

ಬಳ್ಳಾರಿ, 02 ಮೇ (ಹಿ.ಸ.) :
ಆ್ಯಂಕರ್ : ಮಲೇಶಿಯಾ ದೇಶದ ಸುಲ್ತಾನ್ ಅಜಿಯಾನ್ ಶಾ ಸಂಸ್ಥೆ, ಮಲೇಶಿಯಾ ಆರೋಗ್ಯ ಸಚಿವಾಲಯ, ತನಜುಂಗ ರಮಭೂತಾನ್ ಇಪಾನ್ ಸಿಟಿ ಮಲೇಷಿಯಾದಲ್ಲಿ ಮೇ 8 ರಿಂದ 10ರವರೆಗೆ ಹಮ್ಮಿಕೊಂಡಿರುವ 22ನೇ ಅಂತಾರಾಷ್ಟ್ರೀಯ ಓಕಿನವ ಗುಜುರಾಯ್ ಇಪಾನ್ ಸಿಟಿ ಮುಕ್ತ ಕರಾಟೆ ಸ್ಪರ್ಧೆ 2026ರಲ್ಲಿ ಬಳ್ಳಾರಿಯ ಸ್ಪರ್ಧಾಳುಗಳು ಪಾಲ್ಗೊಳ್ಳಲಿದ್ದಾರೆ.
ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಅಟ್ರ್ಸ ಟ್ರಸ್ಟ್ ಅಧ್ಯಕ್ಷರಾದ ಎಂ. ಮೃತ್ಯುಂಜಯಸ್ವಾಮಿ ಅವರು ಸುದ್ದಿಗಾರರಿಗೆ ಶನಿವಾರ ಈ ಮಾಹಿತಿ ನೀಡಿದ್ದು,
15 ವರ್ಷದ ಒಳಗಿನ ವಯಸ್ಸಿನ ವಿಭಾಗದಲ್ಲಿ,ಸುಮಾರು ಆರು ವರ್ಷಗಳಿಂದ ನಮ್ಮ ಟ್ರಸ್ಟಿನಲ್ಲಿ ತರಬೇತಿ ಪಡೆಯುತ್ತಿರುವ ಮತ್ತು ಬಳ್ಳಾರಿ ನಗರದ ಬಾಲ ಭಾರತಿ ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿರುವ ಕುಮಾರಿ ನಯೋನಿಕ ಮಂಗಳಂ ಮತ್ತು ಕುಮಾರಿ ನಕ್ಷತ್ರ ವರ್ಣ ಮಂಗಳಂ ಮತ್ತು 15 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ನಮ್ಮ ಟ್ರಸ್ಟಿನಲ್ಲಿ ಸುಮಾರು 10 ವರ್ಷಗಳಿಂದ ತರಬೇತಿ ಪಡೆಯುತ್ತಿರುವ ಬಳ್ಳಾರಿ ನಗರದ ವೀರಶೈವ ವಿದ್ಯಾವರ್ದಕ ಸಂಘದ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಗಣೇಶ ಪ್ರಜ್ವಲ್ ಮತ್ತು ಬಳ್ಳಾರಿ ನಗರದ ಡ್ರೀಮ್ ವಲ್ರ್ಡ್ ಶಾಲೆಯ ವಿದ್ಯಾರ್ಥಿ ಮುದಿಯಮಂ ದೇವಗನ್ ಶ್ರೀವತ್ಸ, ಇಬ್ಬರು ವಿದ್ಯಾರ್ಥಿನಿಯರು ಮತ್ತು ಇಬ್ಬರು ವಿದ್ಯಾರ್ಥಿಗಳು ಒಟ್ಟು ನಾಲ್ಕು ಜನ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ಗೌರವಾಧ್ಯಕ್ಷರಾದ ವಿಕ್ರಮ ಮಹಿಪಾಲ್, ಟ್ರಸ್ಟ್ ಸದಸ್ಯರಾದ ಹೆಚ್.ಕೆ. ಗೌರಿಶಂಕರ್, ಉದ್ದಿಮೆದಾರರಾದ ಹೆಚ್.ಎಂ. ಅಂಬರೀಶ್, ಆರ್.ಎಂ. ಬಸವರಾಜ, ಗಣೇಶ - ಪ್ರಜ್ವಲ್ ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್