ಕರ್ನಾಟಕದ ಸುಗಂಧ ಕಾಪಾಡಲು ಕೆಎಸ್ ಡಿಎಲ್ ದಿಟ್ಟ ಹೆಜ್ಜೆ : ಎಂ.ಬಿ. ಪಾಟೀಲ
ಬೆಂಗಳೂರು, 08 ಮೇ (ಹಿ.ಸ.) : ಆ್ಯಂಕರ್ : ಕರ್ನಾಟಕದ ಹೆಮ್ಮೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸಾಬೂನಿನ ಪರಿಮಳದ ಹಿಂದೆ ರಾಜ್ಯದ ಅಮೂಲ್ಯ ಶ್ರೀಗಂಧದ ಶಕ್ತಿ ಅಡಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಶ್ರೀಗಂಧವನ್ನು ಸಂರಕ್ಷಿಸಿ, ಅದರ ಬೆಳೆಗಾರ ರೈತರ ಭವಿಷ್ಯವನ್ನು ಭದ್ರಗೊಳಿಸ
Mbp


ಬೆಂಗಳೂರು, 08 ಮೇ (ಹಿ.ಸ.) :

ಆ್ಯಂಕರ್ : ಕರ್ನಾಟಕದ ಹೆಮ್ಮೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸಾಬೂನಿನ ಪರಿಮಳದ ಹಿಂದೆ ರಾಜ್ಯದ ಅಮೂಲ್ಯ ಶ್ರೀಗಂಧದ ಶಕ್ತಿ ಅಡಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಶ್ರೀಗಂಧವನ್ನು ಸಂರಕ್ಷಿಸಿ, ಅದರ ಬೆಳೆಗಾರ ರೈತರ ಭವಿಷ್ಯವನ್ನು ಭದ್ರಗೊಳಿಸುವ ಉದ್ದೇಶದಿಂದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್&ಡಿಎಲ್) ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಎಕ್ಸನಲ್ಲಿ ಹೇಳಿದ್ದಾರೆ.

ಶ್ರೀಗಂಧದ ಮರಗಳು ಮತ್ತು ಗಿಡಗಳ ಕಳ್ಳತನ ರಾಜ್ಯದ ಮುಂದೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇದನ್ನು ತಡೆಯಲು ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಸ್ವೀಕರಿಸಲು ಸಂಸ್ಥೆ ಸಿದ್ಧವಿದೆ ಎಂದು ಸಚಿವರು ತಿಳಿಸಿದ್ದಾರೆ.

ಶ್ರೀಗಂಧ ಕಳ್ಳತನ ನಿಯಂತ್ರಣಕ್ಕೆ ಪರಿಣಾಮಕಾರಿ ತಂತ್ರಜ್ಞಾನವನ್ನು ಯಾರೇ ಪರಿಚಯಿಸಿದರೂ ಅದನ್ನು ಅಳವಡಿಸಿಕೊಳ್ಳಲು ಕೆಎಸ್&ಡಿಎಲ್ ಮುಂದಾಗಿದ್ದು, ಆಯ್ಕೆಯಾದ ತಂತ್ರಜ್ಞಾನದ ಅನುಷ್ಠಾನದ ಸಂಪೂರ್ಣ ವೆಚ್ಚವನ್ನೂ ಸಂಸ್ಥೆಯೇ ಭರಿಸಲಿದೆ ಎಂದು ಹೇಳಿದ್ದಾರೆ.

ಜೂನ್ 4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಅತಿ ಹೆಚ್ಚು ಶ್ರೀಗಂಧ ಪೂರೈಕೆ ಮಾಡಿದ ನಾಲ್ವರು ರೈತರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಶ್ರೀಗಂಧ ಕಳ್ಳರನ್ನು ಬಂಧಿಸುವಲ್ಲಿ ಗಮನಾರ್ಹ ಸಾಧನೆ ಮಾಡಿದ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು, ಜೊತೆಗೆ ಮಹತ್ವದ ಮಾಹಿತಿ ನೀಡಿದ ಸಾರ್ವಜನಿಕರನ್ನೂ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

ಕೃಷಿ, ಕೈಗಾರಿಕೆ ಮತ್ತು ಕಾನೂನು ಸುವ್ಯವಸ್ಥೆ ವ್ಯವಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಅಪೂರ್ವ ಮಾದರಿಯನ್ನೇ ಈ ಕಾರ್ಯಕ್ರಮ ರೂಪಿಸಲಿದೆ ಎಂದು ಎಂ.ಬಿ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಕೆಎಸ್&ಡಿಎಲ್ ಸುಮಾರು 174.5 ಮೆಟ್ರಿಕ್ ಟನ್ ಶ್ರೀಗಂಧವನ್ನು ಖರೀದಿಸಿದ್ದು, ರೈತರ ಖಾತೆಗಳಿಗೆ ನೇರವಾಗಿ ₹6.08 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ. ಇದರಿಂದ ಶ್ರೀಗಂಧ ಬೆಳೆ ರೈತರಿಗೆ ಅತ್ಯಂತ ಲಾಭದಾಯಕ ಹಾಗೂ ಆರ್ಥಿಕವಾಗಿ ಬಲ ನೀಡುವ ಬೆಳೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande