ಬಸವಣ್ಣನವರ ಸಮಾನತೆ ಸಂದೇಶ ಇಂದು ಕೂಡ ಪ್ರಸ್ತುತ : ಇಂದುಶೇಖರ ಮಣೂರ
ವಿಜಯಪುರ, 02 ಮೇ (ಹಿ.ಸ.) : ಆಂಕರ್ : ಮೂಢನಂಬಿಕೆಗಳಿಂದ ವೈಚಾರಿಕತೆಯೆಡೆಗೆ ದಾರಿ ತೋರಿಸಿ, ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಮಹಾನ್ ವ್ಯಕ್ತಿತ್ವ ಬಸವಣ್ಣ ಅವರದು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಉದಯರಶ್ಮಿ ದಿನಪತ್ರಿಕೆ ಸಂಪಾದ
ಬಸಣ್ಣ


ವಿಜಯಪುರ, 02 ಮೇ (ಹಿ.ಸ.) :

ಆಂಕರ್ : ಮೂಢನಂಬಿಕೆಗಳಿಂದ ವೈಚಾರಿಕತೆಯೆಡೆಗೆ ದಾರಿ ತೋರಿಸಿ, ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಮಹಾನ್ ವ್ಯಕ್ತಿತ್ವ ಬಸವಣ್ಣ ಅವರದು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಉದಯರಶ್ಮಿ ದಿನಪತ್ರಿಕೆ ಸಂಪಾದಕ ಇಂದುಶೇಖರ ಮಣೂರ ಹೇಳಿದರು.

ವಿಜಯಪುರ ನಗರದ ಆಶ್ರಮ ರಸ್ತೆಯ ರಾಮಕೃಷ್ಣ ನಗರದಲ್ಲಿ ಗಜಾನನ ಮಿತ್ರ ಮಂಡಳಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ವಿಶ್ವದಲ್ಲೇ ಮೊದಲ ಪ್ರಜಾಪ್ರಭುತ್ವದ ಚಿಂತನೆಗಳನ್ನು ನೀಡಿದವರು ಬಸವಣ್ಣನವರು ಎಂದರು. ವರ್ಗಭೇದ ಹಾಗೂ ವರ್ಣ ಶ್ರೇಷ್ಠತೆಯನ್ನು ತೊಡೆದು ಹಾಕಿದ ಬಸವ ಧರ್ಮದ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬಸವನ ಬಾಗೇವಾಡಿಯ ಕಾಂಗ್ರೆಸ್ ಮುಖಂಡ ಜಟ್ಟಿಂಗರಾಯ ಮಾಲಗಾರ ಮಾತನಾಡಿ, ಜಗತ್ತು ಕಂಡ ಮಹಾನ್ ದಾರ್ಶನಿಕ ಬಸವಣ್ಣನವರು ಕಾಯಕ, ದಾಸೋಹ, ಸಮಾನತೆ ಹಾಗೂ ಮಾನವತೆ ಎಂಬ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಅವರ ಹೆಸರಿನ “ಬಸವ ಸೇವಾ ಪ್ರಶಸ್ತಿ” ಪಡೆದ ಇಂದುಶೇಖರ ಮಣೂರ ಅವರನ್ನು ಗೌರವಿಸುತ್ತಿರುವುದು ಸಂತಸದ ಸಂಗತಿ ಎಂದರು.

ಬಿಜೆಪಿ ಮುಖಂಡ ಮಧು ಕಲಾದಗಿ ಹಾಗೂ ಉದ್ಯಮಿ ಸಂಜಯ ಪಾಟೀಲ ಮಾತನಾಡಿ, 12ನೇ ಶತಮಾನದಲ್ಲೇ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಮಚಂದ್ರ ಅಂಜಿಖಾನೆ, ಮನೋಜ ಕೊಂಡಗೂಳಿ, ವಿರೇಂದ್ರ ಬೆಳಮಗಿ, ಮಹಾದೇವ ಜಂಗಮಶೆಟ್ಟಿ, ಶ್ರೀಶೈಲ ಮಹಾದನಶೆಟ್ಟಿ, ಸುರೇಶ್ ಕುಲಕರ್ಣಿ, ನಿಂಬಾಳ ಕಾಕಾ, ಕಮಲಾಕರ ಪೀರನಾಯಕ, ಬಾಬು ಮಲಕಶೆಟ್ಟಿ, ಮಹೇಶ್ ಮಠ, ಮಾವಿನಗಿಡದ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande