಪ್ರತಿನಿಧಿಗಳು, ಯುವಕರು, ವಿದ್ಯಾರ್ಥಿಗಳು ಹಾಗೂ ಯೋಗಾಸಕ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh.M.B.