
ನವದೆಹಲಿ, 08 ಮೇ (ಹಿ.ಸ.) :
ಆ್ಯಂಕರ್ : ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ಪರಿಣಾಮ ದೇಶೀಯ ಷೇರು ಮಾರುಕಟ್ಟೆಯ ಮೇಲೂ ಕಂಡುಬಂದಿದ್ದು, ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಮಾರುಕಟ್ಟೆ ಕುಸಿತದೊಂದಿಗೆ ಆರಂಭವಾಗಿದೆ. ಆರಂಭಿಕ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 394 ಅಂಕಗಳಷ್ಟು ಕುಸಿದರೆ, ನಿಪ್ಟಿ 50 135 ಅಂಕಗಳ ಇಳಿಕೆಯನ್ನು ದಾಖಲಿಸಿದೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 394.25 ಅಂಕಗಳು ಅಥವಾ ಶೇಕಡಾ 0.51ರಷ್ಟು ಕುಸಿದು 77,450.27 ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. ಇದೇ ವೇಳೆ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನ ನಿಫ್ಟಿ 95.7 ಅಂಕಗಳು ಅಥವಾ ಶೇಕಡಾ 0.39ರಷ್ಟು ಇಳಿದು 24,230.95 ಮಟ್ಟದಲ್ಲಿ ವಹಿವಾಟು ನಡೆಸಿತು.
ಇಂದಿನ ವಹಿವಾಟಿನಲ್ಲಿ ಬ್ಯಾಂಕಿಂಗ್ ಮತ್ತು ವಾಹನೋದ್ಯಮ ವಲಯದ ಷೇರುಗಳಲ್ಲಿ ಮಾರಾಟದ ಒತ್ತಡ ಹೆಚ್ಚಾಗಿದ್ದು, ಮಾರುಕಟ್ಟೆಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಮತ್ತೊಂದೆಡೆ ಔಷಧ ಹಾಗೂ ಮಾಹಿತಿ ತಂತ್ರಜ್ಞಾನ ವಲಯದ ಷೇರುಗಳಲ್ಲಿ ಖರೀದಿ ಚಟುವಟಿಕೆ ಕಂಡುಬಂದಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವೂ ಒತ್ತಡಕ್ಕೆ ಒಳಗಾಗಿದ್ದು, ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ 36 ಪೈಸೆ ಕುಸಿದು 94.58 ಮಟ್ಟ ತಲುಪಿದೆ.
ಪಶ್ಚಿಮ ಏಷ್ಯಾದ ಪರಿಸ್ಥಿತಿ ಹೂಡಿಕೆದಾರರ ಮನೋಭಾವದ ಮೇಲೆ ಪರಿಣಾಮ ಬೀರಿದೆ. ಅಮೆರಿಕ ಹಾಗೂ ಇರಾನ್ ಪಡೆಗಳ ನಡುವೆ ಹಾರ್ಮುಜ್ ಜಲಸಂಧಿ ಸಮೀಪ ಗುಂಡಿನ ಚಕಮಕಿ ನಡೆದಿರುವ ವರದಿಗಳ ಹಿನ್ನೆಲೆ ಜಾಗತಿಕ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್ಗೆ ಸುಮಾರು 1 ಡಾಲರ್ ಏರಿಕೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa