ಮೋರಟಗಿ ದುರಂತ ; 20 ಲಕ್ಷ ಪರಿಹಾರ ಘೋಷಣೆ
ವಿಜಯಪುರ, 15 ಮೇ (ಹಿ.ಸ.) : ಆಂಕರ್ : ಮೊರಟಗಿ ದುರಂತ: ಮಳೆಗೆ ಮನೆ ಕುಸಿದು ನಾಲ್ವರು ಬಲಿ - ಬದುಕುಳಿದಿರುವ ಏಕೈಕ ಮಗುವಿನ ಪೋಷಣೆಗೆ ₹20 ಲಕ್ಷ ಪರಿಹಾರ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ತಿಳಿಸಿದರು. ವಿಜಯಪುರ ಜಿಲ್ಲೆ ಸಿಂದಗಿ ವಿಧಾನಸಭಾ ಕ್ಷೇತ್ರದ ಆಲಮೇಲ ತಾಲ್ಲೂಕಿನ ಮೊರಟಗಿ ಗ್
Durant


ವಿಜಯಪುರ, 15 ಮೇ (ಹಿ.ಸ.) :

ಆಂಕರ್ : ಮೊರಟಗಿ ದುರಂತ: ಮಳೆಗೆ ಮನೆ ಕುಸಿದು ನಾಲ್ವರು ಬಲಿ - ಬದುಕುಳಿದಿರುವ ಏಕೈಕ ಮಗುವಿನ ಪೋಷಣೆಗೆ ₹20 ಲಕ್ಷ ಪರಿಹಾರ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ತಿಳಿಸಿದರು.

ವಿಜಯಪುರ ಜಿಲ್ಲೆ ಸಿಂದಗಿ ವಿಧಾನಸಭಾ ಕ್ಷೇತ್ರದ ಆಲಮೇಲ ತಾಲ್ಲೂಕಿನ ಮೊರಟಗಿ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು, ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾದ ದಾರುಣ ಸುದ್ದಿ ಸುದ್ದಿ ನನ್ನ ಮನಕಲಕಿದೆ.

ಈ ದಿನ ಸ್ಥಳೀಯ ಶಾಸಕರಾದ ಶ್ರೀ ಅಶೋಕ ಮನಗೂಳಿ, ಮಾಜಿ ಶಾಸಕರಾದ ಶ್ರೀ ರಮೇಶ್ ಭೂಸನೂರ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದೆ. ತಕ್ಷಣದ ಪರಿಹಾರ ಹಾಗೂ ಅಗತ್ಯ ನೆರವು ಕಾರ್ಯಗಳನ್ನು ವೇಗವಾಗಿ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಕುಟುಂಬದ ಸದಸ್ಯರನ್ನು ಭೇಟಿಮಾಡಿ ಸಾಂತ್ವನ ಹೇಳಿದ್ದೇನೆ.

ಕುಟುಂಬದಲ್ಲಿ ಉಳಿದಿರುವ ಏಕೈಕ ಮಗುವಿನ ಭವಿಷ್ಯ ಕತ್ತಲೆಯಾಗದಂತೆ, ಅವನ ಹೆಸರಿನಲ್ಲಿ ₹20 ಲಕ್ಷಗಳ ಠೇವಣಿ ಇಡಲಾಗುವುದು. ಶಿಕ್ಷಣ, ಆರೈಕೆ ಹಾಗೂ ಉತ್ತಮ ಬದುಕಿಗಾಗಿ ಸರ್ಕಾರದಿಂದ ಅಗತ್ಯವಿರುವ ಎಲ್ಲ ನೆರವು ಮತ್ತು ಸೌಲಭ್ಯಗಳನ್ನು ಕಲ್ಪಿಸಲಾಗುವುದು.

ಅಕಾಲಿಕವಾಗಿ ಅಗಲಿದ ಆತ್ಮಗಳಿಗೆ ಭಗವಂತ ಚಿರಶಾಂತಿ ನೀಡಲಿ, ದುಃಖದ ಅಳಲಿನಲ್ಲಿ ಇರುವ ಕುಟುಂಬದ ಸದಸ್ಯರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಇಂತಹ ಹೃದಯವಿದ್ರಾವಕ ಘಟನೆಗಳು ಮತ್ತೆಂದೂ ಮರುಕಳಿಸದಿರಲಿ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande