ಭಾರಿ ಮಳೆಗೆ ಜಮಖಂಡಿ ಸಂತೆಯಲ್ಲಿ ತರಕಾರಿ ಹಾನಿ ; ನೆನೆದ ಬೆಳೆ ರಕ್ಷಿಸಲು ರೈತರ ಹರಸಾಹಸ
ಬಾಗಲಕೋಟೆ, 15 ಜೂನ್ (ಹಿ.ಸ.) : ಆಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗೋಠೆ ಗ್ರಾಮದಲ್ಲಿ ಸುರಿದ ಏಕಾಏಕಿ ಭಾರಿ ಮಳೆಯಿಂದಾಗಿ ಸಂತೆ ವ್ಯಾಪಾರಿಗಳು ಹಾಗೂ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಮಳೆ ಬರುವ ಮುನ್ನ ಸಂತೆಯಲ್ಲಿ ಮಾರಾಟಕ್ಕಾಗಿ ತಂದಿದ್ದ ತರಕಾರಿಗಳು ನೀರಿನಲ್ಲಿ ನೆನೆದಿದ್ದು,
Male


ಬಾಗಲಕೋಟೆ, 15 ಜೂನ್ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗೋಠೆ ಗ್ರಾಮದಲ್ಲಿ ಸುರಿದ ಏಕಾಏಕಿ ಭಾರಿ ಮಳೆಯಿಂದಾಗಿ ಸಂತೆ ವ್ಯಾಪಾರಿಗಳು ಹಾಗೂ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಮಳೆ ಬರುವ ಮುನ್ನ ಸಂತೆಯಲ್ಲಿ ಮಾರಾಟಕ್ಕಾಗಿ ತಂದಿದ್ದ ತರಕಾರಿಗಳು ನೀರಿನಲ್ಲಿ ನೆನೆದಿದ್ದು, ಅವುಗಳನ್ನು ರಕ್ಷಿಸಲು ರೈತರು ಪರದಾಡುವಂತಾಯಿತು.

ಯಾವುದೇ ಮುನ್ಸೂಚನೆ ಇಲ್ಲದೆ ಜೋರಾಗಿ ಮಳೆ ಸುರಿದ ಪರಿಣಾಮ ಸಂತೆಯಲ್ಲಿದ್ದ ತರಕಾರಿ ರಾಶಿಗಳು ಸಂಪೂರ್ಣ ತೇವಗೊಂಡವು. ಟೊಮೆಟೊ, ಬದನೆಕಾಯಿ, ಮೆಣಸಿನಕಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ಮಾರಾಟಕ್ಕೆ ತಂದಿದ್ದ ರೈತರು ಮಳೆಯಿಂದ ಅವು ಹಾಳಾಗದಂತೆ ಪ್ಲಾಸ್ಟಿಕ್ ಹೊದಿಕೆ ಹಾಗೂ ಇತರೆ ಸಾಮಗ್ರಿಗಳ ನೆರವಿನಿಂದ ಮುಚ್ಚಿ ರಕ್ಷಿಸುವ ಪ್ರಯತ್ನ ಮಾಡಿದರು.

ದಿನವಿಡೀ ದುಡಿದು ಬೆಳೆದ ತರಕಾರಿಗಳನ್ನು ಮಾರಾಟ ಮಾಡಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆ ಆತಂಕ ತಂದಿತು. ಕೆಲ ರೈತರು ನೆನೆದ ತರಕಾರಿಗಳನ್ನು ಬೇರ್ಪಡಿಸಿ ಒಣಗಿಸುವ ಕಾರ್ಯದಲ್ಲಿ ತೊಡಗಿದ್ದರೆ, ಇನ್ನು ಕೆಲವರು ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿಗೆ ತಲುಪಿದರು.

ಅಕಾಲಿಕ ಮಳೆಯಿಂದ ಕೃಷಿ ಉತ್ಪನ್ನಗಳಿಗೆ ಆಗುತ್ತಿರುವ ಹಾನಿಗೆ ಸೂಕ್ತ ಪರಿಹಾರ ಹಾಗೂ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಮಳೆಗಾಲದಲ್ಲಿ ಸಂತೆಯಲ್ಲಿ ವ್ಯಾಪಾರ ಮಾಡುವವರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯೂ ಕೇಳಿ ಬಂದಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande