ಕರವೇ ಹೋರಾಟಕ್ಕೆ ಸಂದ ಜಯ ; ಬಸವನಬಾಗೇವಾಡಿಗೆ ರಾತ್ರಿ ಬಸ್ ಸೇವೆ ಆರಂಭ
ವಿಜಯಪುರ, 13 ಮೇ (ಹಿ.ಸ.) : ಆಂಕರ್ : ಸಾರ್ವಜನಿಕರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣಕ್ಕೆ ಕೋಲಾರ, ದೇವರಹಿಪ್ಪರಗಿ ಹಾಗೂ ನಿಡಗುಂದಿ ತಾಲೂಕುಗಳಿಂದ ರಾತ್ರಿ 8 ಗಂಟೆಗೆ ಹೊಸ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಹಲವು ವರ್ಷಗಳಿಂದ ರಾತ್ರಿ ವೇಳೆಯಲ್ಲಿ ಬಸ್ ಸೌ
Bus


Bus


ವಿಜಯಪುರ, 13 ಮೇ (ಹಿ.ಸ.) :

ಆಂಕರ್ : ಸಾರ್ವಜನಿಕರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ, ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣಕ್ಕೆ ಕೋಲಾರ, ದೇವರಹಿಪ್ಪರಗಿ ಹಾಗೂ ನಿಡಗುಂದಿ ತಾಲೂಕುಗಳಿಂದ ರಾತ್ರಿ 8 ಗಂಟೆಗೆ ಹೊಸ ಬಸ್ ಸೇವೆಯನ್ನು ಪ್ರಾರಂಭಿಸಲಾಗಿದೆ.

ಹಲವು ವರ್ಷಗಳಿಂದ ರಾತ್ರಿ ವೇಳೆಯಲ್ಲಿ ಬಸ್ ಸೌಲಭ್ಯ ಇಲ್ಲದೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಇದೀಗ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹೋರಾಟದಿಂದ ಜನರಿಗೆ ಮಹತ್ವದ ಸೌಲಭ್ಯ ದೊರೆತಿದೆ.

ಕೋಲಾರ ತಾಲೂಕಿನಿಂದ ಬಸವನಬಾಗೇವಾಡಿಗೆ ರಾತ್ರಿ ವೇಳೆಯಲ್ಲಿ ಬಸ್ ಸೌಲಭ್ಯ ಇಲ್ಲದ ಕಾರಣ ರೈತರು, ಅಂಗವಿಕಲರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ದಿನನಿತ್ಯ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ಇದೇ ರೀತಿಯಾಗಿ ದೇವರಹಿಪ್ಪರಗಿ ಮತ್ತು ನಿಡಗುಂದಿ ತಾಲೂಕುಗಳ ಜನರೂ ರಾತ್ರಿ ವೇಳೆಯಲ್ಲಿ ಸಂಚಾರಕ್ಕೆ ಪರದಾಡುತ್ತಿದ್ದರು. ಈ ಸಮಸ್ಯೆಯನ್ನು ಮನಗಂಡ ಸಾರ್ವಜನಿಕರು ಕರವೇ ಸಂಘಟನೆಯ ಮುಖಂಡರಿಗೆ ಮನವಿ ಸಲ್ಲಿಸಿದ್ದರು.

ಸಾರ್ವಜನಿಕರ ಮನವಿಗೆ ತಕ್ಷಣ ಸ್ಪಂದಿಸಿದ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಅವಳಿ ಜಿಲ್ಲಾ ಉಸ್ತುವಾರಿ ಅಶೋಕ ಹಾರಿವಾಳ ಅವರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಸಮಸ್ಯೆಯನ್ನು ತಂದಿದ್ದರು. ನಿರಂತರ ಹೋರಾಟ, ಮನವಿ ಹಾಗೂ ಅಧಿಕಾರಿಗಳೊಂದಿಗೆ ನಡೆದ ಚರ್ಚೆಗಳ ಫಲವಾಗಿ ದಿನಾಂಕ 5-5-2026ರಿಂದ ಮೂರು ತಾಲೂಕುಗಳಿಂದ ಬಸವನಬಾಗೇವಾಡಿ ಪಟ್ಟಣಕ್ಕೆ ರಾತ್ರಿ 8 ಗಂಟೆಗೆ ಬಸ್ ಸೇವೆ ಪ್ರಾರಂಭವಾಗಿದೆ.

ಈ ಹೊಸ ಬಸ್ ಸೇವೆಯಿಂದ ಗ್ರಾಮೀಣ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಆಸ್ಪತ್ರೆಗೆ ಅಥವಾ ಉದ್ಯೋಗದ ನಿಮಿತ್ತ ಪ್ರಯಾಣಿಸುವವರಿಗೆ ಸುರಕ್ಷಿತ ಹಾಗೂ ಸಮಯೋಚಿತ ಸಾರಿಗೆ ವ್ಯವಸ್ಥೆ ಲಭ್ಯವಾಗಲಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಅವಳಿ ಜಿಲ್ಲಾ ಉಸ್ತುವಾರಿ ಅಶೋಕ ಹಾರಿವಾಳ ಅವರು ಮಾತನಾಡಿ, “ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಕೆಲಸವನ್ನು ಕರವೇ ಮಾಡುತ್ತಿದೆ. ಹಲವು ವರ್ಷಗಳ ಬೇಡಿಕೆಯಾಗಿದ್ದ ರಾತ್ರಿ ಬಸ್ ಸೇವೆ ಆರಂಭವಾಗಿರುವುದು ಜನರ ಹೋರಾಟದ ಗೆಲುವಾಗಿದೆ. ಈ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು,” ಎಂದು ಹೇಳಿದರು.

ಇದೇ ವೇಳೆ ಕರವೇ ಸಂಘಟನೆ ಪರವಾಗಿ ವಿಜಯಪುರ ಜಿಲ್ಲಾ ಮುಖ್ಯ ವ್ಯವಸ್ಥಾಪಕರು, ಬಸವನಬಾಗೇವಾಡಿಯ ಎಲ್ಲಾ ಡಿಪೋ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande