
ನವದೆಹಲಿ, 25 ಮೇ (ಹಿ.ಸ.) :
ಆ್ಯಂಕರ್ : ಪೆಟ್ರೋಲ್ ಮತ್ತು ಡೀಸೆಲ್ ದರಗಳು ನಿರಂತರವಾಗಿ ನಾಲ್ಕನೇ ಬಾರಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಲೋಕಸಭೆ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಅವರು, “ಇಂಧನ ದರ ಏರಿಕೆ ಮತ್ತೆ ಜನರ ಮೇಲೆ ಆರ್ಥಿಕ ಹೊಡೆತ ನೀಡಿದೆ. ಕಂತುಗಳಂತೆ ಹಂತ ಹಂತವಾಗಿ ಬೆಲೆ ಹೆಚ್ಚಿಸಿ ಜನರ ಜೇಬು ಖಾಲಿ ಮಾಡಲಾಗುತ್ತಿದೆ” ಎಂದು ಆರೋಪಿಸಿದರು. ಚುನಾವಣೆ ಬಳಿಕ ಕೇಂದ್ರ ಸರ್ಕಾರ ನಿರಂತರವಾಗಿ ಇಂಧನ ಬೆಲೆಗಳನ್ನು ಹೆಚ್ಚಿಸುತ್ತಿದೆ ಎಂದು ಅವರು ಟೀಕಿಸಿದರು.
ಚುನಾವಣಾ ಸಮಯದಲ್ಲಿ ಭರವಸೆಗಳನ್ನು ನೀಡುವ ಸರ್ಕಾರ, ಚುನಾವಣೆ ಮುಗಿದ ತಕ್ಷಣ ಜನರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುತ್ತಿದೆ ಎಂದು ಆರೋಪಿಸಿದರು.
ಕಳೆದ ೧೧ ದಿನಗಳಲ್ಲಿ ಪೆಟ್ರೋಲ್, ಡೀಸೆಲ್, ಸಿಎನ್ಜಿ ಮತ್ತು ಎಲ್ಪಿಜಿ ಬೆಲೆಗಳಲ್ಲಿ ನಾಲ್ಕು ಬಾರಿ ಏರಿಕೆ ದಾಖಲಾಗಿದೆ. 25 ಮೇ ರಂದು ದೆಹಲಿಯಲ್ಲಿ ಪೆಟ್ರೋಲ್ ದರ ₹102.12 ಮತ್ತು ಡೀಸೆಲ್ ದರ ₹95.20ಕ್ಕೆ ಏರಿಕೆಯಾಗಿದೆ.
ಇದಕ್ಕೂ ಮುನ್ನ 23 ಮೇ ರಂದು ಪೆಟ್ರೋಲ್ಗೆ 87 ಪೈಸೆ ಹಾಗೂ ಡೀಸೆಲ್ಗೆ 91 ಪೈಸೆ ಏರಿಕೆ ಕಂಡಿತ್ತು. 18 ಮೇ ರಂದು ಕೂಡ ಇಂಧನ ದರಗಳಲ್ಲಿ ಸುಮಾರು 90 ಪೈಸೆ ಹೆಚ್ಚಳವಾಗಿತ್ತು. 15 ಮೇ ರಂದು ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ತಲಾ ಮೂರು ರೂಪಾಯಿ ಏರಿಕೆ ದಾಖಲಾಗಿತ್ತು. 1 ಮೇ ರಂದು ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ₹993ರಷ್ಟು ಏರಿಕೆ ಕಂಡಿತ್ತು.
ಹಿಂದೂಸ್ತಾನ್ ಸಮಾಚಾರ್ / Rakesh.M.B.