ಪಂಚಾಯತ್ ಅಭಿವೃದ್ಧಿ ಯೋಜನೆಗಳ ತಯಾರಿಕೆ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ
ನವದೆಹಲಿ, 03 ಮೇ (ಹಿ.ಸ.) : ಆ್ಯಂಕರ್ : ಗ್ರಾಮೀಣಾಭಿವೃದ್ಧಿಗೆ ವೇಗ ನೀಡುವ ಉದ್ದೇಶದಿಂದ ಪಂಚಾಯತ್ ರಾಜ್ ಸಚಿವಾಲಯ ವತಿಯಿಂದ ಪಂಚಾಯತ್ ಅಭಿವೃದ್ಧಿ ಯೋಜನೆಗಳ (2026–27) ತಯಾರಿಕೆ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಮೇ 4 ಮತ್ತು 5ರಂದು ದೆಹಲಿ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್
Workshop


ನವದೆಹಲಿ, 03 ಮೇ (ಹಿ.ಸ.) :

ಆ್ಯಂಕರ್ : ಗ್ರಾಮೀಣಾಭಿವೃದ್ಧಿಗೆ ವೇಗ ನೀಡುವ ಉದ್ದೇಶದಿಂದ ಪಂಚಾಯತ್ ರಾಜ್ ಸಚಿವಾಲಯ ವತಿಯಿಂದ ಪಂಚಾಯತ್ ಅಭಿವೃದ್ಧಿ ಯೋಜನೆಗಳ (2026–27) ತಯಾರಿಕೆ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಮೇ 4 ಮತ್ತು 5ರಂದು ದೆಹಲಿ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಪಂಚಾಯತ್ ರಾಜ್ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ಕಾರ್ಯಾಗಾರವನ್ನು ಸಚಿವಾಲಯದ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಹಾಗೂ ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಅಶೋಕ್ ಕೆ.ಕೆ. ಮೀನಾ ಉದ್ಘಾಟಿಸಲಿದ್ದು, ಪ್ರಮುಖ ಭಾಷಣಗಳನ್ನು ನೀಡಲಿದ್ದಾರೆ.

ಉದ್ಘಾಟನಾ ಅಧಿವೇಶನದಲ್ಲಿ ಪಂಚಾಯತ್ ಅಭಿವೃದ್ಧಿ ಯೋಜನೆ (2026–27) ತಯಾರಿಕೆಗೆ ಸಂಬಂಧಿಸಿದ ಪೀಪಲ್ಸ್ ಪ್ಲಾನ್ ಕ್ಯಾಂಪೇನ್ ಕಿರುಪುಸ್ತಕ, ಗುಣಮಟ್ಟದ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ ಮಾರ್ಗಸೂಚಿ ಹಾಗೂ ಪರಿಷ್ಕೃತ ಇಗ್ರಾಮ್ ಸ್ವರಾಜ್ ಯೋಜನಾ ಪೋರ್ಟಲ್ ಅನ್ನು ಬಿಡುಗಡೆ ಮಾಡಲಾಗುತ್ತದೆ.

ಕಾರ್ಯಾಗಾರದಲ್ಲಿ ವಿಷಯಾಧಾರಿತ ಪಂಚಾಯತ್ ಅಭಿವೃದ್ಧಿ ಯೋಜನೆಗಳ ವಿಕಾಸ, 16ನೇ ಹಣಕಾಸು ಆಯೋಗ ಅನುದಾನಗಳ ಚೌಕಟ್ಟು ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ. ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಹಾಗೂ ಪಂಚಾಯತ್ ರಾಜ್ ಕ್ಷೇತ್ರದ ಪ್ರಮುಖ ಪಾಲುದಾರರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.

ಇದಲ್ಲದೆ ತಾಂತ್ರಿಕ ಅಧಿವೇಶನಗಳು ಮತ್ತು ಪ್ರಾಯೋಗಿಕ ಗುಂಪು ಚಟುವಟಿಕೆಗಳ ಮೂಲಕ ರಾಜ್ಯ ಮತ್ತು ಯುಟಿ ತಂಡಗಳು ಜೀವನೋಪಾಯ, ಆರೋಗ್ಯ, ಮಕ್ಕಳ ಸ್ನೇಹಿ ಆಡಳಿತ, ನೀರಿನ ಲಭ್ಯತೆ, ನೈರ್ಮಲ್ಯ, ಮೂಲಸೌಕರ್ಯ, ಸಾಮಾಜಿಕ ನ್ಯಾಯ, ಉತ್ತಮ ಆಡಳಿತ, ಮಹಿಳಾ ಸಬಲೀಕರಣ ಹಾಗೂ ಪಿಇಎಸ್ಎ-ಅರಣ್ಯ ಹಕ್ಕುಗಳ ಕಾಯ್ದೆ ಅನುಸರಣೆ ಸೇರಿದಂತೆ ಹತ್ತು ಪ್ರಮುಖ ಕ್ಷೇತ್ರಗಳಲ್ಲಿ ಮಾದರಿ ಯೋಜನೆಗಳನ್ನು ಸಿದ್ಧಪಡಿಸಲಿವೆ.

ತಳಮಟ್ಟದಲ್ಲಿ ದತ್ತಾಂಶ ಆಧಾರಿತ ಮತ್ತು ಜನಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಯೋಜನಾ ವ್ಯವಸ್ಥೆಯನ್ನು ಬಲಪಡಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ. 2026–27ನೇ ಸಾಲಿನ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು ಹಣಕಾಸು ಆಯೋಗದ ಮಾರ್ಗಸೂಚಿಗಳಿಗೆ ಹೊಂದಿಸಿ, ಗ್ರಾಮೀಣ ಸಮುದಾಯಗಳಿಗೆ ಅಳೆಯಬಹುದಾದ ಫಲಿತಾಂಶಗಳನ್ನು ತಲುಪಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ‘ವಿಕ್ಷಿತ್ ಭಾರತ’ ಸಾಧನೆಗೆ ಮೂಲ ಘಟಕವಾಗಿರುವ ‘ವಿಕ್ಷಿತ್ ಪಂಚಾಯತ್’ ಪರಿಕಲ್ಪನೆಗೆ ಈ ಕಾರ್ಯಾಗಾರ ದಿಕ್ಕುನಿರ್ದೇಶನ ನೀಡಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande