ಕೆ.ಎಸ್. ನಿಸಾರ್ ಅಹಮದ್ ಪುಣ್ಯಸ್ಮರಣೆ ; ಡಿ.ಕೆ. ಶಿವಕುಮಾರ್ ಗೌರವ ನಮನ
ಬೆಂಗಳೂರು, 03 ಮೇ (ಹಿ.ಸ.) : ಆ್ಯಂಕರ್ : ಕನ್ನಡದ ಖ್ಯಾತ ಸಾಹಿತಿ, ಪದ್ಮಶ್ರೀ ಪುರಸ್ಕೃತರು ಹಾಗೂ “ನಿತ್ಯೋತ್ಸವದ ಕವಿ” ಎಂದೇ ಪ್ರಸಿದ್ಧರಾದ ಪ್ರೊ. ಕೆ.ಎಸ್. ನಿಸಾರ್ ಅವರ ಪುಣ್ಯಸ್ಮರಣೆಯ ಅಂಗವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ
ನಿಸಾರ್ ಅಹಮದ್


ಬೆಂಗಳೂರು, 03 ಮೇ (ಹಿ.ಸ.) :

ಆ್ಯಂಕರ್ : ಕನ್ನಡದ ಖ್ಯಾತ ಸಾಹಿತಿ, ಪದ್ಮಶ್ರೀ ಪುರಸ್ಕೃತರು ಹಾಗೂ “ನಿತ್ಯೋತ್ಸವದ ಕವಿ” ಎಂದೇ ಪ್ರಸಿದ್ಧರಾದ ಪ್ರೊ. ಕೆ.ಎಸ್. ನಿಸಾರ್ ಅವರ ಪುಣ್ಯಸ್ಮರಣೆಯ ಅಂಗವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗೌರವಪೂರ್ವಕ ನಮನ ಸಲ್ಲಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ನಿಸಾರ್ ಅಹಮದ್ ಅವರ ಸಾಹಿತ್ಯ ಕೃಷಿ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಗಳು ಸದಾ ಸ್ಮರಣೀಯವಾಗಿವೆ ಎಂದು ಸ್ಮರಿಸಿದ್ದಾರೆ.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಗುರುತು ಮೂಡಿಸಿದ ನಿಸಾರ್ ಅಹಮದ್ ಅವರ ಕವಿತೆಗಳು, ವಿಶೇಷವಾಗಿ “ನಿತ್ಯೋತ್ಸವ” ಕವನ, ಕನ್ನಡಿಗರ ಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿವೆ. ಅವರ ಸಾಹಿತ್ಯ ಪರಂಪರೆ ಮುಂದಿನ ಪೀಳಿಗೆಗಳಿಗೂ ಪ್ರೇರಣೆಯಾಗಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande