ಅಹಲ್ಯಾಬಾಯಿ ಹೋಳ್ಕರ್ ಜಯಂತಿ ; ಪ್ರಹ್ಲಾದ ಜೋಶಿ ನಮನ
ಬೆಂಗಳೂರು, 31 ಮೇ (ಹಿ.ಸ.) : ಆ್ಯಂಕರ್ : ಆಕ್ರಮಣಕಾರರಿಂದ ಧ್ವಂಸಗೊಂಡಿದ್ದ ಅನೇಕ ದೇವಾಲಯಗಳು ಹಾಗೂ ಪುಣ್ಯಕ್ಷೇತ್ರಗಳನ್ನು ಮರುಸ್ಥಾಪಿಸಿ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗೆ ಅಪಾರ ಕೊಡುಗೆ ನೀಡಿದ ಮಾಳ್ವ ಪ್ರದೇಶದ ಮಹಾರಾಣಿ, ಲೋಕಮಾತೆ ಅಹಲ್ಯಭಾಯಿ ಹೋಳ್ಕರ ಅವರ ಜಯಂತಿಯ ಅಂಗವಾಗಿ ಕೇಂದ್ರ ಸಚಿವ ಪ್ರಹ್
Joshi post


ಬೆಂಗಳೂರು, 31 ಮೇ (ಹಿ.ಸ.) :

ಆ್ಯಂಕರ್ : ಆಕ್ರಮಣಕಾರರಿಂದ ಧ್ವಂಸಗೊಂಡಿದ್ದ ಅನೇಕ ದೇವಾಲಯಗಳು ಹಾಗೂ ಪುಣ್ಯಕ್ಷೇತ್ರಗಳನ್ನು ಮರುಸ್ಥಾಪಿಸಿ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗೆ ಅಪಾರ ಕೊಡುಗೆ ನೀಡಿದ ಮಾಳ್ವ ಪ್ರದೇಶದ ಮಹಾರಾಣಿ, ಲೋಕಮಾತೆ ಅಹಲ್ಯಭಾಯಿ ಹೋಳ್ಕರ ಅವರ ಜಯಂತಿಯ ಅಂಗವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನಮನ ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಅಹಲ್ಯಾಬಾಯಿ ಹೋಳ್ಕರ್ ಅವರನ್ನು ಮಹಾದೈವಭಕ್ತೆ, ಧರ್ಮ ರಕ್ಷಕಿ ಹಾಗೂ ಜನಪರ ಆಡಳಿತಗಾರ್ತಿ ಎಂದು ಬಣ್ಣಿಸಿರುವ ಅವರು, ಆಕ್ರಮಣಗಳಿಂದ ಹಾನಿಗೊಳಗಾಗಿದ್ದ ವಿವಿಧ ದೇಗುಲಗಳು ಮತ್ತು ಪವಿತ್ರ ಕ್ಷೇತ್ರಗಳ ಪುನರುಜ್ಜೀವನಕ್ಕಾಗಿ ಅವರು ಕೈಗೊಂಡ ಕಾರ್ಯಗಳನ್ನು ಸ್ಮರಿಸಿದ್ದಾರೆ.

ಅಹಲ್ಯಾಬಾಯಿ ಹೋಳ್ಕರ್ ಅವರು ಕೇವಲ ಸಮರ್ಥ ಆಡಳಿತಗಾರ್ತಿಯಷ್ಟೇ ಅಲ್ಲದೆ ಸಮಾಜ ಸುಧಾರಕಿಯೂ ಆಗಿದ್ದರು. ಬಾಲ್ಯ ವಿವಾಹ, ಸತಿ ಸಹಗಮನದಂತಹ ಅನಿಷ್ಠ ಪದ್ಧತಿಗಳನ್ನು ವಿರೋಧಿಸಿ, ಮಹಿಳಾ ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ಸಮಾನತೆಯ ಪರವಾಗಿ ಶ್ರಮಿಸಿದ ಪೂಜ್ಯ ತಾಯಿ ಎಂದು ಪ್ರಹ್ಲಾದ ಜೋಶಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಅವರ ಆಡಳಿತದಲ್ಲಿ ನ್ಯಾಯ, ಧರ್ಮ, ಜನಕಲ್ಯಾಣ ಮತ್ತು ಸಾಮಾಜಿಕ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಜನಸ್ನೇಹಿ ಆಡಳಿತ, ಧಾರ್ಮಿಕ ಸಹಿಷ್ಣುತೆ ಹಾಗೂ ಸಮಾಜಮುಖಿ ಚಿಂತನೆಗಳ ಮೂಲಕ ಅಹಲ್ಯಾಬಾಯಿ ಹೋಳ್ಕರ್ ಅವರು ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ಅವರ ಜೀವನ, ಮೌಲ್ಯಗಳು ಹಾಗೂ ಆಡಳಿತದ ಆದರ್ಶಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿದ್ದು, ಮುಂದಿನ ಪೀಳಿಗೆಗಳಿಗೆ ಸ್ಫೂರ್ತಿಯ ಮೂಲವಾಗಿ ಉಳಿದಿವೆ ಎಂದು ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande